ಪುತ್ತೂರು: ಹಿಂದೂ ಧರ್ಮವು ಸಾವಿರಾರು ವರ್ಷಗಳ ಇತಿಹಾಸ ಹೊಂದಿದ್ದು, ವಿಶಾಲ ದೃಷ್ಟಿಕೋನ ಹೊಂದಿದೆ. ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಸಮಾಜದ ಏಕತೆ, ಸಾಮಾಜಿಕ ಪರಿವರ್ತನೆ, ಧಾರ್ಮಿಕ ಪ್ರಜ್ಞೆ, ರಾಷ್ಟ್ರೀಯ ಪ್ರಜ್ಞೆ ಹಾಗೂ ಧಾರ್ಮಿಕ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಧ್ಯೇಯವಾಗಿರಲಿ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ನ ರೋಹಿತ್ ಕುಮಾರ್ ಮಂಗಳೂರು ತಿಳಿಸಿದರು.
ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಮಹಾವಿಷ್ಣು ದೇವಸ್ಥಾನದ ವಠಾರದಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿ ಪುತ್ತೂರು ಗ್ರಾಮಾಂತರ ತಾಲೂಕು ಕೋಡಿಂಬಾಡಿ ಮಂಡಲದ ವತಿಯಿಂದ ನಡೆದ ಬ್ರಹತ್ ಶೋಭಯಾತ್ರೆ ಹಾಗೂ ಹಿಂದೂ ಸಂಗಮ ಕಾರ್ಯಕ್ರಮದ ದಿಕ್ಸುಚಿ ಭಾಷಣದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಂಘ ಶತಾಬ್ದಿ ಕಾರ್ಯಕ್ರಮದ ಅಂಗವಾಗಿ ಪ್ರತಿಯೊಂದು ಗ್ರಾಮ ತಾಲೂಕು ಮಟ್ಟದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೋಡಿಂಬಾಡಿ ವಿನಾಯಕ ನಗರದ ಮಹಿಷಮರ್ದಿನಿ ದೇವಸ್ಥಾನ ದ್ವಾರದಿಂದ ಬ್ರಹತ್ ಶೋಭಯಾತ್ರೆಯು ವಿವಿಧ ಭಜನಾ ತಂಡಗಳ ನೃತ್ಯ ಭಜನೆ, ಕೇರಳದ ಚೆಂಡೆ ವಾದನ, ಭಾರತ ಮಾತೆಯ ಛಾಯಾ ಚಿತ್ರದ ಜೊತೆಯಲ್ಲಿ, ತೆರೆದ ವಾಹನದಲ್ಲಿ ಭಾರತ ಮಾತೆಯ ವೇಷ ಧರಿಸಿದ ಪುಟಾಣಿ ಬಾಲಕಿಯು ವಿಶೇಷ ಆಕರ್ಷಣೆಯಾಗಿತ್ತು. ಹಿಂದೂ ಸಮಾಜದ ಬಂಧು ಭಗಿನಿಯರು ಕಾಲ್ನಡಿಗೆ ಹಾಗೂ ನೂರಾರು ವಾಹನಗಳೊಂದಿಗೆ ಶೋಭಾಯಾತ್ರೆಯು ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಆವರಣಕ್ಕೆ ತಲುಪಿತು.
ಇದನ್ನೂ ಓದಿ: ಮಂಚಿ ಹಿಂದೂ ಸಂಗಮ; ಹಿಂದುತ್ವ ಮತ್ತು ಭಾರತ ಎರಡೂ ಒಂದೆ: ಗಿರೀಶ್ ಕಾಟಿಪಲ್ಲ
ಬಳಿಕ ಸ್ಥಳೀಯ ಕಲಾವಿದರಾದ ವೈಶಾಲಿ ಕುಂದರ್, ಸ್ವಪ್ನ ನೆಕ್ಕಿಲಾಡಿ ಇವರಿಂದ ದೇಶಭಕ್ತಿ ಗೀತೆ, ರಾಷ್ಟ್ರ ಭಕ್ತಿ ಗೀತೆ ನಡೆಯಿತು. ಸಭಾವೇದಿಕೆಯಲ್ಲಿ ಉದಯೋಣ್ಮುಕ ಚಿತ್ರಗಾರ ಸುಜಿತ್ ಶಾಂತಿನಗರ ಸಂಘ ಶತಾಬ್ದಿಯ ಚಿತ್ರ ರಚಿಸಿ ಎಲ್ಲರ ಮನಸೆಳೆದರು.

ಬಳಿಕ ನಡೆದ ಹಿಂದೂ ಸಂಗಮ ಸಭಾ ಕಾರ್ಯಕ್ರಮ ದಲ್ಲಿ ಹಿಂದೂ ಸಂಗಮ ಆಯೋಜನ ಸಮಿತಿಯ ಸಂಯೋಜಕರಾದ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಯನ್ ನೆಕ್ಕಿಲಾಡಿ ದೀಪ ಪ್ರಜ್ವಲನೆ ಮಾಡಿದರು.
ವೇದಿಕೆಯಲ್ಲಿ ಗ್ರಾಮೀಣ ನೀರು ನೈರ್ಮಲ್ಯ ಇಲಾಖೆಯ ನಿವೃತ್ತ ಅಧಿಕಾರಿ ಮನೋಹರ್ ಹೆಚ್. ಹಾಗೂ ಭುವನೇಶ್ವರಿ ನಾಗೇಶ್ ಶರ್ಮ ಮಠಂತಬೆಟ್ಟು ಉಪಸ್ಥಿತರಿದ್ದರು. ನಿಶಿತ್ ಬೊಲ್ಲಾರ್ ಪ್ರಾರ್ಥಿಸಿದರು. ಮೋಹನ್ ಪಕ್ಕಳ ಕುಂಡಾಪು ಸ್ವಾಗತಿಸಿ, ರತ್ನಾಕರ ಇಪ್ಪನೋಟ್ಟು ವಂದಿಸಿದರು. ಕುಮಾರನಾಥ್ ಪಲ್ಲತ್ತಾರು ದೀಕ್ಷಿತ್ ಬೆಳ್ಳಿಪ್ಪಾಡಿ, ಗಿರೀಶ್ ಅಲಿಮೆ ಜೀವನ್ ಶಾಂತಿನಗರ, ಪ್ರಶಾಂತ್ ನೆಕ್ಕಿಲಾಡಿ, ಮೋನಪ್ಪ ಗೌಡ ಪಿಲಿಗುಂಡ, ಅನೇಶ್ ಉಬಾರ್ ಹಾಗೂ ರಾಜೇಶ್ ಶಾಂತಿನಗರ ಹಾಗೂ ಸಚಿನ್ ಜೈನ್ ಹಳೆಯೂರು ವಿವಿಧ ಕಾರ್ಯಕ್ರಮಗಳನ್ನು ನಿರೂಪಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

