ದಾವಣಗೆರೆ, ಫೆ.8: ಒಬ್ಬ ಪ್ರತಿಭಾವಂತ ಇಂಜಿನಿಯರಿಂಗ್ ವಿದ್ಯಾರ್ಥಿನಿ ಆಂಚಲ್ ಕುಮಾರಿ ತನ್ನ ಭವಿಷ್ಯದ ಐಷಾರಾಮಿ ಕನಸುಗಳನ್ನು ಬದಿಗೊತ್ತಿ ಸನ್ಯಾಸತ್ವದ ಕಡೆಗೆ ಹೆಜ್ಜೆ ಹಾಕಿದ್ದಾರೆ. ಆಂಚಲ್ ಕುಮಾರಿ ಕೇವಲ ವಿದ್ಯಾರ್ಥಿನಿಯಲ್ಲ, ಅವರು ದಾವಣಗೆರೆಯ ಬಿ.ಐ.ಇ.ಟಿ (BIET) ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಟಾಪರ್ ಆಗಿದ್ದರು. ಅವರ ಈ ಶೈಕ್ಷಣಿಕ ಸಾಧನೆ ಅವರಿಗೆ ಕಾರ್ಪೊರೇಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಸಂಬಳ ಮತ್ತು ಉದ್ಯೋಗವನ್ನು ತಂದುಕೊಡಬಲ್ಲದಾಗಿತ್ತು.ಜೀವನದಲ್ಲಿ ಭೌತಿಕ ಸುಖಕ್ಕಿಂತ ಆಂತರಿಕ ನೆಮ್ಮದಿ ಮುಖ್ಯ” ಎಂಬ ನಿರ್ಧಾರಕ್ಕೆ ಬಂದ ಆಂಚಲ್, ತನ್ನ 26ನೇ ವಯಸ್ಸಿನಲ್ಲಿಯೇ ಜೈನ ದೀಕ್ಷೆ ಪಡೆಯಲು ನಿರ್ಧರಿಸಿದರು.
ಗುಜರಾತ್‌ನ ಸೂರತ್‌ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜೈನ ಗುರುಗಳಾದ ಕುಲಚಂದ್ರ ಸುರೇಶ್ವರ್ಜಿ ಮಹಾರಾಜ್ ಅವರಿಂದ ದೀಕ್ಷೆ ಪಡೆದರು. ಈ ವೇಳೆ ಅವರು ತಮ್ಮ ಕುಟುಂಬ, ಆಸ್ತಿ ಮತ್ತು ಲೌಕಿಕ ಜೀವನದ ಸಕಲ ಸಂಬಂಧಗಳನ್ನು ತೊರೆದಿದ್ದಾರೆ. ಮಗಳ ಈ ನಿರ್ಧಾರಕ್ಕೆ ಪೋಷಕರು ಯಾವುದೇ ಅಡ್ಡಿ ಮಾಡದೆ, ಆಕೆಯ ಆಧ್ಯಾತ್ಮಿಕ ತುಡಿತಕ್ಕೆ ಬೆಂಬಲವಾಗಿ ನಿಂತು ದೀಕ್ಷಾ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟಿದ್ದು ವಿಶೇಷವಾಗಿದೆ.

ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. “ಇಂದಿನ ಕಾಲದ ಯುವಜನತೆ ಕೇವಲ ಹಣದ ಹಿಂದೆ ಓಡುತ್ತಿಲ್ಲ, ಜೀವನದ ಅರ್ಥವನ್ನು ಹುಡುಕುತ್ತಿದ್ದಾರೆ” ಎಂದು ಹಲವರು ಶ್ಲಾಘಿಸುತ್ತಿದ್ದಾರೆ.ಇದು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಚರ್ಚಿತ ಪ್ರಕರಣ. ಹಿಮ್ಮತ್ ನಗರದ ಉದ್ಯಮಿ ಭಾವೇಶ್ ಭಂಡಾರಿ ಮತ್ತು ಅವರ ಪತ್ನಿ ತಮ್ಮ 200 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ದಾನ ಮಾಡಿ, ಒಟ್ಟಾಗಿ ಸನ್ಯಾಸತ್ವ ಸ್ವೀಕರಿಸಿದರು. ವಿಶೇಷವೆಂದರೆ, ಇವರಿಗಿಂತ ಮೊದಲೇ ಇವರ 16 ವರ್ಷದ ಮಗ ಮತ್ತು 19 ವರ್ಷದ ಮಗಳು ದೀಕ್ಷೆ ಪಡೆದಿದ್ದರು. ಮಕ್ಕಳ ಹಾದಿಯಲ್ಲೇ ಈಗ ಪೋಷಕರೂ ಸಾಗಿದ್ದಾರೆ.
ಇದನ್ನೂ ಓದಿ: ಮಹಿಳೆಯರೇ ಇನ್ಮುಂದೆ ಗೃಹಲಕ್ಷ್ಮೀ ಯೋಜನೆ ಹಣ ಸಿಗಬೇಕಾದರೆ ಈ ಪ್ರಮಾಣಪತ್ರ ಕಡ್ಡಾಯ
ಸೂರತ್‌ನ ಪ್ರಸಿದ್ಧ ವಜ್ರದ ವ್ಯಾಪಾರಿ ಸಂಘ್ವಿ ಅಂಡ್ ಸನ್ಸ್ (Sanghvi & Sons) ಮಾಲೀಕ ಧನೇಶ್ ಸಂಘ್ವಿ ಅವರ ಹಿರಿಯ ಪುತ್ರಿ ದೇವನ್ಶಿ, ಕೇವಲ 9ನೇ ವಯಸ್ಸಿನಲ್ಲಿ ಸನ್ಯಾಸತ್ವ ಸ್ವೀಕರಿಸಿದರು.ಸಾವಿರಾರು ಕೋಟಿ ಮೌಲ್ಯದ ವಜ್ರದ ಉದ್ಯಮಕ್ಕೆ ವಾರಸುದಾರರಾಗಬೇಕಿದ್ದ ಈ ಬಾಲಕಿ, ಐಷಾರಾಮಿ ಜೀವನವನ್ನು ತ್ಯಜಿಸಿ ಸನ್ಯಾಸಿನಿಯಾದರು. ಈಕೆ ಬಾಲ್ಯದಿಂದಲೇ ಸರಳ ಜೀವನದ ಕಡೆಗೆ ಆಕರ್ಷಿತಳಾಗಿದ್ದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

