ಪುತ್ತೂರು: ಕಾರೊಂದು ಬೈಕ್ಗೆ ಡಿಕ್ಕಿ ಪಡಿಸಿ ಸವಾರ ಗಂಭೀರಗೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಮುಖ್ಯರಸ್ತೆಯಲ್ಲಿರುವ ಎಂ.ಸಂಜೀವ ಶೆಟ್ಟಿ ಜವುಳಿ ಮಳಿಗೆ ಮುಂಭಾಗದಲ್ಲಿ ವೇಗವಾಗಿ ಬಂದ ಕಾರು, ಬೈಕ್ ಗೆ ಡಿಕ್ಕಿ ಹೊಡೆದು ಸ್ಥಳದಿಂದ ಒರಾರಿಯಾದ ಘಟನೆ ಜ.28 ರಂದು ರಾತ್ರಿ 11:15 ಗಂಟೆಗೆ ಸಂಭವಿಸಿದೆ.

ಪ್ರತ್ಯಕ್ಷ ದರ್ಶಿಗಳ ಪ್ರಕಾರ, ಅತಿಯಾದ ವೇಗದಿಂದ ಬಂದ ಕಾರು ರಾಂಗ್ ಸೈಡ್ ನಲ್ಲಿ ಬಂದು ಸಂಜೀವಶೆಟ್ಟಿ ಮುಂಭಾಗದಲ್ಲಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಸ್ಥಳೀಯರು ಕಿರುಚಾಡಿ ನಿಲ್ಲಿಸಲು ಯತ್ನಿಸಿದರೂ ಕಾರು ನಿಲ್ಲಿಸದೆ ಚಾಲಕ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಆಯುರ್ವೇದದೊಂದಿಗೆ AI ಸಂಯೋಜನೆ ಅಗತ್ಯ: ಪ್ರಧಾನಿ ಮೋದಿ
ಘಟನೆಯಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ವೇಗಕ್ಕೆ ಬೈಕ್ನ ಹ್ಯಾಂಡಲ್ ತುಂಡಾಗಿದೆ
ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ತನಿಖೆ ಪ್ರಾರಂಭಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

