ಮೇಷ ರಾಶಿ: ಆಹಾರ ಕ್ಷೇತ್ರದಲ್ಲಿ ಇರುವವರಿಗೆ ಉದ್ಯಮದಲ್ಲಿ ಹೊಸ ತಿರುವು ಸಿಗಲಿದೆ. ಇಂದು ಶ್ರಮವಹಿಸಿ ಕೆಲಸ ಮಾಡಲಿದ್ದೀರಿ, ಧನಾತ್ಮಕ ಚಿಂತನೆ ಬೆಳೆಸಿಕೊಳ್ಳುವುದು ಒಳಿತು.ವಯೋಸಹಜ ಆರೋಗ್ಯ ಸಮಸ್ಯೆ ಕೊರಗಿಸಬಹುದು. ಸಂಗಾತಿಯ ಅಗಲಿಕೆ ಬೇಸರ ತರಲಿದ್ದು, ಮಾತಿನ ಮೇಲೆ ನಿಯಂತ್ರಣವಿರಲಿ. ಉಪದೇಶಕ್ಕಿಂತ ಆಚರಣೆ ಮೇಲು.
ವೃಷಭ ರಾಶಿ; ಅಚಾತುರ್ಯ ಮತ್ತು ಆಲಸ್ಯದಿಂದ ಕೆಲಸಗಳಲ್ಲಿ ಅಡೆತಡೆ ಉಂಟಾಗಬಹುದು.ಇತರರು ನಿಮ್ಮ ವಿಷಯದಲ್ಲಿ ಮಧ್ಯಪ್ರವೇಶಿಸುವುದು ಸಿಟ್ಟು ತರಿಸಬಹುದು. ಕಳೆದುಕೊಂಡ ಹಳೆಯ ಸಂಬಂಧಗಳು ಮತ್ತೆ ಚಿಗುರಲಿವೆ. ವ್ಯಾಪಾರಸ್ಥರಿಗೆ ಕೊಂಚ ಆಲಸ್ಯ ಇರಲಿದ್ದು, ನಿಮಗಾಗಿ ಇಷ್ಟದ ವಸ್ತುಗಳನ್ನು ಕೊಳ್ಳುವಿರಿ.
ಮಿಥುನ ರಾಶಿ: ತಂತ್ರಜ್ಞರಿಗೆ (Technicians) ಅತ್ಯುತ್ತಮ ಉದ್ಯೋಗಾವಕಾಶ ಲಭಿಸಲಿದೆ. ಒಂದೇ ಕೆಲಸದಿಂದ ಎರಡು ರೀತಿಯ ಪ್ರಯೋಜನ ಪಡೆಯುವಿರಿ. ಬಂಧುಗಳ ಒಡನಾಟ ಹೆಚ್ಚಲಿದೆ. ಭೂಮಿ ವ್ಯವಹಾರ ಸುಲಭವಾಗಿ ಕೈಗೂಡದು. ಉದ್ವೇಗಕ್ಕೆ ಒಳಗಾಗಿ ಮಾತನಾಡುವುದನ್ನು ನಿಯಂತ್ರಿಸಿ.
ಕರ್ಕಾಟಕ ರಾಶಿ: ಹಣ ಗಳಿಸುವ ಆಸೆ ಹೆಚ್ಚಿದ್ದರೂ ಸೂಕ್ತ ದಾರಿಗಳು ಕಾಣದೆ ಅಲ್ಪಾದಾಯದಲ್ಲೇ ತೃಪ್ತಿಪಡಬೇಕಾಗಬಹುದು.ಕುಟುಂಬಸ್ಥರಲ್ಲಿ ನಿಮ್ಮ ಬಗ್ಗೆ ಉತ್ತಮ ಬದಲಾವಣೆ ಕಾಣಲಿದೆ. ಮಕ್ಕಳು ಕೆಲಸಕ್ಕೆ ಅಡಚಣೆ ತರಬಹುದು. ಕೆಟ್ಟ ಆಲೋಚನೆಗಳನ್ನು ಬಿಟ್ಟು ಸರಿಯಾದ ಹಾದಿಯಲ್ಲಿ ಗಮನಹರಿಸಿ, ಮರಣಭಯವನ್ನು ಮನಸ್ಸಿನಿಂದ ತೆಗೆದುಹಾಕಿ.
