Breaking News

Giraffe Death : ಮೈಸೂರು ಮೃಗಾಲಯದ ಯುವರಾಜ ಇನ್ನಿಲ್ಲ

ಮೈಸೂರು: ಶ್ರೀ ಚಾಮರಾಜೇಂದ್ರ ಮೃಗಾಲಯ (ಮೈಸೂರು ಮೃಗಾಲಯ)ದ ಪ್ರಮುಖ ಆಕರ್ಷಣೆಯಾಗಿದ್ದ 25 ವರ್ಷದ ಗಂಡು ಜಿರಾಫೆ ‘ಯುವರಾಜ’ ವಯೋಸಂಬಂಧಿತ ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಜನವರಿ 28ರಂದು ಮೃತಪಟ್ಟಿದೆ.

ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಅನುಷಾ ಅವರು ಈ ವಿಷಯವನ್ನು ಖಚಿತಪಡಿಸಿದ್ದು, ಯುವರಾಜ ಬೆಳಗ್ಗೆ ಸುಮಾರು 10.30ರ ಸುಮಾರಿಗೆ ಕೊನೆಯುಸಿರು ಬಿಟ್ಟಿದೆ ಎಂದು ತಿಳಿಸಿದ್ದಾರೆ. ಮೈಸೂರು ಮೃಗಾಲಯದಲ್ಲಿ ಇದುವರೆಗೆ ಬದುಕಿದ್ದ ಅತಿಹಳೆಯ ಜಿರಾಫೆ ಇದೇ ಆಗಿದೆ.

Advertisement

ಇದನ್ನೂ ಓದಿ : Scholarship : 3 ಕೋಟಿ ರೂ. ವಿದ್ಯಾರ್ಥಿವೇತನ ಪಡೆದ ಅವಳಿ ಸಹೋದರಿಯರು !

2001ರ ಡಿಸೆಂಬರ್ 7ರಂದು ಜನಿಸಿದ ಯುವರಾಜ, ಜರ್ಮನಿಯ ಮೃಗಾಲಯದಿಂದ 1987ರಲ್ಲಿ ಮೈಸೂರಿಗೆ ತರಲಾಗಿದ್ದ ಹೆನ್ರಿ ಮತ್ತು ಹನಿ ಎಂಬ ಜಿರಾಫೆಗಳ ಸಂತಾನವಾಗಿದ್ದು, ಜನನದ ನಂತರ ಪ್ರಾಣಿಪಾಲಕರು ಕೈಯಿಂದಲೇ ಪೋಷಣೆ ಮಾಡಿ ಬೆಳೆಸಿದ್ದು, ಅವರ ಆರೈಕೆಯಲ್ಲೇ ಯುವರಾಜ ಬೆಳೆದಿತ್ತು ಎಂದು ಅನುಷಾ ತಿಳಿಸಿರುತ್ತಾರೆ.

ಹೆನ್ರಿ ಮತ್ತು ಹನಿ ಜೋಡಿ ಹಿಂದೆ ಕೃಷ್ಣರಾಜ, ಚಾಮರಾಜ ಮತ್ತು ನರಸಿಂಹರಾಜ ಎಂಬ ಮರಿಗಳಿಗೂ ಜನ್ಮ ನೀಡಿದ್ದು, ಆ ಜೋಡಿಯ ಕೊನೆಯ ಮರಿ ಯುವರಾಜವಾಗಿತ್ತು. ಎರಡು ದಶಕಕ್ಕೂ ಹೆಚ್ಚು ಕಾಲ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದ್ದ ಯುವರಾಜನ ನಿಧನವು ಸಿಬ್ಬಂದಿ ಹಾಗೂ ವನ್ಯಜೀವಿ ಪ್ರೇಮಿಗಳಲ್ಲಿ ಆಳವಾದ ದುಃಖ ಮೂಡಿಸಿದೆ. ಮೈಸೂರು ಮೃಗಾಲಯ ಆಡಳಿತವು ಅಧಿಕೃತವಾಗಿ ಸಂತಾಪ ವ್ಯಕ್ತಪಡಿಸಿದೆ. ಸುಮಾರು ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಮೈಸೂರು ಮೃಗಾಲಯವು ಬಂಧನದಲ್ಲಿಯೇ ಜಿರಾಫೆಗಳ ಯಶಸ್ವಿ ಸಂತಾನೋತ್ಪತ್ತಿ ನಡೆಸಿದ ಭಾರತದ ಪ್ರಮುಖ ಮೃಗಾಲಯಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

 

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು