Breaking News

ಪಜೀರು ಗೋವಣಿತಾಶ್ರಯ ಗೋಶಾಲೆಗೆ ಗೋರಕ್ಷಾ ನಿಧಿ ಸೇನೆಯಿಂದ ಧನ ಸಹಾಯ

ಮಂಗಳೂರು: ಜಿಲ್ಲೆಯಲ್ಲಿ ಅನೇಕ ಗೋಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಖಾಸಗಿ ಗೋಶಾಲೆಗಳೂ ಸೇರಿವೆ. ಗಂಡು ಕರುಗಳನ್ನು ಅಥವಾ ತಂದುಬಿಟ್ಟ ವಯಸ್ಸಾದ ದನಗಳು ಅಥವಾ ಕಸಾಯಿಖಾನೆಗೆ ಕೊಂಡೊಯ್ಯುವಾಗ ರಕ್ಷಣೆಗೊಳಪಟ್ಟ ದನಗಳನ್ನು ಇಂತಹ ಗೋಶಾಲೆಗಳಿಗೆ ಒಪ್ಪಿಸಲಾಗುತ್ತದೆ. ಇಲ್ಲಿ ಅವುಗಳ ಆರೈಕೆ ಮಾಡಲಾಗುತ್ತದೆ.

ಹೇಳಿಕೇಳಿ ಒಂದು ಗೋಶಾಲೆಗಳನ್ನು ನಡೆಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಅನೇಕ ಗೋಶಾಲೆಗಳು ಹಣಕಾಸಿನ ಕೊರತೆಯನ್ನು ಎದುರಿಸುತ್ತಿದ್ದು, ಸಾರ್ವಜನಿಕರ ಅಥವಾ ದಾನಿಗಳ ನೆರವು ಅತ್ಯವಶ್ಯಕವಾಗಿದೆ. ಅಂತೆಯೇ, ಜೀತೇಶ್ ಮಿಜಾರ್ ಅವರು ಪಜೀರಿನಲ್ಲಿರುವ ಗೋವಣಿತಾಶ್ರಯ ಟ್ರಸ್ಟ್ ಗೋಶಾಲೆಯಲ್ಲಿನ ಗೋವುಗಳ ಪರಿಸ್ಥಿತಿಯನ್ನು ಕಂಡು ಮರುಗಿದರು.

Advertisement

ಇದನ್ನೂ ಓದಿ: Belthangady: ನಿಗೂಢವಾಗಿ ಸಾವನ್ನಪ್ಪಿದ ಸುಮಂತ್ ಕೇಸ್‌ಗೆ ಟ್ವಿಸ್ಟ್: ಕೆರೆಯಲ್ಲಿ ಮಾರಕಾಸ್ತ್ರ ಪತ್ತೆ

ಗೋಶಾಲೆಯ ವಿಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗೋ ರಕ್ಷಾನಿಧಿ ಸೇನೆ ಎಂಬ ಗ್ರೂಪ್ ಮಾಡಿ ಧನ ಸಂಗ್ರಹ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಅದರಂತೆ ಜನವರಿ ತಿಂಗಳಲ್ಲಿ ದಾನಿಗಳು ನೀಡಿದ ಒಟ್ಟು ೫೪,೫೦೦ ರೂಪಾಯಿಯನ್ನು ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರ ಉಪಸ್ಥಿತಿಯಲ್ಲಿ ಪಜೀರು ಗೋ ಶಾಲೆಗೆ ಹಸ್ತಾಂತರಿಸಲಾಯಿತು.

ಜೀತೇಶ್ ಮಿಜಾರ್ ಅವರ ಗೋಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಗುರುಪುರ ಪ್ರಖಂಡ, ಇನ್ನಷ್ಟು ಗೋ ಮಾತೆಯ ಸೇವೆಯನ್ನು ಮಾಡುವ ಶಕ್ತಿಯನ್ನು ಗೋಮಾತೆ ಅನುಗ್ರಹಿಸಲಿ ಎಂದು ಹಾರೈಸಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು