ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಇಂದು ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆ! ಹತ್ತು ಗ್ರಾಂಗೆ 750 ರೂ. ಕಮ್ಮಿ!

ಬೆಂಗಳೂರು: ಕಳೆದ ವಾರ ಸತತವಾಗಿ ಏರಿಕೆ ಕಂಡಿದ್ದ ಚಿನ್ನದ ದರಕ್ಕೆ ಇಂದು ಸೋಮವಾರ (ಮಾರ್ಚ್ 30) ಬ್ರೇಕ್ ಬಿದ್ದಿದೆ. ವಾರದ ಆರಂಭದಲ್ಲೇ ಬಂಗಾರದ ಬೆಲೆ ಗಣನೀಯವಾಗಿ ಕುಸಿದಿರುವುದು ಗ್ರಾಹಕರಲ್ಲಿ ಸಂತಸ ಮೂಡಿಸಿದೆ. ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 750 ರೂ. ಗಳಷ್ಟು ಇಳಿಕೆಯಾಗಿದೆ.

ಇಂದಿನ ಚಿನ್ನದ ದರ ಪಟ್ಟಿ (10 ಗ್ರಾಂ):

22 ಕ್ಯಾರೆಟ್ ಆಭರಣ ಚಿನ್ನ: 1,35,000 ರೂ.

24 ಕ್ಯಾರೆಟ್ ಅಪರಂಜಿ ಚಿನ್ನ: 1,47,280 ರೂ.

ಇದನ್ನೂ ಓದಿ: ಕಚ್ಚಾ ತೈಲ ಬೆಲೆಯಲ್ಲಿ ಭಾರಿ ಕುಸಿತ! ಆರು ತಿಂಗಳಲ್ಲೇ ಅತಿ ದೊಡ್ಡ ಸಾಪ್ತಾಹಿಕ ಇಳಿಕೆ

ಬೆಳ್ಳಿ ದರ ವಿವರ:

ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ.

ಬೆಂಗಳೂರು ಮತ್ತು ಭಾರತದ ಪ್ರಮುಖ ನಗರಗಳು: 100 ಗ್ರಾಂ ಬೆಳ್ಳಿಗೆ 24,500 ರೂ. (ಅಂದರೆ ಪ್ರತಿ ಕೆಜಿಗೆ 2.45 ಲಕ್ಷ ರೂ.)

ತಮಿಳುನಾಡು ಮತ್ತು ಕೇರಳ: ಇಲ್ಲಿ ಬೆಲೆ ಸ್ವಲ್ಪ ಹೆಚ್ಚಿದ್ದು, 100 ಗ್ರಾಂಗೆ 25,000 ರೂ. ನಷ್ಟಿದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರವಾಗಿದ್ದರೂ, ಭಾರತೀಯ ಮಾರುಕಟ್ಟೆಯಲ್ಲಿನ ಸ್ಥಳೀಯ ಬೇಡಿಕೆಯ ವ್ಯತ್ಯಾಸದಿಂದಾಗಿ ಈ ಇಳಿಕೆ ಕಂಡುಬಂದಿದೆ ಎನ್ನಲಾಗಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು