ಪಲ್ಲೆಕೆಲೆ: ಸೂಪರ್-8 ಹಂತದ ಪಂದ್ಯಾಟದಲ್ಲಿ ವಿಲ್ ಜಾಕ್ಸ್ ಅವರ ಆಲ್‌ರೌಂಡ್ ಪ್ರದರ್ಶನದಿಂದ ಇಂಗ್ಲೆಂಡ್ ತಂಡ ಶ್ರೀಲಂಕಾ ವಿರುದ್ಧ 51 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಇಲ್ಲಿನ ಪಲ್ಲಕೆಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ ನ ಸೂಪರ್-8 ಹಂತದ ಪಂದ್ಯಾಟದಲ್ಲಿ ಶ್ರೀಲಂಕಾ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಇದನ್ನೂ ಓದಿ: Asia Cup: ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತದ ವನಿತೆಯರು
ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಫಿಲಿಪ್ ಸಾಲ್ಟ್ 62, ವಿಲ್ ಜಾಕ್ಸ್ 21, ಹ್ಯಾರಿ ಬ್ರೂಕ್ 14 ರನ್ ಗಳಿಸಿದರು. ಶ್ರೀಲಂಕಾ ಪರ ದುನಿತ್ ವೆಲ್ಲಲಗೆ 3, ಮಹೀಶ್ ತೀಕ್ಷಣ 2, ದಿಲ್ಶನ್ ಮಧುಸಣಕ ತಲಾ 2 ಮತ್ತು ದುಶ್ಮಂತ ಚಮೀರ ಒಂದು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ಶ್ರೀಲಂಕಾ ಯಾವುದೇ ಪ್ರತಿರೋಧ ತೋರದೆ 16.4 ಓವರ್‌ಗಳಲ್ಲಿ ಸರ್ವಪತನ ಕಂಡು 95 ರನ್ ಗಳಿಸಲಷ್ಟೇ ಶಕ್ತವಾಯ್ತು. ತಂಡದ ಪರ ದಾಸುನ್ ಶಣಕ 30, ಕಮಿಂಡು ಮೆಂಡಿಸ್ 13 ರನ್ ಗಳಿಸಿದರು. ಇಂಗ್ಲೆಂಡ್ ಪರ ವಿಲ್ ಜಾಕ್ಸ್ 3, ಜೋಫ್ರ ಆರ್ಚರ್, ಲಿಯಮ್ ಡಾಸನ್, ಆದಿಲ್ ರಶೀದ್ ತಲಾ 2, ಜೆಮೀ ಓವರ್‌ಟನ್ ಒಂದು ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

