ಮುಂಬೈ: ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿರುವ ‘ಧುರಂಧರ್ 2: ದ ರಿವೆಂಜ್’ ಚಿತ್ರವು ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುತ್ತಿರುವ ನಡುವೆಯೇ, ಚಿತ್ರದ ವಿಷಯವಸ್ತು ಕುರಿತು ಟೀಕೆಗಳಿಗೂ ಗುರಿಯಾಗಿದೆ.
ಕನ್ನಡ ನಟಿ ಹಾಗೂ ಮಾಜಿ ರಾಜಕಾರಣಿ ಮೋಹಕತಾರೆ ರಮ್ಯಾ ಅವರು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಚಿತ್ರವನ್ನು ತೀವ್ರವಾಗಿ ಟೀಕಿಸಿದ್ದಾರೆ. “ಇದು ಸಂಪೂರ್ಣ ಪ್ರಚಾರ ಚಿತ್ರ” ಎಂದು ಹೇಳಿರುವ ಅವರು, ನಿರ್ದೇಶಕ ಆದಿತ್ಯ ಧರ್ ಅವರು ಜಿಂಗೋಇಸಂ ರೀತಿಯ ವಿಷಯಗಳಿಂದ ಹೊರಬರಬೇಕೆಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾ ಮದುವೆಗೆ ಬಿಗ್ ಟ್ವಿಸ್ಟ್! ಆಕೆ ಇನ್ನೂ ಅಪ್ರಾಪ್ತೆ?
ತಮ್ಮ ಪೋಸ್ಟ್‌ನಲ್ಲಿ ರಮ್ಯಾ ಚಿತ್ರವು ನಿರೀಕ್ಷೆ ತಲುಪಿಲ್ಲ ಎಂದು ಹೇಳಿದ್ದು, ಕಥೆಯ ನಿರ್ವಹಣೆಯನ್ನು ‘ಎಂಡ್ಯುರನ್ಸ್ ಟೆಸ್ಟ್’ ಎಂದು ವ್ಯಂಗ್ಯ ಮಾಡಿದ್ದಾರೆ. ಚಿತ್ರ ತುಂಬಾ ಉದ್ದವಾಗಿದ್ದು, ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರದ ಭರ್ಜರಿ ವಾಣಿಜ್ಯ ಯಶಸ್ಸಿನ ನಡುವೆಯೇ, ಇದರ ವಿಷಯ ಮತ್ತು ಸಂದೇಶ ಕುರಿತು ಪ್ರೇಕ್ಷಕರಲ್ಲಿ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೆಲವರು ಚಿತ್ರದ ಭವ್ಯತೆ ಮತ್ತು ಪ್ರಭಾವವನ್ನು ಮೆಚ್ಚಿದರೆ, ಇನ್ನೂ ಕೆಲವರು ಅದರ ವಿಷಯದ ದಿಕ್ಕನ್ನು ಪ್ರಶ್ನಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

