ಇಂದಿನ ಯಾಂತ್ರಿಕ ಜೀವನದಲ್ಲಿ ಅನೇಕರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ದುಬಾರಿ ಔಷಧಿಗಳ ಬದಲಾಗಿ, ಕೇವಲ ಐದು ನಿಮಿಷಗಳ ಧ್ಯಾನ ಸಾಕು ಎಂದು ತಜ್ಞರು ಹೇಳುತ್ತಾರೆ. ರಾತ್ರಿ ಮಲಗುವ ಮೊದಲು ಕಣ್ಣು ಮುಚ್ಚಿ, ನಿಧಾನವಾಗಿ ಉಸಿರಾಡುವುದರಿಂದ ಮೆದುಳಿನ ಭಾವನಾತ್ಮಕ ಕೇಂದ್ರ ಶಾಂತಗೊಳ್ಳುತ್ತದೆ.
ಇದು ದಿನದ ಘಟನೆಗಳಿಂದ ಮೆದುಳನ್ನು ಮರುಹೊಂದಿಸಿ, ಆಳವಾದ ನಿದ್ರೆಗೆ ಸಿದ್ಧಪಡಿಸುತ್ತದೆ. ಧ್ಯಾನವು ಒತ್ತಡದ ಹಾರ್ಮೋನುಗಳನ್ನು ಕಡಿಮೆ ಮಾಡುತ್ತದೆ, ಹೃದಯ ಬಡಿತ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಹಾಗೂ ಮೆದುಳನ್ನು ಶಾಂತಗೊಳಿಸಿ ನಿದ್ರೆಗೆ ಅನುಕೂಲಕರ ಸ್ಥಿತಿಗೆ ತರುತ್ತದೆ.

ಇದನ್ನೂ ಓದಿ: ನಿದ್ರೆ ಕೇವಲ ವಿಶ್ರಾಂತಿಯಲ್ಲ, ಆರೋಗ್ಯದ ಗುಟ್ಟು
ಅನೇಕರು ನಿದ್ರೆಯ ಸಮಯದಲ್ಲಿ ದಿಢೀರನೆ ಎಚ್ಚರಗೊಳ್ಳುವ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಮೆದುಳಿನ ಅಮಿಗ್ಡಾಲಾ ಭಾಗವನ್ನು ಶಾಂತಗೊಳಿಸುವುದರಿಂದ ಈ ಸಮಸ್ಯೆಯನ್ನು ನಿವಾರಿಸಬಹುದು. ರಾತ್ರಿ ಮಲಗುವ ಮುನ್ನ 5 ನಿಮಿಷಗಳ ಕಾಲ ಶಾಂತ ಸ್ಥಳದಲ್ಲಿ ಕುಳಿತು, ಕಣ್ಣು ಮುಚ್ಚಿ ಉಸಿರಾಟದ ಮೇಲೆ ಗಮನಹರಿಸುವುದರಿಂದ ಸ್ನಾಯುಗಳು ಸಡಿಲಗೊಂಡು ಮನಸ್ಸು ಹಗುರವಾಗುತ್ತದೆ, ಇದು ಬೆಳಗಿನ ಜಾವದವರೆಗೆ ನಿರಂತರ ನಿದ್ರೆಗೆ ಸಹಕಾರಿಯಾಗುತ್ತದೆ.
ಹಗಲಿನಲ್ಲಿ ಅನುಭವಿಸುವ ಮಾನಸಿಕ ಚಿಂತೆಗಳು ಮತ್ತು ಉದ್ವಿಗ್ನತೆಗಳು ನಿದ್ರೆಯ ಮೇಲೆ ಆಳವಾದ ಪರಿಣಾಮ ಬೀರುತ್ತವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಲಗುವ ಮುನ್ನ ಧ್ಯಾನ ಮಾಡುವುದರಿಂದ ದೈಹಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ. ಇದು ಸಹಿಷ್ಣುತೆಯನ್ನು ಹೆಚ್ಚಿಸುವುದಲ್ಲದೆ ಮನಸ್ಥಿತಿಯನ್ನು ಸುಧಾರಿಸುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

