ಹೈದರಾಬಾದ್: ನಗರದ ಅಪ್ಪಾ ಜಂಕ್ಷನ್ ಬಳಿಯ ಪೆಟ್ರೋಲ್ ಪಂಪ್ನಲ್ಲಿ ಇಂಧನಕ್ಕಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದ ವೇಳೆ ಭೀಕರ ಹಲ್ಲೆ ನಡೆದಿದೆ. ಟಾಟಾ ಮ್ಯಾಜಿಕ್ ವಾಹನವೊಂದು ಅಕಸ್ಮಾತ್ ಆಗಿ ಮುಂದಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದೇ ಈ ಸಂಘರ್ಷಕ್ಕೆ ಕಾರಣವಾಗಿದೆ.ಪೆಟ್ರೋಲ್ ಬಂಕ್ನಲ್ಲಿ ಉದ್ದನೆಯ ಸಾಲಿನಲ್ಲಿ ಕಾಯುತ್ತಿದ್ದಾಗ, ಟಾಟಾ ಮ್ಯಾಜಿಕ್ ವಾಹನವು ಚಲಿಸುವ ರಭಸದಲ್ಲಿ ಮುಂದಿದ್ದ ಕಾರಿನ ಹಿಂಭಾಗಕ್ಕೆ ಸ್ವಲ್ಪ ಗುದ್ದಿದೆ.
ಕಾರಿನ ಹಿಂಭಾಗದ ಗಾಜಿನ ಮೇಲೆ “POLICE” ಎಂದು ಬರೆಯಲಾಗಿತ್ತು. ಡಿಕ್ಕಿಯಾಗುತ್ತಿದ್ದಂತೆಯೇ ಕಾರಿನಿಂದ ಕೆಳಗಿಳಿದ ವ್ಯಕ್ತಿ, ಟಾಟಾ ಮ್ಯಾಜಿಕ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ. ಜೋರಾಗಿ ಗುದ್ದಿದ ಪರಿಣಾಮ ಚಾಲಕನ ಮೂಗು ಮುರಿದು ರಕ್ತಸ್ರಾವವಾಗಿದೆ. ಹಲ್ಲೆಯ ತೀವ್ರತೆಯನ್ನು ಕಂಡು ಅಲ್ಲಿ ನೆರೆದಿದ್ದ ಸಾರ್ವಜನಿಕರು ತಕ್ಷಣವೇ ಹಲ್ಲೆಕೋರನನ್ನು ತಡೆದಿದ್ದಾರೆ. ಗಾಯಾಳು ಚಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಮಕ್ಕಳ ಅಪಹರಣ ಜಾಲದ ಭೀತಿ! ವೈರಲ್ ಆದ ಆ ಒಂದು ವೀಡಿಯೊದಿಂದ ಪೋಷಕರಲ್ಲಿ ಮನೆಮಾಡಿದ ಆತಂಕ
ಇಲ್ಲಿದೆ ನೋಡಿ ವಿಡಿಯೋ
Hyderabad: A road rage incident at a petrol pump in APPA Junction during long fuel queues. A Tata Magic accidentally hit a car from behind. The accused whose car had “POLICE” on the rear windshield,allegedly punched the driver, breaking his nose. Bystanders intervened. #Hyderabad pic.twitter.com/AjJXKRdMDS
— Deccan Daily (@DailyDeccan) March 25, 2026
ಹಲ್ಲೆ ನಡೆಸಿದ ವ್ಯಕ್ತಿ ನಿಜವಾಗಿಯೂ ಪೊಲೀಸ್ ಇಲಾಖೆಯವನೇ ಅಥವಾ ಕೇವಲ ಸ್ಟಿಕ್ಕರ್ ಹಾಕಿಕೊಂಡು ದರ್ಪ ತೋರಿಸುತ್ತಿದ್ದಾನೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

