ರಾಜ್‌ಕೋಟ್:ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಕ್ರೀಡಾಂಗಣದಲ್ಲಿ ನಡೆದ ೨ನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡವು ಭಾರತದ ವಿರುದ್ಧ ೭ ವಿಕೆಟ್‌ಗಳ ಗೆಲವು ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, ೫೦ ಓವರ್‌ಗಳಲ್ಲಿ ೭ ವಿಕೆಟ್ ಕಳೆದುಕೊಂಡು ೨೮೪ ರನ್ ಬಾರಿಸಿತು. ೨೮೫ ರನ್‌ಗಳ ಗುರಿ ಬೆನ್ನಟ್ಟಿದ ನ್ಯೂಜಿಲ್ಯಾಂಡ್, ೪೭.೩ ಓವರ್‌ಗಳಲ್ಲಿ ೩ ವಿಕೆಟ್ ಕಳೆದುಕೊಂಡು ೨೮೬ ರನ್ ಬಾರಿಸಿತು. ಆ ಮೂಲಕ ೧-೧ ಸರಣಿ ಸಮಬಲ ಸಾಧಿಸಿದ್ದು, ಕೊನೆಯ ಪಂದ್ಯ ಜ.೧೮ ರಂದು ನಡೆಯಲಿದೆ.

ಭಾರತದ ಪರ ಕೆಎಲ್ ರಾಹುಲ್ ೯೨ ಎಸೆತಗಳಲ್ಲಿ ೧೧೨ ರನ್ (೧೧ ಬೌಂಡರಿ ಹಾಗೂ ೧ ಸಿಕ್ಸ್ ಸಿಡಿಸಿದ್ದಾರೆ.) ಹಾಗೂ ಶುಬ್ಮನ್ ಗಿಲ್ ೫೬ ರನ್ ಬಾರಿಸಿದರು. ರೋಹಿತ್ ಶರ್ಮಾ ೨೪, ವಿರಾಟ್ ಕೊಹ್ಲಿ ೨೩, ಶ್ರೇಯಸ್ ಅಯ್ಯರ್ ೮, ರವೀಂದ್ರ ಜಡೆಜಾ ೨೭, ನಿತೀಶ್ ಕುಮಾರ್ ರೆಡ್ಡಿ ೨೦, ಹರ್ಷಿತ್ ರಾಣಾ ೨ ಮೊಹಮ್ಮದ್ ಸಿರಾಜ್ ೨ ರನ್ ಬಾರಿಸಿದರು.
ಇದನ್ನೂ ಓದಿ: ನ್ಯೂಜಿಲ್ಯಾಂಡ್ ವಿರುದ್ಧ ಕೆಎಲ್ ರಾಹುಲ್ ವಿಶೇಷ ಸಾಧನೆ, ಸಚಿನ್ ದಾಖಲೆ ಮುರಿದ ಕೊಹ್ಲಿ
ನ್ಯೂಜಿಲ್ಯಾಂಡ್ ಪರ ಕ್ರಿಸ್ ಕ್ಲಾರ್ಕ್ ೩ ವಿಕೆಟ್ ಕಬಳಿಸಿದರೆ, ಕೈಲ್ ಜೇಮಿಸನ್, ಮೈಕಲ್ ಬ್ರೇಸ್‌ವೆಲ್, ಜಕಾರಿ ಫೌಲ್ಕ್ಸ್, ಜೇಡನ್ ಲೆನಾಕ್ಸ್ ತಲಾ ೧ ವಿಕೆಟ್ ಪಡೆದರು.
ನ್ಯೂಜಿಲ್ಯಾಂಡ್ ಪರ ಅಬ್ಬರಿಸಿದ ಡ್ಯಾರಿಲ್ ಮಿಚೆಲ್ ೧೧೭ ಎಸೆತಗಳಲ್ಲಿ ೧೩೧ ರನ್ (೧೧ ಬೌಂಡರಿ ಹಾಗೂ ೨ ಸಿಕ್ಸ್‌ಗಳನ್ನು ಸಿಡಿಸಿದ್ದಾರೆ) ಹಾಗೂ ವಿಲ್ ಯಂಗ್ ೮೭ ರನ್ (೭ ಬೌಂಡರಿಗಳು ಒಳಗೊಂಡಿವೆ) ಬಾರಿಸಿದರು. ಇನ್ನುಳಿದಂತೆ, ಡೆಒನ್ ಕಾನ್ವೇ ೧೬, ಹೆನ್ರಿ ನಿಕೋಲ್ಸ್ ೧೦, ಗ್ಲೆನ್ ಫಿಲಿಪ್ಸ್ ೩೨ ರನ್ ಬಾರಿಸಿದರು. ಭಾರತದ ಪರ, ಹರ್ಷಿತ್ ರಾಣಾ, ಪ್ರಸಿದ್ಧ್ ಕೃಷ್ಣ ಹಾಗೂ ಕುಲದೀಪ್ ಯಾದವ್ ತಲಾ ೧ ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

