ಬ್ಯಾಂಕಾಕ್: ಭಾರತ-ಎ ಮಹಿಳಾ ತಂಡ ಬಾಂಗ್ಲಾ-ಎ ಮಹಿಳಾ ತಂಡವನ್ನು 46 ರನ್ಗಳಿಂದ ಮಣಿಸಿ ಸತತ ಎರಡನೇ ಬಾರಿಗೆ ಎಸಿಸಿ ಮಹಿಳಾ ಏಷ್ಯಾ ಕಪ್ ರೈಸಿಂಗ್ ಸ್ಟಾರ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇಲ್ಲಿನ ತೆರ್ಡ್ಥೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ರಾಧಾ ಯಾದವ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲ 4 ವಿಕೆಟ್ಗಳನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡು ಸಂಕಷ್ಟದಲ್ಲಿ ಇದ್ದಾಗ ತೇಜಲ್ ಹಸ್ನಬೀಸ್ ಮತ್ತು ನಾಯಕಿ ರಾಧಾ ಯಾದವ್ 50 ಎಸೆತಗಳಲ್ಲಿ 69 ರನ್ ಗಳಿಸಿ ಚೇತರಿಕೆ ನೀಡಿದರು.

ಇದನ್ನೂ ಓದಿ: ಮೆಸ್ಕಾಂ ಪ್ರಕಟಣೆ: ಫೆ.24 ರಂದು ಈ ಪ್ರದೇಶಗಳಲ್ಲಿ ಪವರ್ ಕಟ್
ತಂಡದ ಪರ ತೇಜಲ್ ಹಸ್ನಬೀಸ್ 34 ಎಸೆತಗಳಲ್ಲಿ 51, ರಾಧಾ ಯಾದವ್ 36, ವೃಂದಾ ದಿನೇಶ್ 19 ರನ್ ಗಳಿಸಿದರು. ಬಾಂಗ್ಲಾ ಪರ ಮಹಿಮಾ ಖಾತುನ್ 4, ಫರ್ಜಾನಾ ಈಸ್ಮಿನ್ ಮತ್ತು ಫತೇಮಾ ಜಹಾನ್ ಸೋನಿಯಾ ತಲಾ ಒಂದು ವಿಕೆಟ್ ಪಡೆದರು. ಭಾರತ 7 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿತು.
ಗುರಿ ಬೆನ್ನತ್ತಿದ ಬಾಂಗ್ಲಾ ದೊಡ್ಡ ಮಟ್ಟದ ಪ್ರತಿರೋಧ ತೋರದೆ ಹಂತಹಂತವಾಗಿ ವಿಕೆಟ್ ಕಳೆದುಕೊಂಡು 19.1 ಓವರ್ಗಳಲ್ಲಿ 88 ರನ್ಗೆ ಸರ್ವ ಪತನ ಕಂಡಿತು. ತಂಡದ ಪರ ಸಮೀಮಾ ಸುಲ್ತಾನ 20, ಸರ್ಮಿನ್ ಸುಲ್ತಾನ 18, ಫಹಿಮಾ ಖಾತುನ್ 14 ರನ್ ಗಳಿಸಿದರು.
ಭಾರತ ಪರ ಪ್ರೇಮಾ ರಾವತ್ 3, ತನುಜಾ ಕನ್ವರ್ ಮತ್ತು ಸೋನಿಯಾ ಮೆಂದಿಯಾ ತಲಾ 2 ವಿಕೆಟ್ ಪಡೆದರು. ಸೈಮಾ ಠಾಕೂರ್, ಮಿನ್ನು ಮಣಿ ಮತ್ತು ರಾಧಾ ಯಾದವ್ ತಲಾ ಒಂದು ವಿಕೆಟ್ ಪಡೆದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