ಸಿಂಹ ರಾಶಿ: ಇತರರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲಿದ್ದೀರಿ. ಹೊಸ ಸ್ನೇಹ ಬೆಳೆಯಲಿದೆ.ಹೊರಗಡೆ ಸುತ್ತಾಡಲು ಹೋಗುವಿರಿ; ಅಪರಿಚಿತ ಸ್ಥಳದಲ್ಲೂ ಆಪ್ತರ ಭೇಟಿಯಾಗಲಿದೆ.ಕಷ್ಟಪಟ್ಟು ಗಳಿಸಿದ ಹಣ ಖರ್ಚು ಮಾಡಲು ಮನಸ್ಸು ಬಾರದು. ಇತರರನ್ನು ಅನುಕರಿಸುವ ಸ್ವಭಾವ ಬಿಡುವುದು ಒಳಿತು.
ಕನ್ಯಾ ರಾಶಿ: ಗೃಹೋಪಯೋಗಿ ವ್ಯಾಪಾರ ಮಂದಗತಿಯಲ್ಲಿದ್ದರೂ, ಯಂತ್ರೋಪಕರಣಗಳ (Machinery) ಮಾರಾಟಗಾರರಿಗೆ ಭಾರಿ ಲಾಭ.ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಪ್ರಗತಿ ಕಾಣುವಿರಿ. ಸಂಗಾತಿಯೊಂದಿಗೆ ಚರ್ಚಿಸಿ ಪ್ರಮುಖ ನಿರ್ಧಾರ ಕೈಗೊಳ್ಳಿ.ಕೆಲಸದ ಸ್ಥಳದಲ್ಲಿ ಎಲ್ಲರನ್ನೂ ನಿಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಮನಸ್ಥಿತಿ ಬಿಡುವುದು ಒಳ್ಳೆಯದು.
ತುಲಾ ರಾಶಿ: ನಿನ್ನೆಯ ಆಯಾಸದಿಂದ ಹೊರಬರಲು ಇಂದು ವಿಶ್ರಾಂತಿ ಪಡೆಯುವಿರಿ.ಮಂಗಳಕರ ಕಾರ್ಯಗಳನ್ನು ಆರಂಭಿಸಲು ಇಂದು ಅತ್ಯಂತ ಪ್ರಶಸ್ತವಾದ ದಿನ. ಸಹನೆ ಕಳೆದುಕೊಳ್ಳುವ ಸಂದರ್ಭ ಬರಬಹುದು, ಎಚ್ಚರವಿರಲಿ. ಸ್ನೇಹಿತರೊಂದಿಗೆ ಪ್ರವಾಸದ ಯೋಜನೆ ರೂಪಿಸುವಿರಿ.
ವೃಶ್ಚಿಕ ರಾಶಿ: ಪ್ರಸ್ತುತ ಕೆಲಸ ಬಿಟ್ಟು ಸ್ವಂತ ಉದ್ಯೋಗ (Business) ಆರಂಭಿಸಲು ಮನಸ್ಸು ಒಲಿಯಲಿದೆ.ಹಣವಿದ್ದರೂ ವಾಹನ ಯೋಗ ದೂರವಿದೆ. ಬೆಲೆಬಾಳುವ ವಸ್ತುಗಳು ಕಳ್ಳತನವಾಗುವ ಅಭಾವವಿದ್ದು, ಮನೆಯಲ್ಲಿ ಕಲಹವಾಗಬಹುದು.ವೈಯಕ್ತಿಕ ವಿಚಾರಗಳಲ್ಲಿ ಯಾರನ್ನೂ ಸೇರಿಸಿಕೊಳ್ಳಲು ಬಯಸುವುದಿಲ್ಲ. ಅತಿಯಾಗಿ ದೇಹ ದಂಡಿಸಬೇಡಿ.
ಧನು ರಾಶಿ: ಆಸ್ತಿ ವಿಚಾರದಲ್ಲಿ ನೆರೆಹೊರೆಯವರೊಂದಿಗೆ ಅಸಮಾಧಾನ ಮೂಡಬಹುದು.ಸಂಗಾತಿಯೊಂದಿಗೆ ಶುಭ ಸಮಾರಂಭದಲ್ಲಿ ಭಾಗಿ. ಸ್ನೇಹಿತರಿಂದ ಸಾಲ ಪಡೆಯುವ ಸಾಧ್ಯತೆ ಇದೆ. ಸುವ್ಯವಸ್ಥಿತ ಭವಿಷ್ಯದ ಕನಸು ಕಾಣುವಿರಿ. ಪೂರ್ವಿಕರ ಆಸ್ತಿ ವಿಚಾರದಲ್ಲಿ ಶುಭ ಫಲಗಳಿವೆ.
ಮಕರ ರಾಶಿ: ನೀವು ಬಯಸಿದ ವಸ್ತು ಅನಾಯಾಸವಾಗಿ ದೊರೆಯಲಿದೆ. ನಿಮ್ಮ ಸಂತೋಷ ನಿಮ್ಮ ಕೈಯಲ್ಲೇ ಇದೆ ಎಂಬುದನ್ನು ಅರಿಯಿರಿ.ಒಂದು ಜವಾಬ್ದಾರಿ ತೀರಿದ ತಕ್ಷಣವೇ ಮತ್ತೊಂದು ಜವಾಬ್ದಾರಿ ಹೆಗಲೇರಲಿದೆ. ಕುಟುಂಬದವರ ಮಾತನ್ನು ಅಲಕ್ಷಿಸಬೇಡಿ. ಅನಗತ್ಯ ಚಿಂತನೆಯಿಂದ ಆತ್ಮವಿಶ್ವಾಸವನ್ನು ಹಾಳುಮಾಡಿಕೊಳ್ಳದಿರಿ.
ಕುಂಭ ರಾಶಿ: ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿಮ್ಮ ಸ್ವಂತ ನಿರ್ಧಾರಕ್ಕೆ ಬದ್ಧರಾಗಿರುವಿರಿ.ದುಃಖದಲ್ಲಿದ್ದವರಿಗೆ ಆಪ್ತರ ಜೊತೆಗಿನ ಮಾತುಕತೆಯಿಂದ ಸಮಾಧಾನ ಸಿಗಲಿದೆ.ಇಂದು ಸೌಂದರ್ಯವರ್ಧನೆಗೆ ಹೆಚ್ಚು ಒತ್ತು ನೀಡುವಿರಿ. ಪರೀಕ್ಷೆಯ ಕಾಲವಾಗಿದ್ದು, ಧೈರ್ಯಗೆಡಬೇಡಿ.
ಮೀನ ರಾಶಿ: ಕಡಿಮೆ ವೆಚ್ಚದಲ್ಲಿ ಹೆಚ್ಚು ಸಂಪಾದಿಸುವ ಹೊಸ ಐಡಿಯಾ ಅಥವಾ ಯೋಜನೆ ಹೊಳೆಯಲಿದೆ. ನಿಮ್ಮ ಪ್ರೇಮ ವಿಚಾರ ಇಂದು ಇತರರಿಗೆ ಬಹಿರಂಗವಾಗುವ ಸಾಧ್ಯತೆ ಇದೆ.ಅನಗತ್ಯ ಯೋಚನೆಗಳು ಮನಸ್ಸನ್ನು ಕಾಡಬಹುದು, ಪ್ರೀತಿಪಾತ್ರರಿಗಾಗಿ ಸಮಯ ವ್ಯರ್ಥ ಮಾಡುವಿರಿ.

