IPL: ಮತ್ತೆ ಸೂರ್ಯವಂಶಿ ವೈಭವದ ಆಟ, ಲಕ್ನೋ ವಿರುದ್ಧ ರಾಜಸ್ಥಾನಕ್ಕೆ ಜಯ

IPL LSG vs RR Match Highlights kannada

ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 64ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ರಾಜಸ್ಥಾನ ರಾಯಲ್ಸ್‌ ತಂಡ 7 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ವೈಭವ್ ಸೂರ್ಯವಂಶಿ ಮತ್ತು ಧ್ರುವ್ ಜುರೆಲ್‌ ಅವರ ಅಮೋಘ ಆಟದ ನೆರವಿನಿಂದ ರಾಜಸ್ಥಾನ ಸುಲಭವಾಗಿ ಗುರಿ ಮುಟ್ಟಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 220 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

ತಂಡದ ಪರ ಮಿಚೆಲ್‌ ಮಾರ್ಷ್‌ ಅಬ್ಬರದ ಬ್ಯಾಟಿಂಗ್‌ ನಡೆಸಿ ಕೇವಲ 57 ಎಸೆತಗಳಲ್ಲಿ 96 ರನ್‌ ಸಿಡಿಸಿದರು. ಅವರು ರನ್‌ ಔಟ್‌ಗೆ ಬಲಿಯಾದರು. ಜೋಶ್‌ ಇಂಗ್ಲಿಸ್‌ 60 ರನ್‌ಗಳ ಅಮೂಲ್ಯ ಕೊಡುಗೆ ನೀಡಿದರೆ, ನಾಯಕ ರಿಷಭ್‌ ಪಂತ್‌ 35 ರನ್‌ ಗಳಿಸಿದರು. ನಿಕೋಲಸ್‌ ಪೂರನ್‌ 16 ರನ್‌ ಗಳಿಸಿದರೆ, ಆಯುಷ್‌ ಬಡೋನಿ ಶೂನ್ಯಕ್ಕೆ ಔಟ್‌ ಆದರು. ಅಬ್ದುಲ್‌ ಸಮದ್‌ ಅಜೇಯರಾಗಿ ಉಳಿದರು.

ಇದನ್ನೂ ಓದಿ: IPL: ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್; ಚೆನ್ನೈ ವಿರುದ್ಧ ಎಸ್‌ಆರ್‌ಎಚ್‌ಗೆ ಭರ್ಜರಿ ಜಯ

ರಾಜಸ್ಥಾನ ಪರ ಯಶ್‌ ಪುಂಜಾ 2 ವಿಕೆಟ್‌ ಕಬಳಿಸಿದರೆ, ಜೋಫ್ರಾ ಆರ್ಚರ್‌ 1 ವಿಕೆಟ್‌ ಪಡೆದರು. 221 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್‌ ತಂಡ ಕೇವಲ 19.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 225 ರನ್‌ ಬಾರಿಸಿ ಭರ್ಜರಿ ಜಯ ಸಾಧಿಸಿತು.

ರಾಜಸ್ಥಾನದ ಗೆಲುವಿನಲ್ಲಿ ಯುವ ಬ್ಯಾಟರ್‌ ವೈಭವ್ ಸೂರ್ಯವಂಶಿ ಸ್ಫೋಟಕ ಆಟ ಪ್ರದರ್ಶಿಸಿ ಕೇವಲ 38 ಎಸೆತಗಳಲ್ಲಿ 7 ಬೌಂಡರಿ ಹಾಗೂ 10 ಸಿಕ್ಸ್‌ಗಳ ನೆರವಿನಿಂದ 93 ರನ್‌ ಚಚ್ಚಿದರು. ಯಶಸ್ವಿ ಜೈಸ್ವಾಲ್‌ 43 ರನ್‌ಗಳ ಕಾಣಿಕೆ ನೀಡಿದರೆ, ಧ್ರುವ್‌ ಜುರೆಲ್‌ 53 ರನ್‌ ಬಾರಿಸಿ ಅಜೇಯರಾಗಿ ಉಳಿದರು. ಲ್ಹುವಾನ್‌-ಡ್ರೆ ಪ್ರಿಟೋರಿಯಸ್‌ 7 ರನ್‌ಗಳಿಗೆ ರನ್‌ ಔಟ್‌ ಆದರೆ, ಡೊನೊವನ್‌ ಫೆರೀರಾ 16 ರನ್‌ಗಳೊಂದಿಗೆ ಅಜೇಯರಾಗಿದ್ದರು. ಲಕ್ನೋ ಪರ ಆಕಾಶ್‌ ಸಿಂಗ್‌ ಹಾಗೂ ಮೊಹ್ಸಿನ್‌ ಖಾನ್‌ ತಲಾ 1 ವಿಕೆಟ್‌ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು