ಅಸ್ಸಾಂ: ದೇಶದಲ್ಲಿ ಮಹಿಳೆಯರ ಮೇಲಿನ ಸುರಕ್ಷತೆ ಪಶ್ನೆ ಮತ್ತೆ ಮತ್ತೆ ಎದುರಾಗುತ್ತಿದೆ. ಅಸ್ಸಾಂನಲ್ಲಿ ಭಾವಿ ಪತಿಯೊಂದಿಗೆ ಲಾಂಗ್ ಡ್ರೈವ್ ಹೋಗಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿದೆ.
ಸಿಲ್ಟಾರ್ ಬೈಪಾಸ್‌ನಲ್ಲಿ 28 ವರ್ಷದ ಯುವತಿಯನ್ನು ಕಾರಿನಿಂದ ಹೊರಗೆಳೆದು, ಆಕೆ ಮದುವೆಯಾಗಲಿದ್ದ ಹುಡುಗನ ಮುಂದೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿದೆ.

ಇದನ್ನೂ ಓದಿ: 100 ವರ್ಷದ ನಂತರ ಹೋಳಿ ದಿನದಂದೇ ವರ್ಷದ ಮೊದಲ ಚಂದ್ರಗ್ರಣ!
ಫೆ.19ರ ರಾತ್ರಿ ಯುವತಿ ಮತ್ತು ಆಕೆಯ ಭಾವಿ ಪತಿ ಸಿಲ್ಟಾರ್‌ನ ರಾಮನಗರ ಬೈಪಾಸ್ ರಸ್ತೆಯ ಮೂಲಕ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಘಟನೆ ನಡೆದಿದೆ.
ಯುವಕರ ಗುಂಪೊಂದು ಆಕೆಯನ್ನು ಕಾರಿನಿಂದ ಹೊರಗೆ ಎಳೆದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದೆ. ಅಲ್ಲದೆ, 10,000 ರೂ. ಹಣ ನೀಡುವಂತೆ ಆಕೆಯನ್ನು ಒತ್ತಾಯಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

