IPL: ಸಂಜು ಸ್ಯಾಮ್ಸನ್ ಸ್ಫೊಟಕ ಬ್ಯಾಟಿಂಗ್ ಪ್ರದರ್ಶನಕ್ಕೆ ಎಂಎಸ್ ಧೋನಿ ದಾಖಲೆ ಪುಡಿ

ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ ಸಂಜು ಸ್ಯಾಮ್ಸನ್ ತಮ್ಮ ನಾಲ್ಕನೇ ಪಂದ್ಯದಲ್ಲೇ ಅದ್ಭುತ ಶತಕ ಸಿಡಿಸಿ ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿದರು. ಸ್ಯಾಮ್ಸನ್ 56 ಎಸೆತಗಳಲ್ಲಿ ಅಜೇಯ 115 ರನ್‌ಗಳ (15 ಬೌಂಡರಿ, 4 ಸಿಕ್ಸರ್) ಸ್ಪೋಟಕ ಇನ್ನಿಂಗ್ಸ್ ಆಡಿದ್ದು, ಸಿಎಸ್‌ಕೆ ಪರ ಶತಕ ಬಾರಿಸಿದ ಮೊದಲ ವಿಕೆಟ್ ಕೀಪರ್ ಎಂಬ ಐತಿಹಾಸಿಕ ಗೌರವಕ್ಕೆ ಪಾತ್ರರಾದರು.

ಸ್ಯಾಮ್ಸನ್ ಕೇವಲ 52 ಎಸೆತಗಳಲ್ಲಿ ಶತಕ ಪೂರೈಸಿ, ಚೆನ್ನೈ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದರು. ಅವರ ಈ ಶತಕ ಐಪಿಎಲ್ 2026ರ ಮೊದಲ ಶತಕವಾಗಿದ್ದು, ಈ ಹಂಗಾಮಿನಲ್ಲೇ ಸಿಎಸ್‌ಕೆ ಪರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನಗಳಲ್ಲಿ ಒಂದಾಗಿ ದಾಖಲಾಯಿತು.

Advertisement

ಧೋನಿ ದಾಖಲೆ ಪುಡಿ

ಈ ಶತಕದ ಮೂಲಕ ಸ್ಯಾಮ್ಸನ್, ಸಿಎಸ್‌ಕೆ ಪರ ವಿಕೆಟ್ ಕೀಪರ್ ಆಗಿ ಒಂದೇ ಇನ್ನಿಂಗ್ಸ್‌ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನೂ ತಮ್ಮ ಹೆಸರಿಗೆ ಸೇರಿಸಿಕೊಂಡರು. 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎಂ.ಎಸ್. ಧೋನಿ ಬಾರಿಸಿದ್ದ 84 ರನ್‌ಗಳ ದಾಖಲೆಯನ್ನು ಸ್ಯಾಮ್ಸನ್ ಮೀರಿಸಿ ಹೊಸ ದಾಖಲೆ ಸ್ಥಾಪಿಸಿದರು.

ಇದನ್ನೂ ಓದಿ: IPL: ಸಂಜು ಶತಕದ ಆರ್ಭಟಕ್ಕೆ ಥಂಡಾ ಹೊಡೆದ ಡೆಲ್ಲಿ ಬೌಲರ್ಸ್, CSKಗೆ ಭರ್ಜರಿ ಗೆಲುವು

Advertisement

ಮೂರು ತಂಡಗಳ ಪರ ಶತಕ ಸಾಧನೆ

ಇನ್ನು ಸ್ಯಾಮ್ಸನ್ ಐಪಿಎಲ್‌ನಲ್ಲಿ ಮೂರು ವಿಭಿನ್ನ ತಂಡಗಳ ಪರ ಶತಕ ಬಾರಿಸಿದ ಎರಡನೇ ಬ್ಯಾಟರ್ ಎಂಬ ವಿಶಿಷ್ಟ ಸಾಧನೆಗೂ ಪಾತ್ರರಾದರು. ಅವರು ದೆಹಲಿ ಕ್ಯಾಪಿಟಲ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ಈಗ ಚೆನ್ನೈ ಸೂಪರ್ ಕಿಂಗ್ಸ್ ಪರ ಶತಕ ದಾಖಲಿಸಿದ್ದಾರೆ.

ಈ ಸಾಧನೆಯನ್ನು ಮೊದಲು ಸಾಧಿಸಿದ್ದವರು ಕೆಎಲ್ ರಾಹುಲ್. ಅವರು ಪಂಜಾಬ್ ಕಿಂಗ್ಸ್, ಲಖ್ನೌ ಸೂಪರ್ ಜೈಂಟ್ಸ್ ಹಾಗೂ ದೆಹಲಿ ಕ್ಯಾಪಿಟಲ್ಸ್ ಪರ ಶತಕ ಬಾರಿಸಿ ದಾಖಲೆ ನಿರ್ಮಿಸಿದ್ದರು.

Advertisement

ನಾಲ್ಕನೇ ಶತಕ, ಸಿಎಸ್‌ಕೆ ಪರ ಮೊದಲದು

ಈ ಇನ್ನಿಂಗ್ಸ್ ಸಂಜು ಸ್ಯಾಮ್ಸನ್ ಅವರ ಐಪಿಎಲ್ ವೃತ್ತಿಜೀವನದ ನಾಲ್ಕನೇ ಶತಕವಾಗಿದ್ದು, ಸಿಎಸ್‌ಕೆ ಪರ ಮೊದಲ ಶತಕವಾಗಿದೆ. ಸ್ಯಾಮ್ಸನ್ ಅವರ ಈ ಸ್ಪೋಟಕ ಬ್ಯಾಟಿಂಗ್ ಸಿಎಸ್‌ಕೆ ಶಿಬಿರಕ್ಕೆ ಹೊಸ ಉತ್ಸಾಹ ತುಂಬಿದ್ದು, ಮುಂದಿನ ಪಂದ್ಯಗಳಿಗೂ ಭರವಸೆ ಮೂಡಿಸಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು