ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆ ಇಂಡಿಯನ್ ಆಯಿಲ್ನ ‘ವನ್ ಆ್ಯಪ್’ ಪ್ಲೇಸ್ಟೋರ್ನಲ್ಲಿ ಅತಿ ಹೆಚ್ಚು ಡೌನ್ಲೋಡ್ ಆಗಿರುವ ಆ್ಯಪ್ ಆಗಿ ಮೊದಲ ಸ್ಥಾನಕ್ಕೇರಿದೆ. ಇದು ಚ್ಯಾಟ್ಜಿಪಿಟಿ ಸೇರಿದಂತೆ ಹಲವು ಜನಪ್ರಿಯ ಆ್ಯಪ್ಗಳನ್ನು ಮೀರಿಸಿ ಟಾಪ್ ಚಾರ್ಟ್ನಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.
ಇತ್ತೀಚೆಗೆ ಎಕ್ಸ್ (ಟ್ವಿಟರ್) ಬಳಕೆದಾರರೊಬ್ಬರು ಈ ವಿಚಾರವನ್ನು ಗಮನಕ್ಕೆ ತಂದಿದ್ದು, ವನ್ ಆ್ಯಪ್ ಪ್ಲೇಸ್ಟೋರ್ನ ಟಾಪ್ ಡೌನ್ಲೋಡ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದನ್ನು ಉಲ್ಲೇಖಿಸಿದ್ದಾರೆ. ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ಡೌನ್ಲೋಡ್ ಆಗುತ್ತಿರುವುದರಿಂದ ಆ್ಯಪ್ನ ಕೆಲ ಫೀಚರ್ಗಳು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುವಲ್ಲಿ ಸಮಸ್ಯೆ ಎದುರಾಗುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಎಲ್ಪಿಜಿ ಕೊರತೆ ತೀವ್ರ: ಕರಾವಳಿಯಲ್ಲಿ ಹೋಟೆಲ್ಗಳು ಬಂದ್, ಮದುವೆ ಮಂದಿರಗಳಿಗೆ ಸಂಕಷ್ಟ
ಈ ವನ್ ಆ್ಯಪ್ ಮೂಲಕ ಇಂಡೇನ್ ಗ್ರಾಹಕರು ಎಲ್ಪಿಜಿ ಸಿಲಿಂಡರ್ ಬುಕ್ಕಿಂಗ್, ಹೊಸ ಗ್ಯಾಸ್ ಕನೆಕ್ಷನ್ ಪಡೆಯುವುದು, ಗ್ಯಾಸ್ ಏಜೆನ್ಸಿ ಬದಲಾವಣೆ ಸೇರಿದಂತೆ ಹಲವು ಸೇವೆಗಳನ್ನು ಪಡೆಯಬಹುದು. ಆದರೆ ಗ್ಯಾಸ್ ಬುಕ್ಕಿಂಗ್ ಮಾಡಲು ಈ ಆ್ಯಪ್ ಬಳಸುವುದು ಕಡ್ಡಾಯವಲ್ಲ. ಗ್ಯಾಸ್ ಏಜೆನ್ಸಿಯ ಬುಕ್ಕಿಂಗ್ ಸಂಖ್ಯೆಗೆ ಕರೆ ಮಾಡುವ ಮೂಲಕವೂ ಸಿಲಿಂಡರ್ ಬುಕ್ ಮಾಡಬಹುದು.
ಮೊದಲು ಸಾಮಾನ್ಯವಾಗಿ 1–3 ದಿನಗಳಲ್ಲಿ ಸಿಲಿಂಡರ್ ದೊರೆಯುತ್ತಿದ್ದರೆ, ಇತ್ತೀಚೆಗೆ ಬೇಡಿಕೆ ಹೆಚ್ಚಳದ ಕಾರಣದಿಂದ ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ದೇಶದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

