ದೇವಾಲಯಕ್ಕೆ ನುಗ್ಗಿದ ಎಲೆಕ್ಟ್ರಿಕ್ ಕಾರು, ಹಲವರಿಗೆ ಗಂಭೀರ ಗಾಯ

ಬ್ಯಾಂಕಾಕ್: ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ಭೀಕರ ರಸ್ತೆ ಅಪಘಾತವೊಂದು ನಡೆದಿದ್ದು, ವೇಗವಾಗಿ ಬಂದ ಎಲೆಕ್ಟ್ರಿಕ್ ಕಾರೊಂದು ನಿಯಂತ್ರಣ ತಪ್ಪಿ ಪ್ರಸಿದ್ಧ ‘ಕುವಾನ್ ಯಿನ್’ (Kuan Yin) ದೇವಾಲಯದ ಆವರಣಕ್ಕೆ ನುಗ್ಗಿದೆ. ಈ ದುರಂತದಲ್ಲಿ ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ.

ದೇವಾಲಯದ ಆವರಣದಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಪ್ರಾರ್ಥನೆಯಲ್ಲಿ ತೊಡಗಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ವೇಗವಾಗಿ ಬಂದ ಕಾರು ನೇರವಾಗಿ ದೇವಾಲಯದ ಕಟ್ಟಡ ಹಾಗೂ ಆವರಣದಲ್ಲಿದ್ದ ಸಾರ್ವಜನಿಕರಿಗೆ ಡಿಕ್ಕಿ ಹೊಡೆದಿದೆ.

ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯರು ಹಾಗೂ ದೇವಸ್ಥಾನದ ಸಿಬ್ಬಂದಿ ತಕ್ಷಣವೇ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕಮಗಮಿಸಿದ ತುರ್ತು ರಕ್ಷಣಾ ಪಡೆ ಮತ್ತು ಪೊಲೀಸರು, ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಇರಾನ್ ಮೇಲೆ ಧ್ವಂಸಕಾರಿ ದಾಳಿಯ ಎಚ್ಚರಿಕೆ ನೀಡಿದ ಇಸ್ರೇಲ್: ವಿಶ್ವಸಂಸ್ಥೆಯಲ್ಲಿ ರಾಯಭಾರಿ ಡ್ಯಾನಿ ಡ್ಯಾನನ್ ಆಕ್ರೋಶ

ಎಲೆಕ್ಟ್ರಿಕ್ ಕಾರಿನಲ್ಲಿ ಸಡನ್ ತಾಂತ್ರಿಕ ದೋಷ ಅಥವಾ ಬ್ರೇಕ್ ಫೇಲ್ಯೂರ್ ಉಂಟಾಯಿತೇ? ಅಥವಾ ಚಾಲಕನ ನಿರ್ಲಕ್ಷ್ಯವೇ ಕಾರಣವೇ ಎಂಬುದರ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾರು ಪ್ರವೇಶಿಸಿದ ರಭಸಕ್ಕೆ ದೇವಾಲಯದ ಮುಂಭಾಗ ಹಾಗೂ ಪೂಜಾ ಆವರಣಕ್ಕೆ ಅಪಾರ ಪ್ರಮಾಣದ ಹಾನಿಯಾಗಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *