Breaking News

ಉಡುಪಿ: 49 ಕೋಟಿ ಲಾಟರಿ ಗೆದ್ದ ಶಂತನು ಮನೆಯಲ್ಲಿ ಸಂತಸ

ಉಡುಪಿ: ಅಬುಧಾಬಿಯಲ್ಲಿ ನಡೆದ ಬಿಗ್ ಟಿಕೆಟ್ ಲೈವ್ ಡ್ರಾ ದಲ್ಲಿ 20 ಮಿಲಿಯನ್ ದಿರಮ್ ( ಸುಮಾರು 49 ಕೋಟಿ ರೂ.) ಮೊತ್ತದ ಬಹುಮಾನ ಗೆದ್ದಿರುವ ಸುದ್ದಿ ತಿಳಿದು ಉದ್ಯಾವರ ಮೂಲದ ಶಂತನು ಎಸ್. ಶೆಟ್ಟಿಗಾರ್‌ ಮನೆಯಲ್ಲಿ ಸಂತಸ ಕಂಡು ಬಂದಿದೆ.

ಮಟ್ಟು ದುಗ್ಗುಪಾಡಿಯಲ್ಲಿ ನೆಲೆಸಿರುವ ಶಂತನು ಅವರ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿ ಶಂಕರ್‌ ಬಿ. ಶೆಟ್ಟಿಗಾರ್ ಈ ಸುದ್ದಿ ಕೇಳಿ ಬಹಳಷ್ಟು ಸಂತಸ ವ್ಯಕ್ತಪಡಿಸಿದ್ದಾರೆ.

Advertisement

ಇದನ್ನೂ ಓದಿ: ಚೆನ್ನೈ: H5N1 ವೈರಸ್ ಪತ್ತೆ, ಸಾವಿರಾರು ಕಾಗೆಗಳ ಮಾರಣಹೋಮ

ಕಳೆದ 7 ವರ್ಷಗಳಿಂದ ಮಸ್ಕತ್‌ನ ರುವಿಯಲ್ಲಿ ಚಿಲ್ಲರೆ ವ್ಯಾಪಾರ  ಮಾಡುತ್ತಿರುವ ಪುತ್ರ ಶಂತನು ಶೆಟ್ಟಿಗಾರ್‌ ಮುಂಬರುವ ಮಾರ್ಚ್ ತಿಂಗಳ 3ರಂದು ಅಬುಧಾಬಿಯಲ್ಲಿ ನಡೆಯುವ ಬಿಗ್ ಟಿಕೆಟ್ ಲೈವ್ ಡ್ರಾ ನಡೆಸಲಿರುವುದೇ ನಮಗೆ ಹೆಮ್ಮೆ ಎಂದಿದ್ದಾರೆ.

ಶಂತನು ಎಸ್‌. ಶೆಟ್ಟಿಗಾರ್ ತಾಯಿ, ಸಹೋದರ ಶಶಾಂಕ್‌ ಎಸ್‌. ಶೆಟ್ಟಿಗಾರ್‌ ಜತೆ ಮಟ್ಟು ದುಗ್ಗುಪಾಡಿ ಮನೆಯಲ್ಲಿ ವಾಸವಾಗಿದ್ದಾರೆ. ಶಂತನು ಪತ್ನಿ ಸ್ವಾತಿ ಎಸ್. ಶೆಟ್ಟಿಗಾರ್ 40 ದಿನದ ಹಸುಳೆ ಪುತ್ರಿಯೊಂದಿಗೆ ಮೇಘರವಳ್ಳಿಯಲ್ಲಿ ಇದ್ದಾರೆ.

ಬಿಗ್ ಟಿಕೆಟ್‌ನ ಒಂದು ಟಿಕೆಟ್ ಬೆಲೆ 500 ದಿರಮ್ (12,500 ರೂ.) ಆಗಿದ್ದು, ರಾಫೆಲ್ ಡ್ರಾ ಒಂದರಲ್ಲಿ ಅದೃಷ್ಟಶಾಲಿ ಆಗಿ ಹೊರಹೊಮ್ಮಿರುವುದು ಸಂತಸ ತಂದಿದೆ ಎಂದು ಕುಟುಂಬಸ್ಥರು ತಿಳಿಸಿದ್ದರೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು