Breaking News

ನ್ಯೂಜಿಲ್ಯಾಂಡ್‌ ವಿರುದ್ಧ ಹೊಸ ದಾಖಲೆ ಬರೆದ ವಿರಾಟ್‌ ಕೊಹ್ಲಿ; ದಿಗ್ಗಜರ ದಾಖಲೆಗಳು ಉಡೀಸ್

IND vs NZ ODi Virat Kohli sets new record against New Zealand

ಇಂದೋರ್‌: ಹೋಳ್ಕರ್ ಮೈದಾನದಲ್ಲಿ ನಡೆದ ಕೊನೆಯ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡದ ವಿರುದ್ಧ ಐತಿಹಾಸಿಕ ಇನ್ನಿಂಗ್ಸ್‌ ಆಡಿದ ವಿರಾಟ್‌ ಕೊಹ್ಲಿ ಅವರು ಹೊಸ ದಾಖಲೆಯನ್ನು ಬರೆದಿದ್ದಾರೆ. ನ್ಯೂಜಿಲೆಂಡ್ ನೀಡಿದ 338 ರನ್‌ಗಳ ಗುರಿ ಬೆನ್ನಟ್ಟಿದ ಟೀಂ ಇಂಡಿಯಾಕ್ಕೆ ಪ್ರಮುಖ ಬ್ಯಾಟರ್‌ಗಳು ರನ್‌ ಗಳಿಸುವಲ್ಲಿ ವಿಫಲರಾದಾಗ ತಂಡಕ್ಕೆ ವಿರಾಟ್‌ ಕೊಹ್ಲಿ ಆಸರೆಯಾದರು. ಅದರಂತೆ, ಸಂಯಮದಿಂದ ಬ್ಯಾಟ್‌ ಬೀಸುತ್ತಿದ್ದ ಕೊಹ್ಲಿ, 91 ಎಸೆತಗಳಲ್ಲಿ ಶತಕ ಪೂರೈಸಿದರು. ಆ ಮೂಲಕ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಅತ್ಯಧಿಕ ಶತಕ ಸಿಡಿಸಿದ ಆಟಗಾರ ಎಂದೆನಿಸಿಕೊಂಡರು.

ಮಾತ್ರವಲ್ಲದೆ ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಈ ಹಿಂದೆ ಆಡಿದ್ದ ನಾಲ್ಕು ಪಂದ್ಯಗಳಲ್ಲಿ ಅರ್ಧ ಶತಕಗಳಿಸಲೂ ಕೊಹ್ಲಿ ವಿಫಲರಾಗಿದ್ದರು. ಇಂದು ನಡೆದ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಈ ಕ್ರೀಡಾಂಗಣದಲ್ಲಿ ಚೊಚ್ಚಲ ಶತಕ ಬಾರಿಸಿ ಸಂಭ್ರಮಿಸಿದರು. ಇದು ಕೊಹ್ಲಿ ಅವರ 54 ನೇ ಏಕದಿನ ಶತಕ ಹಾಗೂ 85 ನೇ ಅಂತಾರಾಷ್ಟ್ರೀಯ ಶತಕವಾಗಿದೆ.

Advertisement

ಇದನ್ನೂ ಓದಿ: IND vs NZ: ಮಿಚೆಲ್, ಫಿಲಿಪ್ಸ್‌ ಆರ್ಭಟ, ಭಾರತದ ವಿರುದ್ಧ ಸರಣಿ ಗೆದ್ದ ನ್ಯೂಜಿಲ್ಯಾಂಡ್‌

ಇಂದು ನಡೆದ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರರು ಅಲ್ಪ ಮೊತ್ತಕ್ಕೆ ಔಟ್‌ ಆದರು. ರೋಹಿತ್‌ 28 ರನ್‌ಗಳಿಗೆ ಔಟ್‌ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಕೊಹ್ಲಿ, ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದರು. ಆದಾಗ್ಯೂ ತಂಡವು ಕೇವಲ 71 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಾಗ ಸೋಲು ಸನ್ನಿಹಿತವಾಗಿತ್ತು. ಆದರೆ ಸಂಯಮದಿಂದ ಆಡುತ್ತಿದ್ದ ಕೊಹ್ಲಿಗೆ ಜೊತೆಯಾದ ನಿತೀಶ್ ಕುಮಾರ್ ರೆಡ್ಡಿ 88 ರನ್‌ಗಳ ಜೊತೆಯಾಟ ಆಡಿದರು. ಅರ್ಧಶತಕದ ನಂತರ ನಿತೀಶ್ ಔಟ್‌ ಆದರು. ಇವರ ನಂತರ ಕೊಹ್ಲಿಗೆ ಜೊತೆಯಾದವರು ಹರ್ಷಿತ್‌ ರಾಣಾ. ಇವರ ಅತ್ಯುತ್ತಮ ಬೆಂಬಲದ ಲಾಭ ಪಡೆದ ಕೊಹ್ಲಿ, ಅಂತಿಮವಾಗಿ 91 ಎಸೆತಗಳಲ್ಲಿ ಶತಕ ಬಾರಿಸಿದರು.

ದಿಗ್ಗಜರ ದಾಖಲೆಗಳು ಉಡೀಸ್

ಈ ಶತಕದೊಂದಿಗೆ ಕಿವೀಸ್‌ ವಿರುದ್ಧ ಕೊಹ್ಲಿ ಒಟ್ಟು 7 ಶತಕಗಳನ್ನು ಬಾರಿಸಿದರು. ಆ ಮೂಲಕ ನ್ಯೂಜಿಲೆಂಡ್ ವಿರುದ್ಧ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಲ್ಲದೆ, ತಲಾ ಆರು ಶತಕಗಳನ್ನು ಸಿಡಿಸಿದ್ದ ವೀರೇಂದ್ರ ಸೆಹ್ವಾಗ್ ಮತ್ತು ರಿಕಿ ಪಾಂಟಿಂಗ್ ಅವರ ದಾಖಲೆಯನ್ನೂ ಕೊಹ್ಲಿ ಮುರಿದರು. ಜೊತೆಗೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಅತಿ ಹೆಚ್ಚು ಶತಕಗಳನ್ನು (85) ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕೊಹ್ಲಿ ಪ್ರಸ್ತುತ ಎಲ್ಲಾ ಸ್ವರೂಪಗಳಲ್ಲಿ ನ್ಯೂಜಿಲೆಂಡ್ ವಿರುದ್ಧ 10 ಶತಕಗಳನ್ನು ಬಾರಿಸಿದ್ದು, ತಲಾ 9‌ ಶತಕಗಳನ್ನು ಸಿಡಿಸಿದ್ದ ಸಚಿನ್ ತೆಂಡೂಲ್ಕರ್, ಜೋ ರೂಟ್ ಮತ್ತು ಜಾಕ್ವೆಸ್ ಕಾಲಿಸ್ ಅವರ ದಾಖಲೆಯನ್ನೂ ಮುರಿದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು