ಮೇಷ ರಾಶಿ
ವ್ಯಾಪಾರ ಕ್ಷೇತ್ರದಲ್ಲಿ ಇವತ್ತು ಆದಾಯದಲ್ಲಿ ಏರುಪೇರು ಎದುರಾಗಬಹುದು, ಧೃತಿಗೆಡದೆ ಆತ್ಮಸ್ಥೈರ್ಯದಿಂದ ಮುನ್ನಡೆಯಿರಿ. ಉದ್ಯೋಗಸ್ಥರಿಗೆ ಕೆಲಸದ ಒತ್ತಡ ಹೆಚ್ಚಾಗಲಿದ್ದು, ಕುಟುಂಬದಲ್ಲಿ ಹಿರಿಯರ ಸಲಹೆಗಳಿಗೆ ಗೌರವ ನೀಡುವುದು ಉತ್ತಮ. ಆರ್ಥಿಕ ನಿರ್ವಹಣೆಯಲ್ಲಿ ಜಾಗರೂಕತೆ ಇರಲಿ; ಅಪರಿಚಿತರನ್ನು ಅತಿಯಾಗಿ ನಂಬಿದರೆ ಹಣ ಕಳೆದುಕೊಳ್ಳುವ ಭೀತಿಯಿದೆ. ವೈವಾಹಿಕ ಜೀವನದ ಹಳೆಯ ಮಧುರ ನೆನಪುಗಳು ಇಂದು ನಿಮ್ಮ ಮನಸ್ಸಿಗೆ ಆನಂದ ನೀಡಲಿವೆ. ನಿಮ್ಮ ಪ್ರೀತಿಯ ವಸ್ತುವನ್ನು ಇತರರಿಗೆ ಉಡುಗೊರೆಯಾಗಿ ನೀಡಲು ಇಚ್ಛಿಸುವಿರಿ.
ವೃಷಭ ರಾಶಿ (Taurus)
ನಿಮ್ಮ ವೃತ್ತಿರಂಗದ ಕೆಲಸಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವುದು ಇಂದು ನಿಮಗೆ ಶ್ರೀರಕ್ಷೆಯಾಗಲಿದೆ, ಏಕೆಂದರೆ ನಿಮ್ಮ ಸಾಮರ್ಥ್ಯಕ್ಕೆ ಪರೀಕ್ಷೆ ಎದುರಾಗಬಹುದು. ಆಪ್ತರೇ ನಿಮ್ಮನ್ನು ಸಾರ್ವಜನಿಕವಾಗಿ ಟೀಕಿಸುವ ಸಾಧ್ಯತೆಯಿರುವುದರಿಂದ, ಯಾರನ್ನೂ ಅತಿಯಾಗಿ ಅವಲಂಬಿಸಿ ಹೊಸ ಯೋಜನೆಗಳನ್ನು ಘೋಷಿಸಬೇಡಿ. ಕೇವಲ ಇತರರನ್ನು ಮೆಚ್ಚಿಸುವುದಕ್ಕಾಗಿ ಕೆಲಸ ಮಾಡಬೇಕಾಗಿ ಬರಬಹುದು. ಪ್ರತಿಯೊಂದನ್ನೂ ನಿಮ್ಮ ಮೂಗಿನ ನೇರಕ್ಕೇ ನೋಡುವುದು ಸರಿಯಲ್ಲ. ನಿಮ್ಮ ಪಾರದರ್ಶಕತೆ ಹಾಗೂ ಸಕಾರಾತ್ಮಕ ನಿಲುವು ಇಂದು ಹಲವರ ಮೆಚ್ಚುಗೆಗೆ ಪಾತ್ರವಾಗಲಿದೆ.
ಮಿಥುನ ರಾಶಿ (Gemini)
ಸರ್ಕಾರಿ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಲು ಇಂದಿನ ದಿನ ಅತ್ಯಂತ ಪ್ರಶಸ್ತವಾಗಿದೆ. ಸಾಮಾಜಿಕವಾಗಿ ಗೌರವ ವೃದ್ಧಿಸಲಿದ್ದು, ಸಂಬಂಧಿಕರಿಂದ ಉತ್ತಮ ಬೆಂಬಲ ಸಿಗಲಿದೆ. ಆದರೆ, ಮಹತ್ವದ ನಿರ್ಧಾರಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಡವುವ ಸಾಧ್ಯತೆಯಿದೆ, ಎಚ್ಚರವಿರಲಿ. ಇಂದು ನಿಮ್ಮ ಮಾತಿನಿಂದಲೇ ನಷ್ಟ ಅಥವಾ ಕಷ್ಟಗಳು ಎದುರಾಗುವ ಸಂಭವವಿರುವುದರಿಂದ ಆಲೋಚಿಸಿ ಮಾತನಾಡಿ. ವ್ಯಾಪಾರಸ್ಥರಿಗೆ ಸುಲಭವಾಗಿ ಲಾಭ ಗಳಿಸುವುದು ಇವತ್ತು ಕೊಂಚ ಕಷ್ಟವೆನಿಸಬಹುದು. ನಿಮ್ಮ ಕೆಲಸಗಳನ್ನು ನೀವೇ ಖುದ್ದಾಗಿ ನಿರ್ವಹಿಸುವುದು ಒಳಿತು.
ಕರ್ಕಾಟಕ ರಾಶಿ (Cancer)
ನಿಮ್ಮ ನಿರಂತರ ಶ್ರದ್ಧೆ ಮತ್ತು ಕಠಿಣ ಪರಿಶ್ರಮಕ್ಕೆ ಇಂದು ತಕ್ಕ ಫಲ ಸಿಗಲಿದೆ. ಹಿರಿಯರೊಂದಿಗೆ ನಡೆಸುವ ಮಾತುಕತೆಗಳು ನಿಮ್ಮ ಭವಿಷ್ಯಕ್ಕೆ ಉತ್ತಮ ಮಾರ್ಗಸೂಚಿಯಾಗಲಿವೆ. ಸ್ನೇಹಿತರು ಹಾಗೂ ಕುಟುಂಬಸ್ಥರಿಂದ ಪೂರ್ಣ ಬೆಂಬಲ ಸಿಗಲಿದ್ದು, ಮನೆಯಲ್ಲಿ ನೆಮ್ಮದಿ ಇರಲಿದೆ. ಹಣಕಾಸಿನ ಲೆಕ್ಕಪತ್ರಗಳನ್ನು ಅತ್ಯಂತ ಸರಿಯಾಗಿ ಇಟ್ಟುಕೊಳ್ಳಿ. ಹೊಸದಾಗಿ ವಿದ್ಯಾಭ್ಯಾಸ ಮುಗಿಸಿದ ಯುವಕರಿಗೆ ತಕ್ಷಣ ಉದ್ಯೋಗ ಸಿಗುವುದು ಸ್ವಲ್ಪ ಕಷ್ಟವಾಗಬಹುದು. ಧಾರ್ಮಿಕ ಕಾರ್ಯಗಳಲ್ಲಿ ಶ್ರದ್ಧೆ ವಹಿಸಿ. ಉದ್ಯಮ ರಂಗದಲ್ಲಿ ಹೊಸ ಶತ್ರುಗಳು ಹುಟ್ಟಿಕೊಳ್ಳುವ ಸಾಧ್ಯತೆಯಿದೆ.
ಸಿಂಹ ರಾಶಿ (Leo)
ಉದ್ಯೋಗದ ಭವಿಷ್ಯದ ಬಗೆಗಿನ ಚಿಂತೆಗಳು ಇಂದು ನಿಮ್ಮನ್ನು ತೀವ್ರವಾಗಿ ಕಾಡಬಹುದು. ಆರ್ಥಿಕ ವಿಚಾರಗಳಲ್ಲಿ ಇಂದು ಉತ್ತಮ ಲಾಭ ಕಾಯ್ದಿರಿಸಿದ್ದು, ವಿದೇಶದಿಂದ ಶುಭ ವಾರ್ತೆಗಳು ಬರಲಿವೆ. ಸಂಗಾತಿಯೊಂದಿಗಿನ ಸಮಯ ಆನಂದದಾಯಕವಾಗಿರಲಿದ್ದು, ಮಕ್ಕಳಿಂದ ಸಂತೋಷ ಸಿಗಲಿದೆ. ಆರೋಗ್ಯದ ಸ್ಥಿತಿ ಉತ್ತಮವಾಗಿದ್ದು, ಉತ್ಸಾಹದಿಂದ ಇರಲಿದ್ದೀರಿ. ಮಾತನಾಡುವಾಗ ಸ್ಪಷ್ಟತೆ ಇರಲಿ ಹಾಗೂ ಕುಳಿತಲ್ಲೇ ಕಾಲಹರಣ ಮಾಡದೆ ಕಾರ್ಯಪ್ರವೃತ್ತರಾಗಿ. ಬಂಧುಗಳ ನಡವಳಿಕೆಯಿಂದ ನಿಮ್ಮಲ್ಲಿ ನಂಬಿಕೆ ಕಡಿಮೆಯಾಗಬಹುದು ಹಾಗೂ ಸಿಕ್ಕ ಅನಾದರದಿಂದ ಮನಸ್ಸಿಗೆ ಬೇಸರವಾಗಬಹುದು.
ಕನ್ಯಾ ರಾಶಿ (Virgo)
ಇಂದು ಮನಸ್ಸು ಅಸ್ಥಿರತೆಯಿಂದ ಕೂಡಿದ್ದರೆ ಧ್ಯಾನದ (Meditation) ಮೊರೆ ಹೋಗಿ ಮನಸ್ಸಿಗೆ ಶಾಂತಿ ತಂದುಕೊಳ್ಳಿ. ಕಚೇರಿ ಕೆಲಸಗಳಲ್ಲಿ ಹಾಗೂ ನಿರೀಕ್ಷಿತ ಹಣ ಕೈಸೇರುವುದರಲ್ಲಿ ಕೊಂಚ ವಿಳಂಬ ಉಂಟಾಗಬಹುದು. ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಇಂದು ಪ್ರಯತ್ನ ನಡೆಸಲಿದ್ದೀರಿ. ಹಿಂದೆಂದೋ ಮಾಡಿದ ಹೂಡಿಕೆಗಳು ಇಂದು ನಿಮ್ಮ ಕೈಹಿಡಿಯಲಿವೆ. ಪ್ರೇಮಿಗಳು ತಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಯೋಚಿಸುವರು. ಪ್ರತಿಯೊಂದಕ್ಕೂ ಇತರರ ಮೇಲೆ ಗೂಬೆ ಕೂರಿಸುವ ಗುಣವಿದ್ದರೆ, ಇವತ್ತು ಯಾವುದೇ ಕಾರ್ಯ ಸಫಲವಾಗದು.
ತುಲಾ ರಾಶಿ (Libra)
ವೃತ್ತಿಪರ ಜೀವನದಲ್ಲಿ ಆತ್ಮವಿಮರ್ಶೆ ಮಾಡಿಕೊಳ್ಳಲು ಇಂದು ಸೂಕ್ತ ಅವಕಾಶ ಸಿಗಲಿದೆ. ಯಾವುದೇ ಗಂಭೀರ ಸಮಸ್ಯೆಗಳಿದ್ದರೂ ಸಂಗಾತಿಯೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳುವುದು ಉತ್ತಮ. ಆರೋಗ್ಯದಲ್ಲಿ ಕೊಂಚ ಬಳಲಿಕೆ ಕಂಡುಬರಬಹುದು, ವಿಶ್ರಾಂತಿ ಅಗತ್ಯ. ಹಿಂದೆ ನೀವು ಮಾಡಿದ ಸಾಮಾಜಿಕ ಸೇವೆಗಳಿಗೆ ಇಂದು ಗೌರವ ಸಿಗಲಿದೆ. ನೂತನ ಜಾಗ ಅಥವಾ ಆಸ್ತಿ ಖರೀದಿಸುವ ಯೋಗವಿದೆ. ನಿಮಗಾಗಿ ಒಂದು ಸ್ವಂತ ಬಳಗವನ್ನು ಸೃಷ್ಟಿಸಿಕೊಳ್ಳಲಿದ್ದೀರಿ. ಆದರೆ, ದಾಯಾದಿ ಕಲಹಗಳು ಇಂದು ತಾರಕಕ್ಕೇರುವ ಸಾಧ್ಯತೆಯಿರುವುದರಿಂದ ಜಾಗ್ರತೆ ವಹಿಸಿ.
ವೃಶ್ಚಿಕ ರಾಶಿ (Scorpio)
ನಿಮ್ಮ ಅದಮ್ಯ ಆತ್ಮವಿಶ್ವಾಸವೇ ಇಂದು ಎಲ್ಲಾ ಕಠಿಣ ಕೆಲಸಗಳನ್ನು ಸುಲಭವಾಗಿ ಮುಗಿಸಲು ನೆರವಾಗಲಿದೆ. ಹೊಸ ಯೋಜನೆಗಳ ಹುಡುಕಾಟ ಯಶಸ್ವಿಯಾಗಲಿದ್ದು, ಸರ್ಕಾರಿ ಕೆಲಸಗಳು ಸುಲಭವಾಗಿ ಹೊಂದಿಕೆಯಾಗಲಿವೆ. ಆರ್ಥಿಕ ಸ್ಥಿತಿ ದಿನಕಳೆದಂತೆ ಚಿಗುರಲಿದ್ದು, ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಿ. ಸಾಮಾಜಿಕವಾಗಿ ಒಳ್ಳೆಯ ಹೆಸರು ಬರಲಿದ್ದು, ಸಂಬಂಧಿಕರ ಬೆಂಬಲ ಸಿಗಲಿದೆ. ಪ್ರಯಾಣ ಅನಿವಾರ್ಯವಿದ್ದರೆ ಮಾತ್ರ ಮಾಡಿ. ಆಲಸ್ಯತನ ನಿಮ್ಮ ಕೆಲಸಗಳನ್ನು ಕೆಡಿಸದಂತೆ ಸೂಕ್ತ ತೀರ್ಮಾನ ತಗೊಳ್ಳಿ. ನಾಟಕೀಯ ನಡವಳಿಕೆಯಿಂದ ಹೊರಬಂದರೆ ಒಳ್ಳೆಯದು.
ಧನು ರಾಶಿ (Sagittarius)
ಉದ್ಯೋಗ ಕ್ಷೇತ್ರದಲ್ಲಿ ಇಂದು ಸಹೋದ್ಯೋಗಿಗಳ ಜೊತೆ ಸಮನ್ವಯತೆ ಮತ್ತು ಹೊಂದಾಣಿಕೆ ಅತ್ಯಗತ್ಯ. ವ್ಯಾಪಾರದ ಲಾಭದಲ್ಲಿ ಏರುಪೇರುಗಳಿದ್ದರೂ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ಕೆಲಸದ ಒತ್ತಡ ಹೆಚ್ಚಾಗಲಿದ್ದು, ಕುಟುಂಬದಲ್ಲಿ ಹಿರಿಯರ ಮಾತುಗಳಿಗೆ ಕಿವಿಗೊಡಿ. ಹಣದ ನಿರ್ವಹಣೆಯನ್ನು ಸಾವಧಾನದಿಂದ ಮಾಡುವುದು ಸೂಕ್ತ. ನೀವು ಎಷ್ಟೇ ಸರಿಯಾಗಿ ನಡೆದುಕೊಂಡರೂ ಇತರರಿಗೆ ಅದು ತಪ್ಪಾಗಿ ಕಾಣಿಸುವ ಸಾಧ್ಯತೆಯಿದೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಹೆಚ್ಚಾಗುವ ಮುನ್ಸೂಚನೆ ಇದ್ದು, ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿ.
ಮಕರ ರಾಶಿ (Capricorn)
ಇಂದು ಕಚೇರಿಯಲ್ಲಿ ಅಥವಾ ಮನೆಯಲ್ಲಿ ನಡೆಯುವ ತಪ್ಪುಗಳಿಗೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲು ಕೆಲವರು ಯತ್ನಿಸಬಹುದು, ಎಚ್ಚರವಿರಲಿ. ಮಿತ್ರರಿಂದ ಹೊಸ ಉದ್ಯಮದ ಯೋಜನೆಗಳ ಬಗ್ಗೆ ಪ್ರಮುಖ ಮಾಹಿತಿ ಸಿಗಲಿದೆ. ಹಳೆಯ ಸಾಲಗಳನ್ನು ತೀರಿಸಲು ಉತ್ತಮ ಅವಕಾಶಗಳು ಒದಗಿ ಬರಲಿವೆ. ವ್ಯಾಪಾರಿಗಳಿಗೆ ಇದು ಅತ್ಯಂತ ಲಾಭದಾಯಕ ಸಮಯ. ನೂತನ ವಸ್ತುಗಳನ್ನು ಖರೀದಿಸುವಿರಿ ಹಾಗೂ ಮಕ್ಕಳಿಂದ ಮನೆಯಲ್ಲಿ ಸಂತೋಷ ಇರಲಿದೆ. ಸ್ವಂತ ಉದ್ಯಮಿಗಳಿಗೆ ಕಾರ್ಮಿಕರ ಕೊರತೆ ಎದುರಾಗಬಹುದು. ಸಂಗಾತಿಯ ನೋವಿಗೆ ಸ್ಪಂದಿಸಲು ಮರೆಯಬೇಡಿ.
ಕುಂಭ ರಾಶಿ (Aquarius)
ಹೊಸ ಮನೆ ಖರೀದಿಸುವ ವಿಚಾರವು ಇವತ್ತು ಕುಟುಂಬದಲ್ಲಿ ಗಂಭೀರ ಚರ್ಚೆಗೆ ಬರಲಿದೆ. ಬಂಧುಗಳೊಂದಿಗೆ ಪ್ರಮುಖ ವಿಷಯಗಳ ಬಗ್ಗೆ ಮಾತುಕತೆ ನಡೆಸಲಿದ್ದೀರಿ. ಆದಾಯ ಹೆಚ್ಚಿದರೂ ಅದಕ್ಕೆ ತಕ್ಕಂತೆ ಖರ್ಚುಗಳೂ ಏರಿಕೆಯಾಗುವ ಸಾಧ್ಯತೆಯಿದೆ. ಆರೋಗ್ಯದಲ್ಲಿ ತಲೆನೋವಿನ ಮುನ್ಸೂಚನೆ ಕಾಣಿಸಿಕೊಳ್ಳಬಹುದು. ಜವಾಬ್ದಾರಿಗಳ ನಿರ್ವಹಣೆಯಲ್ಲಿ ಕೊಂಚ ಹಿನ್ನಡೆಯಾಗಬಹುದು. ಸ್ನೇಹಿತರ ಜೊತೆಗಿನ ನಿಕಟ ಅನುಬಂಧ ಹದಗೆಡದಂತೆ ನೋಡಿಕೊಳ್ಳಿ. ಪ್ರತಿಯೊಂದು ಸಂದರ್ಭವನ್ನೂ ಒಂದೇ ಕಣ್ಣಿನಿಂದ ನೋಡಲಾಗದು. ಸಂಗಾತಿಯ ದುಃಖಕ್ಕೆ ಸಮಾಧಾನಪಡಿಸುವಿರಿ.
ಮೀನ ರಾಶಿ (Pisces)
ಇಂದು ನಿಮ್ಮ ಅಲ್ಪ ಪ್ರಯತ್ನದಿಂದಲೇ ಬಾಕಿ ಉಳಿದಿದ್ದ ದೊಡ್ಡ ಕೆಲಸಗಳನ್ನು ಸಾಧಿಸಿಕೊಳ್ಳಲಿದ್ದೀರಿ. ನಿಮ್ಮನ್ನು ನೀವು ಸರಿಯಾಗಿ ಅರ್ಥಮಾಡಿಕೊಂಡಿದ್ದರೂ, ಇತರರು ನಿಮ್ಮನ್ನು ತಪ್ಪಾಗಿ ವ್ಯಾಖ್ಯಾನಿಸಬಹುದು, ಅದಕ್ಕೆ ತಲೆಕೆಡಿಸಿಕೊಳ್ಳಬೇಡಿ. ಗೆಳೆಯರು ನಿಮ್ಮಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಲಿದ್ದಾರೆ. ಕುಟುಂಬದಲ್ಲಿ ದೀರ್ಘಕಾಲದ ನಂತರ ಶಾಂತಿ ನೆಮ್ಮದಿ ನೆಲೆಸಲಿದೆ. ಹಣದ ಲೆಕ್ಕಪತ್ರ ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ನೂತನ ವಸ್ತುಗಳನ್ನು ಖರೀದಿಸಿ ಇಟ್ಟುಕೊಂಡಿದ್ದರೂ, ಅದನ್ನು ಬಳಸಲಾಗದ ಪರಿಸ್ಥಿತಿಯಿದ್ದು, ಇಂದು ಅನಿವಾರ್ಯವಾಗಿ ಬಳಸಲಿದ್ದೀರಿ.

