ಬೆಂಗಳೂರು: ಭಾರತೀಯ ಆಭರಣ ಮಾರುಕಟ್ಟೆಯಲ್ಲಿ ಇಂದು (ಮಂಗಳವಾರ) ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದ್ದರೆ, ಬೆಳ್ಳಿ ದರದಲ್ಲಿ ಏರಿಕೆ ದಾಖಲಾಗಿದೆ. ನಿನ್ನೆ ಜಾಗತಿಕ ಹಾಗೂ ದೇಶೀಯ ಮಾರುಕಟ್ಟೆಯ ಚಲನವಲನಗಳ ಹಿನ್ನೆಲೆಯಲ್ಲಿ ಇಂದಿನ ಅಪರಂಜಿ ಹಾಗೂ ಆಭರಣ ಚಿನ್ನದ ಹೊಸ ದರಗಳನ್ನು ಪ್ರಕಟಿಸಲಾಗಿದೆ.
ಇಂದು ಚಿನ್ನದ ಬೆಲೆಯಲ್ಲಿ ಗ್ರಾಮ್ಗೆ 20 ರೂ. ಗಳಷ್ಟು ಅಲ್ಪ ಇಳಿಕೆ ಕಂಡುಬಂದಿದೆ. ನಿನ್ನೆ 13,220 ರೂ. ರಷ್ಟಿದ್ದ 22 ಕ್ಯಾರಟ್ ಚಿನ್ನದ ಬೆಲೆ ಇಂದು ಗ್ರಾಮ್ಗೆ 20 ರೂ. ಇಳಿಕೆಯಾಗಿ 13,200 ರೂ,ಗೆ ತಲುಪಿದೆ. 24 ಕ್ಯಾರಟ್ ಚೊಕ್ಕ ಚಿನ್ನದ ಬೆಲೆ ಪ್ರಸ್ತುತ ಗ್ರಾಮ್ಗೆ 14,400 ರೂ. ರಷ್ಟಿದೆ. ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಇದನ್ನೂ ಓದಿ: ‘ಪಿಎಂ ರಾಹತ್’ ಕಟ್ಟುನಿಟ್ಟಾಗಿ ಜಾರಿಗೊಳಿಸಿ; ನಿರ್ಲಕ್ಷ್ಯ ತೋರಿದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ: ಕ್ಯಾ. ಬ್ರಿಜೇಶ್ ಚೌಟ
ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಹಾಗೂ ನೆರೆಯ ತಮಿಳುನಾಡಿನ ಚೆನ್ನೈ ಮೊದಲಾದ ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆ ಪ್ರಸ್ತುತ ಗ್ರಾಮ್ಗೆ 235 ರೂ.ಗೆ ಏರಿಕೆಯಾಗಿದೆ.

