ದಿನ ಭವಿಷ್ಯ: ಸಿಂಹ ರಾಶಿಗೆ ವಾಹನ ಯೋಗ, ಮೀನ ರಾಶಿಯವರಿಗೆ ನಿರೀಕ್ಷೆ ಮೀರಿದ ಧನಲಾಭ!

ಮೇಷ: ಆರ್ಥಿಕ ಏರುಪೇರಿನಿಂದ ಕುಟುಂಬದಲ್ಲಿ ಅಸ್ಥಿರತೆ ಇರಲಿದೆ. ಹೂಡಿಕೆಗೆ ಇದು ಪೂರಕ ದಿನವಲ್ಲ.

ವೃಷಭ: ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಉದ್ಯಮಿಗಳಿಗೆ ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ.

ಮಿಥುನ: ಆರೋಗ್ಯ ಉತ್ತಮವಾಗಿರುತ್ತದೆ. ಉದ್ಯಮಿಗಳು ವ್ಯವಹಾರ ವಿಸ್ತರಣೆಗಾಗಿ ಪ್ರಯಾಣ ಬೆಳೆಸಬಹುದು.

ಕರ್ಕಾಟಕ: ಶೈಕ್ಷಣಿಕ ಕ್ಷೇತ್ರದಲ್ಲಿ ಯಶಸ್ಸು ಸಿಗಲಿದೆ. ಸಾಲವಾಗಿ ನೀಡಿದ್ದ ಹಣ ಮರಳಿ ಪಡೆಯುವ ಸಾಧ್ಯತೆಯಿದೆ.

ಸಿಂಹ: ಹೊಸ ವಾಹನ ಖರೀದಿಸುವ ಯೋಗವಿದೆ. ಒತ್ತಡಗಳಿಂದ ಮುಕ್ತಿ ಸಿಗಲಿದ್ದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ.

ಕನ್ಯಾ: ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಕಠಿಣ ಪರಿಶ್ರಮದಿಂದ ಲಾಭವಾಗಲಿದೆ. ಮಕ್ಕಳಿಂದ ಶುಭ ವಾರ್ತೆ ಕೇಳುವಿರಿ.

ತುಲಾ: ಹೊಸ ಕೆಲಸಗಳಿಗೆ ಕೈ ಹಾಕಲು ಉತ್ತಮ ದಿನ. ಆರೋಗ್ಯದ ಬಗ್ಗೆ ಕಾಳಜಿ ಇರಲಿ ಹಾಗೂ ಖರ್ಚುಗಳ ಮೇಲೆ ನಿಯಂತ್ರಣವಿರಲಿ.

ವೃಶ್ಚಿಕ: ಸಮಾಜದಲ್ಲಿ ಗೌರವ ಹೆಚ್ಚಾಗಲಿದೆ. ಧನಾತ್ಮಕ ಚಿಂತನೆಗಳಿಂದ ಯಶಸ್ಸು ನಿಮ್ಮದಾಗಲಿದೆ.

ಧನುಸ್ಸು: ಖರ್ಚುಗಳು ಆದಾಯಕ್ಕಿಂತ ಹೆಚ್ಚಾಗಬಹುದು. ಹೊಸ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ.

ಮಕರ: ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ದಾಂಪತ್ಯದಲ್ಲಿ ಸಣ್ಣಪುಟ್ಟ ಕಿರಿಕಿರಿ ಉಂಟಾಗಬಹುದು.

ಕುಂಭ: ಮಾನಸಿಕ ಚಿಂತೆಗಳಿಂದ ಮುಕ್ತಿ ದೊರೆಯಲಿದೆ. ಅನಾರೋಗ್ಯದ ಕಾರಣ ದೂರ ಪ್ರಯಾಣ ಮಾಡಬೇಕಾಗಬಹುದು.

ಮೀನ: ನಿರೀಕ್ಷೆಗಿಂತ ಹೆಚ್ಚಿನ ಧನಲಾಭವಾಗಲಿದೆ. ಉನ್ನತ ಸ್ಥಾನಮಾನ ದೊರೆಯುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು