ಬರ್ಸಪುರ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ ಮೂರನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ರಾಜಸ್ಥಾನ ರಾಯಲ್ಸ್ (RR) ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್‌ಕೆ ತಂಡ 19.4 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 127 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಜೇಮಿ ಓವರ್ಟನ್ 43 ರನ್‌ಗಳೊಂದಿಗೆ ಟಾಪ್ ಸ್ಕೋರರ್ ಆಗಿ ಉಳಿದರು. ಕಾರ್ತಿಕ್ ಶರ್ಮಾ 18, ಸರ್ಫರಾಜ್ ಖಾನ್ 17 ರನ್‌ಗಳ ಸಹಾಯ ನೀಡಿದರು.

ಇನ್ನು, ಸಂಜು ಸ್ಯಾಮ್ಸನ್ 6, ರುತುರಾಜ್ ಗಾಯಕ್ವಾಡ್ 6, ಶಿವಂ ದುಬೆ 6 ರನ್ ಗಳಿಸಿದರು. ಆಯುಷ್ ಮ್ಹಾತ್ರೆ ಶೂನ್ಯ ಸುತ್ತಿದರು. ಉಳಿದಂತೆ ಮ್ಯಾಟ್ ಶಾರ್ಟ್ 2, ನೂರ್ ಅಹ್ಮದ್ 1, ಮ್ಯಾಟ್ ಹೆನ್ರಿ 5 ಹಾಗೂ ಅನ್ಶುಲ್ ಕಾಂಬೋಜ್ 7 ರನ್ ಗಳಿಸಿದರು.
ಇದನ್ನೂ ಓದಿ: IPL: ರೋಹಿತ್ ಶರ್ಮಾ, ರಯಾನ್ ಅಬ್ಬರ; ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್‌ಗೆ ಭರ್ಜರಿ ಗೆಲುವು

ಆರ್‌ಆರ್ ಪರ ನಂದ್ರೆ ಬರ್ಗರ್, ರವೀಂದ್ರ ಜಡೆಜಾ ಹಾಗೂ ಜೋಫ್ರಾ ಆರ್ಚರ್ ತಲಾ 2 ವಿಕೆಟ್ ಕಬಳಿಸುವ ಮೂಲಕ ಸಿಎಸ್‌ಕೆ ತಂಡವನ್ನು ಅಲ್ಪ ಮೊತ್ತಕ್ಕೆ ಸೀಮಿತಗೊಳೊಸುವಲ್ಲಿ ಕಾರಣಕರ್ತರಾದರು. ಸಂದೀಪ್ ಶರ್ಮಾ, ಬ್ರಿಜೇಶ್ ಶರ್ಮಾ ಹಾಗೂ ರವಿ ಬಿಶ್ನೋಯಿ ತಲಾ 1 ವಿಕೆಟ್ ಕಬಳಿಸಿದರು.
128 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ 12.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು 128 ರನ್ ಗಳಿಸಿ ಸುಲಭ ಜಯ ಸಾಧಿಸಿತು.

ಆರ್‌ಆರ್ ಪರ ವೈಭವ್ ಸೂರ್ಯವಂಶಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿ ಕೇವಲ 17 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳೊಂದಿಗೆ 52 ರನ್ ಸಿಡಿಸಿ ಪಂದ್ಯ ಗೆಲುವಿನ ಹೀರೋ ಆಗಿ ಹೊರಹೊಮ್ಮಿದರು. ಯಶಸ್ವಿ ಜೈಸ್ವಾಲ್ 37 ರನ್, ಧ್ರುವ್ ಜುರೆಲ್ 18 ಹಾಗೂ ರಿಯಾನ್ ಪರಾಗ್ 14 ರನ್ ಗಳಿಸಿದರು.
ಸಿಎಸ್‌ಕೆ ಬೌಲರ್ ಅನ್ಶುಲ್ ಕಾಂಬೋಜ್ 2 ವಿಕೆಟ್ ಪಡೆದರು. ಒಟ್ಟಾರೆ, ಆರ್‌ಆರ್ ಬೌಲರ್‌ಗಳ ನಿಯಂತ್ರಿತ ದಾಳಿ ಹಾಗೂ ವೈಭವ್ ಸೂರ್ಯವಂಶಿಯ ಸ್ಫೋಟಕ ಬ್ಯಾಟಿಂಗ್‌ನಿಂದ ರಾಜಸ್ಥಾನ ರಾಯಲ್ಸ್ ಸುಲಭ ಗೆಲುವು ದಾಖಲಿಸಿತು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

