Breaking News

ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಹತ್ಯೆ: ಟೆಕ್ಸಾಸ್ ಶೂಟೌಟ್ ಹಿಂದೆ ಇರಾನ್ ಯುದ್ಧದ ಪ್ರತೀಕಾರ?

ಅಮೇರಿಕಾದ ಟೆಕ್ಸಾಸ್ ರಾಜ್ಯದ ಆಸ್ಟಿನ್ ನಗರದ ಜನನಿಬಿಡ ಮನೋರಂಜನಾ ವಲಯದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ 21 ವರ್ಷದ ಭಾರತೀಯ ಮೂಲದ ವಿದ್ಯಾರ್ಥಿನಿ ಸವಿತಾ ಶಾನ್ (Savitha Shan) ಸಾವನ್ನಪ್ಪಿದ್ದಾರೆ. ಈ ಭೀಕರ ಘಟನೆಯಲ್ಲಿ ಒಟ್ಟು ನಾಲ್ವರು ಮೃತಪಟ್ಟಿದ್ದು, 14ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪೊಲೀಸರ ಗುಂಡಿಗೆ ಬಲಿಯಾದ ದಾಳಿಕೋರನನ್ನು 53 ವರ್ಷದ ಎನ್ಡಿಯಾಗಾ ಡಯಾಗ್ನೆ (Ndiaga Diagne) ಎಂದು ಗುರುತಿಸಲಾಗಿದೆ. ಈತ ಸೆನೆಗಲ್ ಮೂಲದವನಾಗಿದ್ದು, ಅಮೇರಿಕಾದ ಪೌರತ್ವ ಹೊಂದಿದ್ದನು.

ದಾಳಿಕೋರನ ವಾಹನದಲ್ಲಿ ಕುರಾನ್ ಪತ್ತೆಯಾಗಿದ್ದು, ಆತ ಧರಿಸಿದ್ದ ಬಟ್ಟೆಯ ಮೇಲೆ ಇರಾನ್ ಪರವಾದ ಚಿಹ್ನೆಗಳು ಇದ್ದವು ಎಂದು ಎಫ್‌ಬಿಐ (FBI) ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದು ಇರಾನ್ ಮೇಲೆ ಅಮೇರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ದಾಳಿಗೆ ಪ್ರತಿಯಾಗಿ ನಡೆಸಿದ ‘ಲೋನ್ ವುಲ್ಫ್’ (Lone Wolf) ಮಾದರಿಯ ಭಯೋತ್ಪಾದನಾ ದಾಳಿ ಇರಬಹುದು ಎಂದು ಶಂಕಿಸಲಾಗಿದೆ.ಸವಿತಾ ಅವರು ಆಸ್ಟಿನ್ ನಿವಾಸಿಯಾಗಿದ್ದು, ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದರು. ಭಾನುವಾರ ರಾತ್ರಿ ಗೆಳೆಯರೊಂದಿಗೆ ಹೊರಗಡೆ ಇದ್ದಾಗ ದಾಳಿಕೋರರು ನಡೆಸಿದ ದಾಳಿಗೆ ಇವರು ಬಲಿಯಾಗಿದ್ದಾರೆ.

Advertisement

ಇದನ್ನೂ ಓದಿ: ಅಬುಧಾಬಿಯಿಂದ ದೆಹಲಿಗೆ ಬಂದಿಳಿದ ಮೊದಲ ವಿಮಾನ; ದುಬೈನಲ್ಲಿ ಸಿಲುಕಿದವರಿಗೆ ಬಿಡುಗಡೆ ಭಾಗ್ಯ!

ಅಮೇರಿಕಾದ ಗುಪ್ತಚರ ಸಂಸ್ಥೆ ಎಫ್‌ಬಿಐ ಈ ಪ್ರಕರಣವನ್ನು “ಸಂಭವನೀಯ ಭಯೋತ್ಪಾದನಾ ಕೃತ್ಯ” ಎಂದು ಪರಿಗಣಿಸಿ ತನಿಖೆ ನಡೆಸುತ್ತಿದೆ. ಪಶ್ಚಿಮ ಏಷ್ಯಾದ ಯುದ್ಧದ ಕಿಚ್ಚು ಈಗ ಅಮೇರಿಕಾದ ಬೀದಿಗಳಲ್ಲಿ ಅಮಾಯಕರ ಪ್ರಾಣ ಪಡೆಯುತ್ತಿರುವುದು ಜಾಗತಿಕವಾಗಿ ಕಳವಳ ಮೂಡಿಸಿದೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು