Breaking News

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅಚ್ಚರಿಯ ಘಟನೆ: 1908ರ ತಾಮ್ರ ಶಾಸನ ಪತ್ತೆ!

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ ನಡೆಯುತ್ತಿರುವ ಜೀರ್ಣೋದ್ಧಾರ ಕಾರ್ಯದ ವೇಳೆ ಶತಮಾನದ ಹಿಂದಿನ ಮಹತ್ವದ ತಾಮ್ರದ ಶಾಸನವೊಂದು ಲಭ್ಯವಾಗಿದೆ. ದೇವಸ್ಥಾನದ ಅಭಿವೃದ್ಧಿಯ ಭಾಗವಾಗಿ ರಾಜಾಂಗಣದಲ್ಲಿರುವ ಹಳೆಯ ಕಟ್ಟೆಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಕಂಡನಾಯಕನ ಕಟ್ಟೆಯನ್ನು ತೆರವುಗೊಳಿಸುವಾಗ, ದೇವರು ಆಸೀನರಾಗುವ ಪೀಠದ ಒಳಭಾಗದಲ್ಲಿ ಈ ತಾಮ್ರದ ಶಾಸನ ಪತ್ತೆಯಾಗಿದೆ.

ಶಾಸನವನ್ನು ಶುಚಿಗೊಳಿಸಿ ಪರಿಶೀಲಿಸಿದಾಗ, ಇದು 1908ರ ಏಪ್ರಿಲ್ ತಿಂಗಳಲ್ಲಿ ಈ ಕಟ್ಟೆಯನ್ನು ನಿರ್ಮಿಸಿದ ನೆನಪಿಗಾಗಿ ಹಾಕಲಾದ ಶಾಸನ ಎಂದು ತಿಳಿದುಬಂದಿದೆ. ಕಂಡನಾಯಕನ ಕಟ್ಟೆಯು ದೇವಸ್ಥಾನದ ಉತ್ಸವಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಚಂದ್ರಮಂಡಲ ರಥೋತ್ಸವ, ಕೆರೆ ಉತ್ಸವ ಅಥವಾ ಯಾವುದೇ ಸವಾರಿ ಹೊರಡುವ ಮುನ್ನ ದೇವರು ಈ ಕಟ್ಟೆಯ ಮೇಲೆ ಆಸೀನರಾಗಿ ಪೂಜೆ ಸ್ವೀಕರಿಸುವುದು ಇಲ್ಲಿನ ಪುರಾತನ ಸಂಪ್ರದಾಯ.

Advertisement

ಇದನ್ನೂ ಓದಿ: ದಕ್ಷಿಣ ಕನ್ನಡ: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಘೋಷಣೆ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು