ಖಗೋಳಶಾಸ್ತ್ರಜ್ಞರು ಮತ್ತು ಆಕಾಶ ವೀಕ್ಷಕರು ಕಾತುರದಿಂದ ಕಾಯುತ್ತಿರುವ ವರ್ಷದ ಮೊದಲ ಅದ್ಭುತ ಖಗೋಳ ವಿದ್ಯಮಾನವೊಂದು ಸಂಭವಿಸಲು ಕ್ಷಣಗಣನೆ ಆರಂಭವಾಗಿದ್ದು, ಫೆ.17 ರಂದು ಮೊದಲ ಸೂರ್ಯಗ್ರಹಣ ಜರುಗಲಿದೆ.
ಇದನ್ನೂ ಓದಿ: ಕರ್ನಾಟಕ ಬಜೆಟ್ 2026: ಮಾರ್ಚ್ 6 ರಿಂದ ಅಧಿವೇಶನ ಆರಂಭ; ಸಿದ್ದರಾಮಯ್ಯರಿಂದ ದಾಖಲೆಯ 17ನೇ ಬಜೆಟ್ ಮಂಡನೆ!

ನಭದಲ್ಲಿ ಕಾಣಲಿದೆ ‘ಬೆಂಕಿಯ ಉಂಗುರ’
ಈ ಸೂರ್ಯ ಗ್ರಹಣವು ‘ವಾರ್ಷಿಕ ಸೂರ್ಯಗ್ರಹಣ’ವಾಗಿದ್ದು, ಚಂದ್ರನು ಸೂರ್ಯನ ಮಧ್ಯಭಾಗವನ್ನು ಮಾತ್ರ ಆವರಿಸುತ್ತಾನೆ. ಈ ವೇಳೆ ಸೂರ್ಯನ ಅಂಚುಗಳು ಪ್ರಕಾಶಮಾನವಾದ ಉಂಗುರದಂತೆ ಕಂಗೊಳಿಸಿ, ಸೂರ್ಯ ಗ್ರಹಣವನ್ನು ಸೃಷ್ಟಿಸುತ್ತದೆ. ಕೆಲವೊಮ್ಮೆ ಇದನ್ನು ಬೆಂಕಿಯ ಉಂಗುರ ಅಥವಾ ಸೂರ್ಯನ ಉಂಗುರ ಎಂದು ಕರೆಯಲಾಗುತ್ತದೆ.
ಸೂರ್ಯಗ್ರಹಣದ ಸಮಯ:
ಭಾರತೀಯ ಕಾಲಮಾನದ ಪ್ರಕಾರ, ಗ್ರಹಣವು ಮಧ್ಯಾಹ್ನ 3:26ಕ್ಕೆ ಪ್ರಾರಂಭವಾಗಿ ಸುಮಾರು ಸಂಜೆ 7:57 ರವರೆಗೆ ಇರುತ್ತದೆ. ಇದರ ಒಟ್ಟು ಅವಧಿ ಸುಮಾರು 4 ಗಂಟೆ 30 ನಿಮಿಷಗಳಾಗಿರುತ್ತದೆ. ಆದಾಗ್ಯೂ, ಇದರ ಗೋಚರತೆಯು ವಿವಿಧ ದೇಶಗಳಲ್ಲಿ ಬದಲಾಗಬಹುದು.
ಭಾರತದಲ್ಲಿ ಸೂರ್ಯಗ್ರಹಣ ಗೋಚರಿಸುತ್ತದೆಯೇ?
ಈ ಸೂರ್ಯ ಗ್ರಹಣವು ಭಾರತದಿಂದ ಗೋಚರಿಸುವುದಿಲ್ಲ. ಬದಲಾಗಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ, ಬೋಟ್ಸ್ವಾನಾ, ನಮೀಬಿಯಾ, ಮಾರಿಷಸ್, ತಾಂಜಾನಿಯಾ, ಅರ್ಜೆಂಟೀನಾ, ಅಂಟಾರ್ಕ್ಟಿಕಾ ಮತ್ತು ದಕ್ಷಿಣ ಅಮೆರಿಕಾದ ದೇಶಗಳಲ್ಲಿ ಕಾಣಿಸುತ್ತದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

