Breaking News

Electronics : ಬಿಗ್ ಶಾಕ್ ! ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಇನ್ನೂ ತುಟ್ಟಿ

ಇಲೆಕ್ಟ್ರಾನಿಕ್ಸ್ : ಹೊಸ ಟಿವಿ ಖರೀದಿಸುವ ಯೋಚನೆಯಿದೆಯೇ? ಅಥವಾ ಬಹುಕಾಲದಿಂದ ಕಣ್ಣಿಟ್ಟಿರುವ ಸ್ಮಾರ್ಟ್‌ಫೋನ್ ತೆಗೆದುಕೊಳ್ಳಬೇಕೆಂದು ಪ್ಲಾನ್ ಮಾಡಿದ್ದೀರಾ? ಹಾಗಿದ್ದರೆ ಸ್ವಲ್ಪ ಬೇಗ ನಿರ್ಧಾರ ಮಾಡುವುದು ಒಳಿತು. ಮುಂದಿನ ಕೆಲವು ವಾರಗಳಲ್ಲಿ ಸ್ಮಾರ್ಟ್‌ಫೋನ್, ಟಿವಿ, ಲ್ಯಾಪ್‌ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ಸಾಧನಗಳ ಬೆಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಉದ್ಯಮ ವಲಯದ ಅಧಿಕಾರಿಗಳು ಮತ್ತು ಮಾರುಕಟ್ಟೆ ತಜ್ಞರ ಪ್ರಕಾರ, ಮುಂದಿನ ಎರಡು ತಿಂಗಳಲ್ಲಿ ಬೆಲೆಗಳು 4–8% ಹೆಚ್ಚಾಗಬಹುದು. ಇದಕ್ಕೆ ಮುನ್ನವೇ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ 21% ವರೆಗೆ ತೀವ್ರ ಬೆಲೆ ಏರಿಕೆ ದಾಖಲಾಗಿದೆ.

ಈ ಎಲ್ಲದಕ್ಕೂ ಪ್ರಮುಖ ಕಾರಣ ಮೆಮೊರಿ ಚಿಪ್‌ಗಳ ಬೆಲೆ ಭಾರೀ ಏರಿಕೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮತ್ತು ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್ ಬಳಕೆ ಹೆಚ್ಚುತ್ತಿರುವುದರಿಂದ ಮೆಮೊರಿಯ ಬೇಡಿಕೆ ಜಾಸ್ತಿಯಾಗಿದೆ. ಇದರಿಂದ ಸ್ಮಾರ್ಟ್‌ಫೋನ್ ತಯಾರಕರು ಹೆಚ್ಚಿದ ಉತ್ಪಾದನಾ ವೆಚ್ಚವನ್ನು ಎದುರಿಸುತ್ತಿದ್ದಾರೆ.
ET ವರದಿ ಉಲ್ಲೇಖಿಸಿದಂತೆ, ಈ ಬೆಲೆ ಏರಿಕೆ ತಾತ್ಕಾಲಿಕವಾಗಿರುವ ಸಾಧ್ಯತೆ ಕಡಿಮೆ. ವರ್ಷಪೂರ್ತಿ ಪ್ರತೀ ತ್ರೈಮಾಸಿಕ ಅಥವಾ ಕೆಲವೊಮ್ಮೆ ಪ್ರತೀ ತಿಂಗಳಿಗೂ ಇಂತಹ ಏರಿಕೆ ಮರುಕಳಿಸಬಹುದು ಎಂದು ಉದ್ಯಮದ ನಾಯಕರು ಎಚ್ಚರಿಸಿದ್ದಾರೆ.

Advertisement

ತಜ್ಞರೊಬ್ಬರು ಹೇಳುವಂತೆ, 2026 ಮತ್ತು ಮುಂದಿನ ವರ್ಷದಲ್ಲೂ ಮೆಮೊರಿ ಬೆಲೆಗಳು ಏರಿಕೆಯಾಗುವ ಸಾಧ್ಯತೆ ಇದೆ. “ಹೊಸ ಫೋನ್ ಲಾಂಚ್‌ಗಳಲ್ಲಿ ಕಂಪನಿಗಳು ಈ ವೆಚ್ಚವನ್ನು ಸೇರಿಸಿಕೊಳ್ಳುತ್ತವೆ. ಆದರೆ ಕೆಲವೊಮ್ಮೆ shrinkflation ಕೂಡ ಆಗಬಹುದು — ಅಂದರೆ ಡಿಸ್ಪ್ಲೇ ಮೊದಲಾದ ಕೆಲವು ಭಾಗಗಳ ಗುಣಮಟ್ಟ ಅಥವಾ ಸ್ಪೆಸಿಫಿಕೇಶನ್ ಕಡಿಮೆ ಮಾಡಬಹುದು,” ಎಂದು ಅವರು ತಿಳಿಸಿದ್ದಾರೆ.

ಸರಬರಾಜಿನ ಸಮಸ್ಯೆಯೂ ದೊಡ್ಡ ಕಾರಣ ;
ಕೆಲವು ಫೋನ್ ಮತ್ತು ಟಿವಿ ತಯಾರಕ ಕಂಪನಿಗಳ ಪ್ರಕಾರ, ಮೆಮೊರಿ ಚಿಪ್ ಲಭ್ಯತೆ ದೊಡ್ಡ bottleneck ಆಗಿದೆ. Kodak, Thomson ಮತ್ತು Blaupunkt ಟಿವಿಗಳನ್ನು ಮಾರಾಟ ಮಾಡುವ Super Plastronics ಸಂಸ್ಥೆ, ತಮಗೆ ಬೇಕಾಗಿರುವ ಮೆಮೊರಿ ಚಿಪ್‌ಗಳಲ್ಲಿ ಈಗ ಕೇವಲ 10% ಮಾತ್ರ ಸಿಗುತ್ತಿದೆ ಎಂದು ಹೇಳಿದೆ.

ಇದನ್ನೂ ಓದಿ : Cinema : ನಟ ಧನುಷ್ ಜೊತೆ ಮದುವೆ: ಮೃಣಾಲ್ ಠಾಕೂರ್ ಪರೋಕ್ಷ ಪ್ರತಿಕ್ರಿಯೆ ಹೀಗಿದೆ

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು