Breaking News

WPL: ಮುಂಬೈ ವಿರುದ್ಧ ಡೆಲ್ಲಿಗೆ ಭರ್ಜರಿ ಜಯ

ಗುಜರಾತ್: ವಡೋದರ ಇಂಟರ್‌ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 7 ವಿಕೆಟ್‌ಗಳ ಗೆಲುವು ಸಾಧಿಸಿದೆ.

ಟಾಸ್ ಸೋತು ಬ್ಯಾಟ್ ಮಾಡಿದ ಮುಂಬೈ, 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 154 ರನ್ ಬಾರಿಸಿತು. ತಂಡದ ಪರ ನ್ಯಾಟ್ ಸಿವರ್ ಬ್ರಂಟ್ 65, ಹರ್‍ಮನ್‌ಪ್ರೀತ್ ಕೌರ್ 41 ರನ್ ಬಾರಿಸಿದರು.
ಇನ್ನುಳಿದಂತೆ, ಸಜೀವನ್ ಸಜನಾ 9, ಹೇಲಿ ಮ್ಯಾಥ್ಯೂಸ್ 12, ನಿಕೋಲಾ ಕ್ಯಾರಿ 12, ಅಮನ್‌ಜೋತ್ ಕೌರ್ 3, ಸಂಸ್ಕೃತಿ ಗುಪ್ತಾ 10 ರನ್ ಬಾರಿಸಿದರು. ಡೆಲ್ಲಿ ಪರ ನಲ್ಲಪುರೆಡ್ಡಿ ಚರಣಿ 3 ವಿಕೆಟ್ ಕಬಳಿಸಿದರೆ, ನಂದಿನ ಶರ್ಮಾ, ಮರಿಜಾನ್ನೆ ಕಪ್ಪ್ ತಲಾ 1 ವಿಕೆಟ್ ಪಡೆದರು.

Advertisement

ಇದನ್ನೂ ಓದಿ: ಗದಗ: ಲಕ್ಕುಂಡಿ ಮನೆಯಲ್ಲಿ ಪತ್ತೆಯಾಯ್ತು 10ನೇ ಶತಮಾನದ ದೇಗುಲ

155 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ, 19 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಜೆಮಿಮಾ ರೋಡ್ರಿಗಸ್ ಅಜೇಯ 51 ರನ್ ಬಾರಿಸಿದ್ದು, ಲಿಜೆಲ್ ಲೀ 46 ರನ್ ಗಳಿಸಿದರು.

ಇನ್ನುಳಿದಂತೆ, ಶಫಾಲಿ ವರ್ಮಾ 29, ಲಾರಾ ವೋಲ್ವಾರ್ಡ್ 17, ಮರಿಜಾನ್ನೆ ಕಪ್ಪ್ 10 ರನ್ ಬಾರಿಸಿದರು. ಮುಂಬೈ ಪರ ವೈಷ್ಣವಿ ಶರ್ಮಾ, ಅಮನ್ಜೋತ್ ಕೌರ್ ತಲಾ 1 ವಿಕೆಟ್ ಪಡೆದರು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು