ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ! ಆರು ತಿಂಗಳಲ್ಲೇ ಅತಿ ದೊಡ್ಡ ಸಾಪ್ತಾಹಿಕ ಇಳಿಕೆ

ಲಂಡನ್: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಶುಕ್ರವಾರ ತೀವ್ರ ಕುಸಿತ ಕಂಡಿವೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಉದ್ವಿಗ್ನತೆ ಕಡಿಮೆಯಾಗುವ ಮುನ್ಸೂಚನೆ ಸಿಕ್ಕ ಬೆನ್ನಲ್ಲೇ ತೈಲ ದರಗಳು ಕಳೆದ ಆರು ತಿಂಗಳಲ್ಲೇ ಅತಿ ದೊಡ್ಡ ಇಳಿಕೆಯನ್ನು ದಾಖಲಿಸಿವೆ. ಬ್ರೆಂಟ್ ಕ್ರೂಡ್ ಫ್ಯೂಚರ್ಸ್ ಪ್ರತಿ ಬ್ಯಾರೆಲ್‌ಗೆ 107.17 ಡಾಲರ್‌ಗೆ ಕುಸಿದಿದೆ (ಶೇ. 0.8 ರಷ್ಟು ಇಳಿಕೆ). ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ದರವು ಪ್ರತಿ ಬ್ಯಾರೆಲ್‌ಗೆ 93.46 ಡಾಲರ್‌ಗೆ ತಲುಪಿದೆ.

ಇರಾನ್ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವ ಮಾತುಕತೆಗಳು ಸಕಾರಾತ್ಮಕವಾಗಿ ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಇರಾನ್‌ನ ಇಂಧನ ಸ್ಥಾವರಗಳ ಮೇಲೆ 10 ದಿನಗಳ ಕಾಲ ದಾಳಿ ನಡೆಸುವುದಿಲ್ಲ ಎಂದು ಘೋಷಿಸಿರುವುದು ಮಾರುಕಟ್ಟೆಯಲ್ಲಿನ ಭೀತಿಯನ್ನು ಕಡಿಮೆ ಮಾಡಿದೆ. ಗುರುವಾರ ಬೆಲೆಗಳು ಏರಿಕೆ ಕಂಡಿದ್ದರೂ, ಇಡೀ ವಾರದ ಲೆಕ್ಕಾಚಾರದಲ್ಲಿ ಎರಡೂ ಬೆಂಚ್‌ಮಾರ್ಕ್‌ಗಳು ಶೇ. 4.6 ರಷ್ಟು ಕುಸಿತ ಕಂಡಿವೆ.

Advertisement

ಇದನ್ನೂ ಓದಿ: ಕೆಲಸ ಬಿಟ್ಟ 48 ಗಂಟೆಯೊಳಗೆ ಫುಲ್ ಸೆಟಲ್ಮೆಂಟ್ ಕಡ್ಡಾಯ! ಹೊಸ ಕಾರ್ಮಿಕ ಕಾಯ್ದೆ ಜಾರಿ

ಒಂದು ವೇಳೆ ಯುದ್ಧವು ಶೀಘ್ರದಲ್ಲೇ ಕೊನೆಗೊಂಡರೆ ತೈಲ ಬೆಲೆಗಳು ಇನ್ನು ವೇಗವಾಗಿ ಕುಸಿಯಲಿವೆ. ಆದರೆ ಯುದ್ಧ ದೀರ್ಘಕಾಲ ಮುಂದುವರಿದರೆ ಬೆಲೆಗಳು 200 ಡಾಲರ್‌ ಗಡಿ ದಾಟಬಹುದು ಎಂದು ಮ್ಯಾಕ್ವಾರಿ ಗ್ರೂಪ್ ವಿಶ್ಲೇಷಕರು ಎಚ್ಚರಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು