Breaking News

T20 Worldcup: ಪಾಕಿಸ್ತಾನದ ವಿರುದ್ಧ ಪ್ರಾಬಲ್ಯ ಮೆರೆದ ಭಾರತ, ಸೂಪರ್-8 ಗೆ ಲಗ್ಗೆ

ಕೊಲೊಂಬೊ: ಟಿ-20 ವಿಶ್ವಕಪ್ ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ತನ್ನ ಪ್ರಾಬಲ್ಯ ಮುಂದುವರೆಸಿದೆ‌.

ಇಲ್ಲಿನ‌ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 61 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

Advertisement

ಇದನ್ನೂ ಓದಿ: IND vs PAK: ಪಾಕ್‌ ತಂಡದ ನಾಯಕನಿಗೆ ಶೇಕ್‌ಹ್ಯಾಂಡ್‌ ನಿರಾಕರಿಸಿದ ಸೂರ್ಯಕುಮಾರ್‌ ಯಾದವ್

ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.

ಮೊದಲ ಓವರ್‌ನಲ್ಲಿಯೇ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಆದರೆ ಮತ್ತೊಬ್ಬ ಆರಂಭಿಕ ಆಟಗಾರ ಇಶನ್ ಕಿಶನ್ ಸ್ಪೋಟಕ ಆಟ ಪ್ರದರ್ಶಿಸಿದರು. 40 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 10 ಬೌಂಡರಿಗಳೊಂದಿಗೆ 77 ರನ್ ಗಳಿಸಿ ಸ್ಯಾಮ್ ಅಯೂಬ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಹಾದಿ ಹಿಡಿದರು. ನಂತರ ಜೊತೆಯಾದ ತಿಲಕ್ ವರ್ಮ ಮತ್ತು ನಾಯಕ ಸೂರ್ಯಕುಮಾರ್ ಜವಾಬ್ದಾರಿಯುತ ಇನ್ನಿಂಗ್ಸ್ ಕಟ್ಟಿದರು‌.

ಸೂರ್ಯಕುಮಾರ್ 32, ತಿಲಕ್ ವರ್ಮ 25 ರನ್ ಗಳಿಸಿದರು. ಹಾರ್ದಿಕ್ ಪಾಂಡ್ಯ ಮೊದಲ ಎಸೆತದಲ್ಲಿಯೇ ಕ್ಯಾಚ್ ನೀಡಿದರು. ಕೊನೆಯಲ್ಲಿ ಶಿವಂ ದುಬೆ (17 ಎಸೆತಗಳಲ್ಲಿ 27) ಮತ್ತು ರಿಂಕು ಸಿಂಗ್ (4 ಎಸೆತಗಳಲ್ಲಿ 11) ಜೊತೆಯಾಟ ತಂಡದ ಮೊತ್ತ 170 ರ ಗಡಿ ದಾಟಲು ಸಹಕಾರಿಯಾಯಿತು‌. ಪಾಕಿಸ್ತಾನ ಪರ ಸ್ಯಾಮ್ ಅಯೂಬ್ 3, ಸಲ್ಮನ್ ಅಘಾ, ಶಹೀನ್ ಅಫ್ರಿದಿ, ಉಸ್ಮನ್ ತಾರಿಖ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಹಾರ್ದಿಕ್ ಪಾಂಡ್ಯ ಮೊದಲ ಓವರ್‌ನಲ್ಲಿಯೇ ಆಘಾತ ನೀಡಿದರು‌. ಪವರ್‌ಪ್ಲೇ ಒಳಗೆ 38 ರನ್‌ ಗಳಿಗೆ 4 ವಿಕೆಟ್ ಕಳೆದುಕೊಂಡಿತು. ನಂತರ ಸತತ ವಿಕೆಟ್ ಕಳೆದುಕೊಂಡು ಅಂತಿಮವಾಗಿ 18 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 114 ರನ್ ಗಳಿಸಿ 61 ರನ್ ಗಳಿಂದ ಸೋಲು ಕಂಡಿತು.

ಪಾಕ್ ಪರ ಉಸ್ಮಾನ್ ಖಾನ್ 44, ಶಹೀನ್ ಅಫ್ರಿದಿ 23, ಶದಾಬ್ ಖಾನ್ 14, ಫಹೀಮ್ ಅಶ್ರಫ್ 10 ರನ್ ಗಳಿಸಿದರು. ಭಾರತ ಪರ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಅಕ್ಸರ್ ಪಟೇಲ್, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು. ಕುಲ್ದೀಪ್ ಯಾದವ್ ಮತ್ತು ತಿಲಕ್ ವರ್ಮಾ ತಲಾ ಒಂದು ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ ಭಾರತ ತಂಡ ‘ಎ’ ಗುಂಪಿನಿಂದ ಮೊದಲ ತಂಡವಾಗಿ ಸೂಪರ್-8 ಹಂತಕ್ಕೆ ಅರ್ಹತೆ ಪಡೆಯಿತು.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ‌‌ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು