ದೆಹಲಿ: ನವದೆಹಲಿಯ ‘ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್’ (AIIMS) ವೈದ್ಯರು ಅತೀವ ತೂಕ ಮತ್ತು ಉಸಿರಾಟದ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ 32 ವರ್ಷದ ಯುವಕನಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಹೊಸ ಜೀವನ ನೀಡಿದ್ದಾರೆ.
ಸದರಿ ರೋಗಿಯು ಬೃಹತ್ ಪ್ರಮಾಣದ 209 ಕೆಜಿ ತೂಕ ಹೊಂದಿದ್ದು, ತೀವ್ರ ಹಂತದ ಬೊಜ್ಜು ಹಾಗೂ ನಿದ್ರೆಯ ಸಮಯದಲ್ಲಿ ಉಸಿರಾಟ ಸ್ಥಗಿತಗೊಳ್ಳುವ ಅಪಾಯಕಾರಿ ‘ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ’ ಸಮಸ್ಯೆಯಿಂದ ಬಳಲುತ್ತಿದ್ದರು.
ಇದನ್ನೂ ಓದಿ: ಮಹಿಳೆಯರ ‘ಮೆನೋಪಾಸ್’ ಸಮಸ್ಯೆಗೆ ರಾಜ್ಯ ಸರ್ಕಾರದ ಮಾಸ್ಟರ್ ಪ್ಲಾನ್: ‘ಋತುತಾರೆ’ ಯೋಜನೆ ಘೋಷಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್
ಏಮ್ಸ್ ಆಸ್ಪತ್ರೆಯ ನುರಿತ ಶಸ್ತ್ರಚಿಕಿತ್ಸಕರ ತಂಡವು ರೋಗಿಗೆ ಯಶಸ್ವಿಯಾಗಿ ಬೆರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಿದೆ. ಶಸ್ತ್ರಚಿಕಿತ್ಸೆಯ ನಂತರ ರೋಗಿಯು ಬರೋಬ್ಬರಿ 49 ಕೆಜಿ ತೂಕವನ್ನು ಕಳೆದುಕೊಂಡಿದ್ದು, ಅವರ ತೂಕ ಪ್ರಸ್ತುತ 160 ಕೆಜಿಗೆ ಇಳಿಕೆಯಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
#WATCH | Doctors at AIIMS Delhi have given a new lease on life to a 32-year-old patient who weighed 209 kg and was suffering from super-super obesity and severe obstructive sleep apnea.
The patient underwent bariatric surgery, leading to a remarkable weight loss of nearly 49 kg,… pic.twitter.com/ZChaf3nXAN
— DD News (@DDNewslive) August 6, 2026
ಶಸ್ತ್ರಚಿಕಿತ್ಸೆಯ ಬಳಿಕ ಅವರ ಉಸಿರಾಟದ ವ್ಯವಸ್ಥೆಯಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ. ಪ್ರತಿನಿತ್ಯ ರಾತ್ರಿ ವೇಳೆ ಉಸಿರಾಟಕ್ಕಾಗಿ ಬಳಸುತ್ತಿದ್ದ ‘ಸಿಪಿಎಪಿ’ಮೆಷಿನ್ ಬೆಂಬಲದ ಅಗತ್ಯವೀಗ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ರೋಗಿಯು ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ವೈದ್ಯರ ಮೇಲ್ವಿಚಾರಣೆಯ ನಂತರ ಅವರನ್ನು ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.
ಸವಾಲಿನ ಸ್ಥಿತಿಯಲ್ಲಿದ್ದ ರೋಗಿಗೆ ಮರುಜೀವ ನೀಡಿದ ಏಮ್ಸ್ ವೈದ್ಯರ ಈ ಸಾಧನೆಗೆ ಸಾರ್ವಜನಿಕರು ಹಾಗೂ ವೈದ್ಯಕೀಯ ಕ್ಷೇತ್ರದಿಂದ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

