ಬುಲಂದ್ಶಹರ್ (ಯುಪಿ): ಉತ್ತರ ಪ್ರದೇಶದ ಬುಲಂದ್ಶಹರ್ ಜಿಲ್ಲೆಯ ದೌಲತ್ಪುರ ಗ್ರಾಮದಲ್ಲಿ ಸಿನಿಮೀಯ ಮಾದರಿಯ ಘಟನೆಯೊಂದು ನಡೆದಿದೆ. ತನ್ನ ಪತ್ನಿಯ ಅಕ್ರಮ ಸಂಬಂಧವನ್ನು ವಿರೋಧಿಸಿದ ಪತಿಗೆ, ಆಕೆ ಮೀರತ್ನ ಭೀಕರ ಕೊಲೆ ಪ್ರಕರಣವನ್ನು ಉಲ್ಲೇಖಿಸಿ “ನಿನ್ನನ್ನೂ ಕತ್ತರಿಸಿ ಬ್ಲೂ ಡ್ರಮ್ಗೆ ಹಾಕಿ ಸಿಮೆಂಟ್ ತುಂಬಿಸುತ್ತೇನೆ” ಎಂದು ಬೆದರಿಕೆ ಹಾಕಿದ್ದಾಳೆ. ಇದರಿಂದ ಬೆದರಿದ ಪತಿ, ತನ್ನ ಜೀವ ಉಳಿಸಿಕೊಳ್ಳಲು ಪತ್ನಿಯನ್ನು ಆಕೆಯ ಪ್ರೇಮಿಯ ಜೊತೆಯೇ ಕಳಿಸಿಕೊಟ್ಟಿದ್ದಾನೆ.
ದಿನಗೂಲಿ ನೌಕರನಾಗಿರುವ ರಾಜ್ಕುಮಾರ್ ಮತ್ತು ಆತನ ಪತ್ನಿಯ ವಿವಾಹವಾಗಿ 7 ವರ್ಷಗಳಾಗಿದ್ದು, ಅವರಿಗೆ 6 ತಿಂಗಳ ಮಗುವಿದೆ. ಆದರೆ, ಪತ್ನಿ ಸೋಶಿಯಲ್ ಮೀಡಿಯಾ ಮೂಲಕ ಪರಿಚಯವಾದ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು.ಪತ್ನಿಯ ಫೋನಿನಲ್ಲಿ ಆಕೆಯ ಪ್ರೇಮಿಯ ಜೊತೆಗಿನ ಆಕ್ಷೇಪಾರ್ಹ ಫೋಟೋಗಳನ್ನು ನೋಡಿದ ರಾಜ್ಕುಮಾರ್ ಇದನ್ನು ಪ್ರಶ್ನಿಸಿದ್ದಾನೆ. ಆಗ ಪತ್ನಿ, “ನನ್ನನ್ನು ತಡೆದರೆ ನಿನ್ನನ್ನು ಮತ್ತು ನಿನ್ನ ಸಹೋದರರನ್ನು ಕೊಂದು ಬ್ಲೂ ಡ್ರಮ್ನಲ್ಲಿ ಹಾಕಿ ಹೂತು ಹಾಕುತ್ತೇನೆ” ಎಂದು ಮೀರತ್ ಪ್ರಕರಣದಂತೆ ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ಫೇಸ್ಬುಕ್ನಲ್ಲಿ ‘ಸಿಮೆಂಟ್ ಮತ್ತು ಬ್ಲೂ ಡ್ರಮ್’ ಎಂದು ಕ್ಯಾಪ್ಶನ್ ಇರುವ ಪೋಸ್ಟ್ ಕೂಡ ಹಾಕಿದ್ದಳು.

ಇದನ್ನೂ ಓದಿ: ಕಾರ್ಕಳದಲ್ಲಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ರಿಕ್ಷಾ ಚಾಲಕ ಅರೆಸ್ಟ್
ಈ ವಿಷಯ ಪೊಲೀಸ್ ಮೆಟ್ಟಿಲೇರಿ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಸಮಾಲೋಚನೆ ನಡೆಸಲಾಯಿತು. ಅಲ್ಲಿಯೂ ಪತ್ನಿ ತನ್ನ ಪ್ರೇಮಿಯ ಜೊತೆಗೇ ಹೋಗುವುದಾಗಿ ಹಠ ಹಿಡಿದಿದ್ದಾಳೆ. ಕೊನೆಗೆ ಪತಿ ರಾಜ್ಕುಮಾರ್, “ನನಗೆ ಜೀವ ಮುಖ್ಯ, ಆಕೆ ಯಾರ ಜೊತೆಗಾದರೂ ಹೋಗಲಿ” ಎಂದು ಒಪ್ಪಿಗೆ ಸೂಚಿಸಿದ್ದಾನೆ.2025ರ ಮಾರ್ಚ್ನಲ್ಲಿ ಮೀರತ್ನಲ್ಲಿ ಮುಸ್ಕಾನ್ ಎಂಬ ಮಹಿಳೆ ತನ್ನ ಪ್ರೇಮಿಯೊಂದಿಗೆ ಸೇರಿ ಪತಿ ಸೌರಭ್ ಎಂಬುವವರನ್ನು ಕೊಂದು, ಶವವನ್ನು 15 ತುಂಡುಗಳಾಗಿ ಕತ್ತರಿಸಿ ನೀಲಿ ಬಣ್ಣದ ಪ್ಲಾಸ್ಟಿಕ್ ಡ್ರಮ್ನಲ್ಲಿ ಹಾಕಿ ಸಿಮೆಂಟ್ ತುಂಬಿಸಿ ಮುಚ್ಚಿದ್ದಳು. ಈ ಘಟನೆಯು ಆಗ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

