Breaking News

High Court : ಸೆಷನ್ ಕೋರ್ಟ್‌ಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರವಿಲ್ಲ : ಹೈಕೋರ್ಟ್

ಬೆಂಗಳೂರು : ಕೊಲೆ ಪ್ರಕರಣದಲ್ಲಿ ಅಪರಾಧಿಗೆ ಸ್ವಾಭಾವಿಕ ಮರಣದವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರವು ಸೆಷನ್  ನ್ಯಾಯಾಲಯಕ್ಕೆ ಇಲ್ಲ. ಇಂತಹ ಶಿಕ್ಷೆಯನ್ನು ವಿಧಿಸಲು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್‌ಗಳಂತಹ ಸಂವಿಧಾನಾತ್ಮಕ ನ್ಯಾಯಾಲಯಗಳಿಗೆ ಮಾತ್ರ ಅಧಿಕಾರವಿದೆ ಎಂದು ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿಗಳಾದ ಎಚ್.ಪಿ. ಸಂದೇಶ್ ಮತ್ತು ವೆಂಕಟೇಶ್ ನಾಯಕ್ ಟಿ. ಅವರನ್ನೊಳಗೊಂಡ ವಿಭಾಗೀಯ ಪೀಠ, ಮಠದ ಕಾರ್ಮಿಕ ರುದ್ರೇಶ್ (21) ಸಲ್ಲಿಸಿದ್ದ ಮೇಲ್ಮನವಿಯನ್ನು ಭಾಗಶಃ ಅಂಗೀಕರಿಸಿ ಈ ಆದೇಶ ನೀಡಿದೆ. ಸೆಷನ್  ಕೋರ್ಟ್ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಸೆಕ್ಷನ್ 428ರ ಅಡಿಯಲ್ಲಿ ದೊರಕುವ ‘ಸೆಟ್ ಆಫ್’ ಸೌಲಭ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ. ಆದ್ದರಿಂದ ‘ಸ್ವಾಭಾವಿಕ ಮರಣದವರೆಗೆ ಜೀವಾವಧಿ ಶಿಕ್ಷೆ’ ಎಂಬ ಶಿಕ್ಷೆಯನ್ನು ರದ್ದುಗೊಳಿಸಿ, ಸಾಮಾನ್ಯ ಜೀವಾವಧಿ ಶಿಕ್ಷೆಯಾಗಿ ಪರಿಷ್ಕರಿಸಲಾಗುತ್ತದೆ, ಎಂದು ಪೀಠ ಹೇಳಿದೆ. ಸೆಕ್ಷನ್ 428 ಪ್ರಕಾರ, ತನಿಖೆ, ವಿಚಾರಣೆ ಅಥವಾ ನ್ಯಾಯಾಲಯದ ವಿಚಾರಣೆಯ ಅವಧಿಯಲ್ಲಿ ಆರೋಪಿಯು ಅನುಭವಿಸಿರುವ ಬಂಧನಾವಧಿಯನ್ನು ಶಿಕ್ಷೆಯ ಅವಧಿಗೆ ಕಡಿತಗೊಳಿಸಬೇಕು ಎಂದು ಕಾನೂನಿನಲ್ಲಿ ನಿಗದಿಪಡಿಸಲಾಗಿದೆ.

Advertisement

ಇದನ್ನೂ ಓದಿ : America : ಭಾರೀ ಚಳಿಗೆ ಥಂಡಾ ಹೊಡೆದ ಅಮೆರಿಕಾ

ಪ್ರಕರಣದ ಹಿನ್ನೆಲೆ ;
2017ರ ಏಪ್ರಿಲ್‌ನಲ್ಲಿ ರುದ್ರೇಶ್ ಎಂಬಾತ ದೂರುದಾರೆಯ ಮೂರುವರೆ ವರ್ಷದ ಮಗುವನ್ನು ಕೊಲೆ ಮಾಡಿದ್ದ. ದೂರುದಾರೆ ಹಾಗೂ ಆಕೆಯ ತಾಯಿ ಮಠದ ವ್ಯವಹಾರಗಳ ಬಗ್ಗೆ ಆತನಿಗೆ ಸಲಹೆ ನೀಡುತ್ತಿದ್ದುದರಿಂದ ಅವರ ಮೇಲೆ ದ್ವೇಷ ಹೊಂದಿದ್ದ ಆರೋಪಿಯು ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ. ವಿಚಾರಣಾ ನ್ಯಾಯಾಲಯವು ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ, 2017ರ ನವೆಂಬರ್‌ನಲ್ಲಿ ಆರೋಪಿಯನ್ನು ಕೊಲೆ ಹಾಗೂ ಅಪಹರಣ ಪ್ರಕರಣಗಳಲ್ಲಿ ದೋಷಿಯಾಗಿ ಪರಿಗಣಿಸಿ, ಜೀವಾವಧಿ ಶಿಕ್ಷೆಯನ್ನು “ಸ್ವಾಭಾವಿಕ ಮರಣದವರೆಗೆ” ಎಂದು ವಿಧಿಸಿತ್ತು. ವಿಚಾರಣೆ ಆರಂಭವಾದ ಮೂರು ತಿಂಗಳಲ್ಲೇ ತೀರ್ಪು ಪ್ರಕಟವಾಗಿತ್ತು. ಆದರೆ ಮೇಲ್ಮನವಿಯಲ್ಲಿ ಆರೋಪಿಯು, ಪರಿಹಾರವಿಲ್ಲದ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಂವಿಧಾನಾತ್ಮಕ ನ್ಯಾಯಾಲಯಗಳಿಗೆ ಮಾತ್ರವಿದ್ದು, ಸೆಷನ್ಸ್ ಕೋರ್ಟ್‌ಗೆ ಇಲ್ಲ ಎಂದು ವಾದಿಸಲಾಗಿದೆ.

ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸಿದ ಹೈಕೋರ್ಟ್ ಪೀಠ, ಈ ಪ್ರಕರಣವು ಸಾಕ್ಷ್ಯಾಧಾರಗಳ ಮೇಲೆ ಆಧಾರಿತವಾಗಿದ್ದರೂ, ಆರೋಪಿಯ ವಿರುದ್ಧ ಉದ್ದೇಶ ಮತ್ತು ಮೃತದೇಹ ಪತ್ತೆ ಸೇರಿದಂತೆ ಎಲ್ಲಾ ಅಂಶಗಳು ಸಾಬೀತಾಗಿವೆ. ವೈದ್ಯಕೀಯ ಮತ್ತು ವೈಜ್ಞಾನಿಕ ಸಾಕ್ಷ್ಯಗಳೂ ಆರೋಪಿಗೆ ವಿರುದ್ಧವಾಗಿವೆ, ಎಂದು ಅಭಿಪ್ರಾಯಪಟ್ಟಿದೆ. ಶಿಕ್ಷೆಯ ಕುರಿತು ಮಾತನಾಡಿದ ಪೀಠವು, ಈ ಕೊಲೆಯ ಹಿಂದೆ ಇರುವ ಉದ್ದೇಶ ದೂರುದಾರೆಯಾದ ತಾಯಿ (PW-1), ಅಜ್ಜಿ (PW-2) ಹಾಗೂ ದೊಡ್ಡಜ್ಜಿ (PW-4) ವಿರುದ್ಧದ ದ್ವೇಷ ಮಾತ್ರ ಕಾರಣ ಎಂದು ಗಮನಾರ್ಹವಾಗಿ ಹೇಳಿದೆ. ಈ ಮೂಲಕ, ದೋಷಾರೋಪಣೆಯನ್ನು ಹೈಕೋರ್ಟ್ ದೃಢಪಡಿಸಿದ್ದು, ಆದರೆ ಶಿಕ್ಷೆಯನ್ನು ಜೀವಾವಧಿಯಿಂದ, ಸಾಮಾನ್ಯ ಜೀವಾವಧಿ ಶಿಕ್ಷೆಯಾಗಿ ಪರಿಷ್ಕರಿಸಿದೆ.

ರಾಜ್ಯದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು