Breaking News

ಆಯುರ್ವೇದದೊಂದಿಗೆ AI ಸಂಯೋಜನೆ ಅಗತ್ಯ: ಪ್ರಧಾನಿ ಮೋದಿ

ತಿರುವನಂತಪುರಂ : ಭಾರತದ ಪ್ರಾಚೀನ ಚಿಕಿತ್ಸಾ ಪದ್ಧತಿಯಾದ ಆಯುರ್ವೇದವು ಕಾಲಾತೀತವಾದ ಆರೋಗ್ಯ ವಿಜ್ಞಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಕೇರಳದ ಆರ್ಯ ವೈದ್ಯ ಶಾಲಾ ಚಾರಿಟೇಬಲ್ ಆಸ್ಪತ್ರೆಯ ಶತಮಾನೋತ್ಸವ ಕಾರ್ಯಕ್ರಮದಲ್ಲಿ ವೀಡಿಯೊ ಸಂದೇಶದ ಮೂಲಕ ಮಾತನಾಡಿದ ಅವರು, ಪ್ರಕೃತಿಯೊಂದಿಗೆ ಸಮತೋಲನ ಮತ್ತು ಸಾಮರಸ್ಯದಲ್ಲಿ ಬದುಕುವ ಮಾರ್ಗವನ್ನು ಆಯುರ್ವೇದ ಸದಾ ತೋರಿಸಿದೆ, ಎಂದು ಪ್ರಶಂಸಿಸಿದರು.

ಆಯುರ್ವೇದವನ್ನು ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (AI)ಯೊಂದಿಗೆ ಸಂಯೋಜಿಸಿ ಆಧುನೀಕರಿಸುವ ಅಗತ್ಯವಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ರೋಗನಿರೋಧಕ ಆರೋಗ್ಯದ ತತ್ವವನ್ನು ಕಾಪಾಡುತ್ತಾ‌ ಮುಂದುವರಿಯಬೇಕೆಂಬುದೇ ರಾಷ್ಟ್ರೀಯ ಆಯುಷ್ ಮಿಷನ್ ಹಾಗೂ ದೇಶಾದ್ಯಂತ ಸ್ಥಾಪಿತವಾಗಿರುವ 12,000ಕ್ಕೂ ಹೆಚ್ಚು ಆಯುಷ್ ವೆಲ್‌ನೆಸ್ ಕೇಂದ್ರಗಳ ಉದ್ದೇಶವಾಗಿದೆ ಎಂದರು.

Advertisement

ಇದನ್ನೂ ಓದಿ : Health : ಕಣ್ಣಿನ ಸಹಾಯದಿಂದ ಮಧುಮೇಹ‌ ಪತ್ತೆಹಚ್ಚುತ್ತೆ AI

ಆಸ್ಪತ್ರೆಯ ಸ್ಥಾಪಕ ವೈದ್ಯರತ್ನಂ ಪಿ.ಎಸ್. ವರಿಯರ್ ಅವರ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಿ, ಆರ್ಯ ವೈದ್ಯ ಶಾಲೆಯನ್ನು “ಭಾರತದ ಸಾಂಪ್ರದಾಯಿಕ ವೈದ್ಯಕೀಯದ ಜೀವಂತ ಪ್ರತೀಕ” ಎಂದು ಬಣ್ಣಿಸಿದರು. ಸಂಸ್ಥೆಯು 600ಕ್ಕೂ ಹೆಚ್ಚು ಆಯುರ್ವೇದ ಔಷಧಗಳನ್ನು ತಯಾರಿಸುತ್ತಿದ್ದು, 60ಕ್ಕೂ ಹೆಚ್ಚು ದೇಶಗಳಿಂದ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶತಮಾನಕ್ಕೂ ಅಧಿಕ ಕಾಲದ ದಾನ ಸೇವೆಯೇ ಸಂಸ್ಥೆಯ ಮೇಲೆ ಜನರ ನಂಬಿಕೆಯನ್ನು ಗಟ್ಟಿಗೊಳಿಸಿದೆ ಎಂದು ಹೇಳಿದರು.

ಜಾಮನಗರದಲ್ಲಿ ಸ್ಥಾಪಿತವಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ (WHO) ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರ, ಕ್ಯಾನ್ಸರ್ ಸಂಶೋಧನೆಗಾಗಿ ಉತ್ಕೃಷ್ಟತಾ ಕೇಂದ್ರ, ಗಂಗಾ ತೀರದಲ್ಲಿ ಔಷಧೀಯ ಸಸ್ಯಗಳ ಕೃಷಿ ಉತ್ತೇಜನ ಸೇರಿದಂತೆ ಹಲವು ಆಧುನಿಕ ಬೆಳವಣಿಗೆಗಳನ್ನು ಪ್ರಧಾನಿ ಉಲ್ಲೇಖಿಸಿದರು. ಇತ್ತೀಚಿನ ಯುರೋಪಿಯನ್ ಯೂನಿಯನ್ ವ್ಯಾಪಾರ ಒಪ್ಪಂದದಿಂದ ಅರ್ಹ ಭಾರತೀಯ ಆಯುಷ್ ವೈದ್ಯರು ಯೂರೋಪಿನಲ್ಲಿ ಸೇವೆ ನೀಡಲು ಅವಕಾಶ ಸಿಗಲಿದೆ ಎಂದರು.

ದೇಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು