ಪಿಸಿಎ ನ್ಯೂ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ತಂಡ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರ ಮಾರ್ಕಸ್ ಸ್ಟೊಯಿನಿಸ್ ಅಜೇಯ 62 ರನ್‌ಗಳಿಸಿ ಮಿಂಚಿದರೆ, ಪ್ರಭಸಿಮ್ರನ್ ಸಿಂಗ್ 59 ರನ್‌ಗಳಿಸಿದರು. ಪ್ರಿಯಾಂಶ್ ಆರ್ಯ 29, ಕೂಪರ್ ಕಾನೋಲಿ 30 ಹಾಗೂ ನಾಯಕ ಶ್ರೇಯಸ್ ಅಯ್ಯರ್ 30 ರನ್‌ಗಳ ಕೊಡುಗೆ ನೀಡಿದರು. ಸೂರ್ಯಾಂಶ್ ಶೆಡ್ಜ್ ಅಜೇಯ 3 ರನ್ ಗಳಿಸಿದರು.

ರಾಜಸ್ಥಾನದ ಪರ ಯಶ್ ಪುಂಜಾ 2 ವಿಕೆಟ್ ಪಡೆದು ಗಮನಸೆಳೆದರೆ, ಜೋಫ್ರಾ ಆರ್ಚರ್ ಮತ್ತು ನಾಂದ್ರೆ ಬರ್ಗರ್ ತಲಾ 1 ವಿಕೆಟ್ ಕಬಳಿಸಿದರು.
ಇದನ್ನೂ ಓದಿ: IPL: ಟೈ ಆದ ರೋಚಕ ಪಂದ್ಯ: ಥ್ರಿಲ್ಲಿಂಗ್ ಪಂದ್ಯದಲ್ಲಿ ಲಕ್ನೋ ವಿರುದ್ಧ ಗೆದ್ದ ಕೋಲ್ಕತ್ತಾ

223 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್, ಕೇವಲ 19.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 228 ರನ್ ಬಾರಿಸಿ ರೋಚಕ ಗೆಲುವು ದಾಖಲಿಸಿತು.
ಯಶಸ್ವಿ ಜೈಸ್ವಾಲ್ 51 ರನ್‌ಗಳಿಸಿ ಉತ್ತಮ ಆರಂಭ ಒದಗಿಸಿದರೆ, ಡೊನೊವನ್ ಫೆರೀರಾ ಅಜೇಯ 52 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು. ವೈಭವ್ ಸೂರ್ಯವಂಶಿ 43, ರಿಯಾನ್ ಪರಾಗ್ 29, ಶುಭಂ ದುಬೆ ಅಜೇಯ 31 ರನ್‌ಗಳಿಸಿ ಬೆಂಬಲಿಸಿದರು. ಧ್ರುವ್ ಜುರೆಲ್ 16 ರನ್ ಗಳಿಸಿದರು.
ಪಂಜಾಬ್ ಪರ ಯುಜ್ವೇಂದ್ರ ಚಾಹಲ್ 3 ವಿಕೆಟ್ ಪಡೆದು ಹೋರಾಟ ತೋರಿದರೆ, ಅರ್ಷದೀಪ್ ಸಿಂಗ್ 1 ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

