“ನನಗೆ ನಟಿ ನಯನತಾರ ಬೇಕು, ಕೊಡಿಸ್ತೀರಾ?”: ಎಐಎಡಿಎಂಕೆ ಸಂಸದ ಸಿ.ವಿ. ಶಣ್ಮುಗನ್ ವಿವಾದಾತ್ಮಕ ಹೇಳಿಕೆ!

ಚೆನ್ನೈ: ತಮಿಳುನಾಡಿನ ಮಾಜಿ ಸಚಿವ ಮತ್ತು ಹಾಲಿ ರಾಜ್ಯಸಭಾ ಸದಸ್ಯ, ಎಐಎಡಿಎಂಕೆ ನಾಯಕ ಸಿ.ವಿ. ಶಣ್ಮುಗನ್ ಅವರು ಸಾರ್ವಜನಿಕ ವೇದಿಕೆಯಲ್ಲೇ ನಟಿ ನಯನತಾರಾ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಸರ್ಕಾರದ ವಿರುದ್ಧ ಆಯೋಜಿಸಲಾಗಿದ್ದ ಬೃಹತ್ ಪ್ರತಿಭಟನಾ ರ್ಯಾಲಿಯಲ್ಲಿ ಶಣ್ಮುಗನ್ ಮಾತನಾಡುತ್ತಿದ್ದರು. ಸರ್ಕಾರವನ್ನು ಟೀಕಿಸುವ ಬರದಲ್ಲಿ ಅವರು ಬಳಸಿದ ಪದಗಳು ಈಗ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿವೆ.

ಇತ್ತೀಚೆಗೆ ಸಿಎಂ ಸ್ಟಾಲಿನ್ ಅವರು ಚುನಾವಣಾ ಪ್ರಚಾರದ ಭಾಗವಾಗಿ “ನಿಮ್ಮ ಕನಸು ಹೇಳಿಕೊಳ್ಳಿ” ಎಂಬ ವಿಶೇಷ ಅಭಿಯಾನ ಆರಂಭಿಸಿದ್ದರು. ಇದರಲ್ಲಿ ಸಾರ್ವಜನಿಕರು ತಮ್ಮ ಆಸೆ ಅಥವಾ ಕನಸುಗಳನ್ನು ಸರ್ಕಾರದ ಗಮನಕ್ಕೆ ತರಬಹುದು ಎನ್ನಲಾಗಿತ್ತು. ಈ ಯೋಜನೆಯನ್ನು ಲೇವಡಿ ಮಾಡಿದ ಶಣ್ಮುಗನ್, “ಈ ಸರ್ಕಾರ ಪೊಳ್ಳು ಭರವಸೆಗಳನ್ನು ನೀಡುತ್ತಿದೆ. ಯಾರಿಗಾದರೂ ನಟಿ ನಯನತಾರಾರನ್ನು ಮದುವೆಯಾಗಬೇಕು ಎಂಬ ಕನಸಿದ್ದರೆ, ಈ ಸರ್ಕಾರ ಅದನ್ನು ಈಡೇರಿಸುತ್ತದೆಯೇ? ನನಗೂ ನಟಿ ನಯನತಾರ ಬೇಕು, ಕೊಡಿಸುತ್ತೀರಾ?” ಎಂದು ವ್ಯಂಗ್ಯವಾಡಿದ್ದಾರೆ.

Advertisement

ಇದನ್ನೂ ಓದಿ: ಸಾರಾ ಅಲಿ ಖಾನ್​​ಗೆ ಬದರಿನಾಥ, ಕೇದಾರನಾಥ ದೇವಸ್ಥಾನಕ್ಕೆ ನೋ ಎಂಟ್ರಿ! ಯಾಕೆ ಗೊತ್ತಾ?

ಸರ್ಕಾರದ ಯೋಜನೆಗಳನ್ನು ಟೀಕಿಸುವ ಹಕ್ಕು ವಿರೋಧ ಪಕ್ಷಕ್ಕಿದೆ. ಆದರೆ, ಒಬ್ಬ ಮಹಿಳೆಯನ್ನು ಮತ್ತು ಜನಪ್ರಿಯ ನಟಿಯನ್ನು ಹೀಗೆ ಸಾರ್ವಜನಿಕವಾಗಿ ಅವಮಾನಿಸುವುದು ಸಂಸದರ ಸ್ಥಾನಕ್ಕೆ ತಕ್ಕದ್ದಲ್ಲ. ಜನರೇ ಚುನಾವಣೆಯಲ್ಲಿ ಇದಕ್ಕೆ ಉತ್ತರ ನೀಡುತ್ತಾರೆ ಎಂದು ಡಿಎಂಕೆ ಕಿಡಿಕಾರಿದೆ. ಶಣ್ಮುಗನ್ ಅವರ ಈ ಹಗುರವಾದ ಮಾತಿನಿಂದ ಎಐಎಡಿಎಂಕೆ ಪಕ್ಷಕ್ಕೆ ತೀವ್ರ ಮುಜುಗುರ ಉಂಟಾಗಿದೆ. ಪಕ್ಷದ ಇತರ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು