Breaking News

ಇಡಗುಂಜಿ ಗಣಪತಿ ದೇವಸ್ಥಾನದ ಕಾಣಿಕೆ ಹಣಕ್ಕಾಗಿ ಅರ್ಚಕರ ನಡುವೆ ಕಾಳಗ! ವಿಡಿಯೋ ಇಲ್ಲಿದೆ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಇಡಗುಂಜಿ ಗಣಪತಿ ದೇವಾಲಯಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಸುಮಾರು 1ಮಿಲಿಯನ್‌ಗೂ ಅಧಿಕ ಭಕ್ತರು ಭೇಟಿ ನೀಡುವ ಈ ದೇವಾಲಯಕ್ಕೆ ಭಕ್ತರು ಭೇಟಿ ನೀಡುವ ವೇಳೆಯಲ್ಲಿ ಅರ್ಚಕರ ತಟ್ಟೆಗೂ  ಹಣ ಹಾಕುತ್ತಾರೆ. ಇದೀಗ, ಈ ಹಣಕ್ಕಾಗಿ ಇಬ್ಬರು ಅರ್ಚಕರ ನಡುವೆ ಜಗಳ ನಡೆದಿದೆ ಎನ್ನಲಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು, ಇಷ್ಟಾರ್ಥಗಳನ್ನು ಈಡೇರಿಸು ಮಹಾಗಣಪತಿಯೇ ಎಂದು ಇಡಗುಂಜಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಪರವಾಗಿ ದೇವರ ಮುಂದೆ ನಿಂತು ವಿಶೇಷ ಪ್ರಾರ್ಥನೆ ಮಾಡಬೇಕಿದ್ದ ಅರ್ಚಕರು ಹಣಕ್ಕಾಗಿ ದೇವರ ಮುಂದೆಯೇ ಕಾಳಗ ನಡೆಸಿರುವುದು ವಿನಾಯಕನ ಭಕ್ತರಲ್ಲಿ ನೋವು ಉಂಟು ಮಾಡಿದೆ.

Advertisement

ಇದನ್ನೂ ಓದಿ:  ನಾವೂರು ಜಾತ್ರೆ: ವೀಣಾ ಬನ್ನಂಜೆ ಅವರ ಪ್ರವಚನ, ಕಿಕ್ಕಿರಿದು ಸೇರುತ್ತಿರುವ ಭಕ್ತರು

ಇಬ್ಬರು ಅರ್ಚಕರ ನಡುವೆ ಪ್ರಾರಂಭದಲ್ಲಿ ವಾಗ್ವಾದ ನಡೆದಿದ್ದು, ಬಳಿಕ ಕಾಣಿಕೆ ಹಾಕಿದ್ದ ಕೊಡವನ್ನು ಎಳೆದಾಡಿಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಕಾಳಗವನ್ನು ನೋಡಿ ಭಕ್ತರು ಆಘಾತಕ್ಕೊಳಗಾದರು.

ಸುಮಾರು 1500 ವರ್ಷಗಳ ಇತಿಹಾಸ ಹೊಂದಿರುವ, ರಾಜ್ಯ, ದೇಶ ವಿದೇಶದಲ್ಲೂ ಹೆಸರು ಪಡೆದಿರುವ ಹಾಗೂ ಭಕ್ತ ಮಂದಿಯ ಕಷ್ಟಗಳನ್ನ ನೀಗಿಸುವ, ಸಂಕಷ್ಟಗಳನ್ನು ನಿವಾರಿಸುವ, ಇಷ್ಟಾರ್ಥಗಳನ್ನು ಈಡೇರಿಸುವ ಭಕ್ತರ ನಂಬಿಕೆಯ ಈ ದೇವಾಲಯದ ಅರ್ಚಕರ ಕಾಳಗಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗಿದೆ.

ಅರ್ಚಕರ ಕಾಳಗದ ವಿಡಿಯೋ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

(ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com)

News Source : Social media

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು