Breaking News

ಅಂಬಲಿ ರಾಶಿಗೆ ಮುತ್ತಿನ ಗಿಣಿ: ದೊಡ್ಡ ಮೈಲಾರ ಗೊರವಯ್ಯನ ಕಾರ್ಣಿಕ ನುಡಿ

ವಿಜಯನಗರ: ಹರಪನಹಳ್ಳಿಯ ದೊಡ್ಡ ಮೈಲಾರದಲ್ಲಿ ಗೊರವಯ್ಯನ ಕಾರ್ಣಿಕ ನುಡಿ ಹೊರಬಿದ್ದಿದೆ. ” ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್ ” ಎಂದು ಗೊರವಯ್ಯ ನುಡಿದಿದ್ದಾರೆ.

ಭರತ ಹುಣ್ಣಿಮೆ ಹಿನ್ನೆಲೆ ಪ್ರತಿ ವರ್ಷದಂತೆ ಈ ಬಾರಿಯೂ ಹರಪನಹಳ್ಳಿಯಲ್ಲಿ ಜಾತ್ರಾ ಮಹೋತ್ಸವ ನಡೆದಿದೆ. ಈ ವರ್ಷದ ಕಾರ್ಣಿಕವನ್ನು ಗೊರವಪ್ಪನವರು ಬಿಲ್ಲನ್ನೇರಿ ನಿಂತು, ಶೂನ್ಯವನ್ನು ದಿಟ್ಟಿಸುತ್ತಾ ನುಡಿ ಭಕ್ತರ ಜಯಘೋಷಗಳ ನಡುವೆ ಸದ್ದಲೇ ಪರಾಕ್ ಎಂದು ಹೇಳುವ ಮೂಲಕ ನುಡಿದರು.

Advertisement

ಇದನ್ನೂ ಓದಿಟೆನ್ನಿಸ್ ದಿಗ್ಗಜ ಜೊಕೊವಿಕ್ ರನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದ ಅಲ್ಕರಾಜ್

ಗೊರವಯ್ಯ ಸದ್ದಲೇ ಪರಾಕ್ ಎಂದ ಕೂಡಲೇ ನೆರದಿದ್ದ ಸಾವಿರಾರು ಸಂಖ್ಯೆ ಭಕ್ತ ಸಮೂಹವು ಒಂದು ಕ್ಷಣ ನಿಶ್ಯಬ್ಧವಾಯಿತು. ಆ ಬಳಿಕ ಗೊರವಯ್ಯನವರು ದೇವವಾಣಿಯಾದ ಕಾರ್ಣಿಕವನ್ನು ನುಡಿದರು. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದ ಭಾಗವಾಗಿದೆ. ಇಲ್ಲಿ ಕಾರ್ಣಿಕ ಹೇಳಿದ ನಂತರ, ಮೈಲಾರದಲ್ಲಿ ಮತ್ತೊಂದು ಕಾರ್ಣಿಕ ನಡೆಯುತ್ತದೆ.

ಹರಪನಹಳ್ಳಿಯ ಕಾರ್ಣಿಕವನ್ನು ಸಾವಿರಾರು ಭಕ್ತರು ಬಹಳ ನಂಬುತ್ತಾರೆ. ಈ ಬಾರಿ ಹೇಳಲಾದ “ಅಂಬಲಿ ರಾಶಿಗೆ ಮುತ್ತಿನ ಗಿಣಿ ಸಮೃದ್ಧಿ ಆಯ್ತಲೇ ಪರಾಕ್” ಎಂಬ ನುಡಿ, ರಾಜ್ಯದಲ್ಲಿ ಸಮೃದ್ಧಿ ಮತ್ತು ಸಂತೋಷ ಇರಲಿದೆ ಎಂಬುದರ ಸೂಚನೆ ಎಂದು ಹಲವರು ವಿಶ್ಲೇಷಿಸಿದ್ದಾರೆ. ” ರಾಜ್ಯದ ಜನತೆ ಸುಖದಿಂದ ಇರುತ್ತಾರೆ, ಮಳೆಬೆಳೆ ಚೆನ್ನಾಗಿ ಆಗುತ್ತದೆ” ಎಂದು ಹೇಳಲಾಗಿದೆ. ಈ ಮೂಲಕ ಭಕ್ತರದಲ್ಲಿ ಈ ವರ್ಷ ಆಶಾದಾಯಕವಾಗಿರಲಿದೆ ಎಂಬ ನಂಬಿಕೆ ಬಂದಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು