ಲಖನೌ: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಇಂದು ಒಂದು ದೊಡ್ಡ ವಿಮಾನ ದುರಂತದಿಂದ ಪವಾಡ ಸದೃಶವಾಗಿ ಪಾರಾಗಿದ್ದಾರೆ. ಲಖನೌನಿಂದ ಕೌಶಂಬಿಗೆ ಹೊರಟಿದ್ದ ಅವರ ಹೆಲಿಕಾಪ್ಟರ್ ಗಾಳಿಯಲ್ಲಿರುವಾಗಲೇ ತಾಂತ್ರಿಕ ದೋಷಕ್ಕೀಡಾಗಿ, ಅಮೌಸಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು.
ಲಖನೌನ ಲಾ ಮಾರ್ಟಿನಿಯರ್ ಕಾಲೇಜು ಮೈದಾನದಿಂದ ಕೌಶಂಬಿಯ ವಿವಿಧ ಕಾರ್ಯಕ್ರಮಗಳಿಗೆ (ಸರಸ್ ಮಹೋತ್ಸವ ಉದ್ಘಾಟನೆ) ತೆರಳಲು ಡಿಸಿಎಂ ಮತ್ತು ಅವರ ಆಪ್ತ ಸಹಾಯಕ ವಿವೇಕ್ ಹೆಲಿಕಾಪ್ಟರ್ ಏರಿದ್ದರು. ಟೇಕಾಫ್ ಆದ 15 ನಿಮಿಷಗಳಲ್ಲೇ, ಹೆಲಿಕಾಪ್ಟರ್ ಸುಮಾರು 2000 ಅಡಿ ಎತ್ತರದಲ್ಲಿದ್ದಾಗ ಕ್ಯಾಬಿನ್ ಒಳಗೆ ಇದ್ದಕ್ಕಿದ್ದಂತೆ ದಟ್ಟವಾದ ಹೊಗೆ ಆವರಿಸಿತು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಕಾಕ್‌ಪಿಟ್‌ನಲ್ಲಿದ್ದ ಡಿಜಿಟಲ್ ಡಿಸ್‌ಪ್ಲೇ ಸಿಸ್ಟಮ್‌ಗಳು ಸಂಪೂರ್ಣವಾಗಿ ಸ್ಥಗಿತಗೊಂಡವು.

ಇದನ್ನೂ ಓದಿ: ಶಾಲೆಯಲ್ಲೇ ವಿದ್ಯಾರ್ಥಿನಿಯರಿಂದ ಮಸಾಜ್ ಮಾಡಿಸಿಕೊಂಡ ಮುಖ್ಯ ಶಿಕ್ಷಕಿ ; ವಿಡಿಯೋ ವೈರಲ್!
#BREAKING : UP Deputy CM’s Keshav Prasad Maurya Helicopter Returns to Lucknow After Mid-Air Technical Issue
The helicopter carrying Keshav Prasad Maurya returned to Lucknow after a technical issue was detected while he was travelling to Kaushambi. The aircraft landed safely.… pic.twitter.com/ZqSqRR0A2w
— upuknews (@upuknews1) March 7, 2026
ಯಾವುದೇ ಕ್ಷಣದಲ್ಲಿ ಅನಾಹುತ ಸಂಭವಿಸಬಹುದು ಎಂದು ಅರಿತ ಪೈಲಟ್‌ಗಳು, ಕೂಡಲೇ ಲಖನೌ ಎಟಿಸಿ (ATC) ಸಂಪರ್ಕಿಸಿ ತುರ್ತು ಪರಿಸ್ಥಿತಿಯನ್ನು ವಿವರಿಸಿದರು. ಎಟಿಸಿಯ ಕ್ಷಿಪ್ರ ಸ್ಪಂದನೆಯಿಂದಾಗಿ, ಲಖನೌನ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಅಮೌಸಿ) ಹೆಲಿಕಾಪ್ಟರ್ ಅನ್ನು ಸುಮಾರು ಬೆಳಿಗ್ಗೆ 11:15ಕ್ಕೆ ಸುರಕ್ಷಿತವಾಗಿ ಇಳಿಸಲಾಯಿತು. ಹೆಲಿಕಾಪ್ಟರ್‌ನಲ್ಲಿದ್ದ ಡಿಸಿಎಂ ಸೇರಿದಂತೆ ಆರು ಮಂದಿಯೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

