Breaking News

Asia Cup: ರಾಧಾ ಯಾದವ್ ಆಲ್‌ರೌಂಡ್ ಪ್ರದರ್ಶನ, ಭಾರತ ಫೈನಲ್ಸ್‌ಗೆ

ಬ್ಯಾಂಕಾಕ್: ನಾಯಕಿ ರಾಧಾ ಯಾದವ್ ಆಲ್‌ರೌಂಡ್ ಪ್ರದರ್ಶನದಿಂದ ಭಾರತ-ಎ ತಂಡ ಎಸಿಸಿ ಏಷ್ಯ ಕಪ್ ರೈಸಿಂಗ್ ಸ್ಟಾರ್ ಟೂರ್ನಿಯ ಸೆಮಿಫೈನಲ್ಸ್ ನಲ್ಲಿ ಶ್ರೀಲಂಕಾ-ಎ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿದೆ.

ಇಲ್ಲಿನ ತೆರ್ಡ್‌ಥೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ಮಹಿಳಾ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ರಾಧಾ ಯಾದವ್ ದಾಳಿಗೆ ಸಿಲುಕಿ 19.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 118 ರನ್ ಗಳಿಸಿತು.

Advertisement

ಇದನ್ನೂ ಓದಿ: ದಕ್ಷಿಣ ಕನ್ನಡ: ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಘೋಷಣೆ

ತಂಡದ ಪರ ಸಂಜನ ಕಾವಿಂಡಿ 31, ಶಶಿನಿ ಗಿಮ್ಹನಿ 22 ಮತ್ತು ಸತ್ಯ ಸಂದೀಪಿನಿ 15 ರನ್ ಗಳಿಸಿದರು. ಭಾರತ ಪರ ರಾಧಾ ಯಾದವ್ 4, ತನುಜಾ ಕನ್ವರ್ ಮತ್ತು ಪ್ರೇಮಾ ರಾವತ್ ತಲಾ 2 ವಿಕೆಟ್ ಪಡೆದರು. ಮಿನ್ನು ಮಣಿ ಮತ್ತು ಸೈಮಾ ಠಾಕೊರ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಭಾರತ 13.3 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಫೈನಲ್ ಪ್ರವೇಶಿಸಿತು. ತಂಡದ ಪರ ವೃಂದಾ ದಿನೇಶ್ 20 ಎಸೆತಗಳಲ್ಲಿ 42, ರಾಧಾ ಯಾದವ್ ಅಜೇಯ 31, ಅನುಷ್ಕಾ ಶರ್ಮ 27 ರನ್ ಗಳಿಸಿದರು‌. ಶ್ರೀಲಂಕಾ ಪರ ಶಶಿನಿ ಗಿಮ್ಹಾನಿ 2, ಯಶನಿ‌‌ ನಿಮ್ಹನ್ತಿಕಾ ಒಂದು ವಿಕೆಟ್ ಪಡೆದರು.

ಇದೇ ಭಾನುವಾರ 22 ರಂದು ಭಾರತ ತಂಡ ಫೈನಲ್ಸ್‌ನಲ್ಲಿ ಬಾಂಗ್ಲಾದೇಶವನ್ನು ಎದುರಿಸಲಿದೆ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು