Breaking News

IND vs NZ T20: ಕಿವೀಸ್‌ ವಿರುದ್ಧ ಭಾರತಕ್ಕೆ 8 ವಿಕೆಟ್‌ಗಳ ಭರ್ಜರಿ ಗೆಲುವು

IND vs NZ Third win for India against New Zealand

ಬರ್ಸಾಪರ ಸ್ಟೇಡಿಯಂನಲ್ಲಿ ನಡೆದ ಮೂರುನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡದ ವಿರುದ್ಧ ಭಾರತ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ ನ್ಯೂಜಿಲ್ಯಾಂಡ್‌ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 153 ರನ್‌ ಬಾರಿಸಿತು. ತಂಡದ ಪರ ಗ್ಲೇನ್‌ ಫಿಲಿಪ್ಸ್ 48‌ ರನ್‌ ಬಾರಿಸಿದರೆ, ಮಾರ್ಕ್‌ ಚಾಪ್ಮನ್‌ 32, ಮಿಚೆಲ್‌ ಸ್ಯಾಂಟ್ನರ್‌ 27, ಡ್ಯಾರಿಲ್‌ ಮಿಚೆಲ್‌ 14, ಡೆವೊನ್‌ ಕಾನ್ವೇ 1, ಟಿಮ್‌ ಸೀಫರ್ಟ್‌ 12, ರಾಚಿನ್‌ ರವೀಂದ್ರ 4, ಕೈಲ್‌ ಜೇಮಿಸನ್‌ 3, ಮ್ಯಾಟ್‌ ಹೆನ್ರಿ 1, ಇಶ್‌ ಸೋಧಿ 2*, ಜಾಕೋಬ್‌ ಡಫ್ಪಿ 4* ರನ್‌ ಬಾರಿಸಿದರು.

Advertisement

ಇದನ್ನೂ ಓದಿ: WPL: ಆರ್ಸಿಬಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್

154 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಭಾರತ, ಕೇವಲ 10 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 8 ವಿಕೆಟ್‌ಗಳ ಗೆಲುವು ಸಾಧಿಸಿತು. ತಂಡದ ಪರ ಅಭಿಷೇಕ್‌ ಶರ್ಮಾ ಅವರು 20 ಎಸೆತಗಳಲ್ಲಿ68 ರನ್‌ ಬಾರಿಸಿದರು. ಸೂರ್ಯಕುಮಾರ್‌ ಯಾದವ್‌ ಅವರು  26 ಎಸೆತಗಳಲ್ಲಿ 57 ರನ್‌ ಬಾರಿಸಿದ್ದಾರೆ. ಇಶಾನ್‌ ಕಿಶನ್‌ 28 ರನ್‌ ಗಳಿಸಿದರೆ ಸಂಜು ಸ್ಯಾಮ್ಸನ್‌ ಶೂನ್ಯ ಸುತ್ತಿದರು.

ಟೀಂ ಇಂಡಿಯಾದ ಪರ ಜಸ್ಪ್ರಿತ್‌ ಬುಮ್ರ 3, ಹಾರ್ದಿಕ್‌ ಪಾಂಡ್ಯ, ರವಿ ಬಿಷ್ಣೋಯಿ ತಲಾ 2, ಹರ್ಷಿತ್‌ ರಾಣ 1 ವಿಕೆಟ್‌ ಪಡೆದರು. ನ್ಯೂಜಿಲ್ಯಾಂಡ್‌ ಪರ ಮ್ಯಾಟ್‌ ಹೆನ್ರಿ,  ಇಶ್ ಸೋಧಿ ಅವರು ತಲಾ 1 ವಿಕೆಟ್‌ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು