ಸುಳ್ಯ: ಒಂದು ಕಡೆ ಅಡಿಕೆ ಬೆಳೆಗಾರರು ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗ ಬಾಧೆಯಿಂದ ತೊಂದರೆಗೆ ಈಡಾಗಿದ್ದರೆ ಈಗ ಕಾಡಾನೆಗಳ ಹಾವಳಿ ಎಲ್ಲರ ನಿದ್ದೆಗೆಡಿಸಿದೆ.
ಅರಂತೋಡು ಗ್ರಾಮದ ಅಡ್ತಲೆ, ಕಿರ್ಲಾಯ, ಬೆದ್ರುಪಣೆ ಭಾಗದಲ್ಲಿ ನಿರಂತರ ಕೃಷಿ ತೋಟಗಳಿಗೆ ದಾಳಿ ಮಾಡಿ ಹಾನಿ ಮಾಡುತ್ತಿದ್ದ ಆನೆಗಳ ಹಿಂಡು ಕೆಲ ದಿನಗಳಿಂದ ಮಡಪ್ಪಾಡಿ ಕಡೆಗೆ ಆಗಮಿಸಿವೆ.

ಇದನ್ನೂ ಓದಿ: ಪುತ್ತೂರು: ಪಿಕಪ್ ಮತ್ತು ಆಟೋ ನಡುವೆ ಭೀಕರ ಡಿಕ್ಕಿ; ರಿಕ್ಷಾ ಚಾಲಕ ರಾಮಣ್ಣ ಇರ್ದೆಗೆ ಗಂಭೀರ ಗಾಯ
ಮಡಪ್ಪಾಡಿ ಗ್ರಾಮದ ದಿನೇಶ್ ಮಡಪ್ಪಾಡಿ ಅವರ ತೋಟಕ್ಕೆ ಫೆ.24 ರಂದು ರಾತ್ರಿ ಏಳು ಆನೆಗಳಿರುವ ಹಿಂಡು ದಾಳಿ ನಡೆಸಿ ಕೃಷಿ ಹಾನಿ ಮಾಡಿದೆ. ತೋಟದಲ್ಲಿ ಡೀಸಿಲ್ ಪಂಪನ್ನು ತಳ್ಳಿ ಹಾಕಿದೆ.
ಆನೆಗಳ ಹಿಂಡಿನ ಜತೆ ಮರಿಯಾನೆ ಕೂಡ ಇದ್ದು ಈ ಕಾರಣದಿಂದ ತೋಟದ ವಿವಿಧೆಡೆ ಓಡಾಡಿ ಕೃಷಿ ಹಾನಿ ಮಾಡುತ್ತಿದೆ. ಸ್ಥಳೀಯ ನಿವಾಸಿಗಳು ಬೆಳಿಗ್ಗೆ 3:00 ರ ಸಮಯಕ್ಕೆ ಆನೆಗಳನ್ನು ಓಡಿಸಲು ಪ್ರಯತ್ನಿಸುವ ವೇಳೆ ಆನೆಯೊಂದು ಅಟ್ಟಿಸಿಕೊಂಡು ಬಂದಿದೆ ಎನ್ನಲಾಗಿದೆ.
ಕಾಡಾನೆಗಳ ಹಾವಳಿಯಿಂದ ರೈತರು ತೋಟದ ಕಡೆ ಹೋಗಲು ಹಿಂದೇಟು ಹಾಕುವಂತಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

