ಮಕ್ಕಳ ಅಪಹರಣ ಜಾಲದ ಭೀತಿ! ವೈರಲ್ ಆದ ಆ ಒಂದು ವೀಡಿಯೊದಿಂದ ಪೋಷಕರಲ್ಲಿ ಮನೆಮಾಡಿದ ಆತಂಕ

ದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಮಕ್ಕಳ ಅಪಹರಣಕಾರರ ತಂಡವೊಂದು ಸಕ್ರಿಯವಾಗಿದೆ ಎಂಬ ಶಂಕೆಯು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರತ್ಯಕ್ಷದರ್ಶಿಗಳ ವೀಡಿಯೊ ಈ ಅನುಮಾನಕ್ಕೆ ಪುಷ್ಠಿ ನೀಡುವಂತಿದೆ.

ದೆಹಲಿಯ ಜನನಿಬಿಡ ಪ್ರದೇಶವೊಂದರಲ್ಲಿ ಮಕ್ಕಳನ್ನು ಅಪಹರಿಸಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದುಕೊಂಡಿದ್ದಾರೆ ಎನ್ನಲಾದ ವೀಡಿಯೊವೊಂದು ಸಂಚಲನ ಮೂಡಿಸಿದೆ.ಅಪಹರಣಕಾರರು ಗುಂಪಾಗಿ ಬಂದು ಏಕಾಏಕಿ ಮಕ್ಕಳನ್ನು ಎತ್ತಿಕೊಂಡು ಹೋಗಲು ಸಂಚು ರೂಪಿಸುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಜನದಟ್ಟಣೆಯ ನಡುವೆಯೇ ಇಂತಹ ಘಟನೆ ನಡೆಯುತ್ತಿರುವುದು ಆಘಾತಕಾರಿಯಾಗಿದೆ.

Advertisement

ಇದನ್ನೂ ಓದಿ: ಬಂಟ್ವಾಳದ ಸಜಿಪನಡು ಮಸೀದಿ ಬಳಿ ರಣರಂಗ: ತಲವಾರ್, ರಾಡ್‌ಗಳಿಂದ ಭೀಕರ ಗುಂಪು ಘರ್ಷಣೆ

ಇಲ್ಲಿದೆ ನೋಡಿ ವಿಡಿಯೋ:

ಈ ವೀಡಿಯೊದ ಸತ್ಯಾಸತ್ಯತೆ ಮತ್ತು ಈ ಪ್ರಕರಣದಲ್ಲಿ ಯಾರಾದರೂ ಸಕ್ರಿಯವಾಗಿ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ದೆಹಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು