IPL: ಇಶಾನ್ ಕಿಶಾನ್ ಸ್ಫೋಟಕ ಬ್ಯಾಂಟಿಗ್; ಹಿಂಗೆ, ಸಕೀಬ್ ಬೌಲಿಂಗ್ ಕಮಾಲ್, ರಾಯಲ್ಸ್ ವಿರುದ್ಧ ಗೆದ್ದುಬೀಗಿದ SRH

ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ನ 21ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ರಾಜಸ್ಥಾನ ರಾಯಲ್ಸ್ ವಿರುದ್ಧ 57 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ, 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್‌ಗಳ ಬೃಹತ್ ಮೊತ್ತ ಪೇರಿಸಿತು.

Advertisement

ತಂಡದ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಇಶಾನ್ ಕಿಶಾನ್ 44 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್‌ಗಳ ನೆರವಿನಿಂದ 91 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರು. ಇವರಿಗೆ ಹೆನ್ರಿಕ್ ಕ್ಲಾಸೆನ್ (46) ಉತ್ತಮ ಬೆಂಬಲ ನೀಡಿದರು. ಉಳಿದಂತೆ ಟ್ರಾವಿಸ್ ಹೆಡ್ 18, ನಿತೀಶ್ ಕುಮಾರ್ ರೆಡ್ಡಿ 28, ಸಲೀಲ್ ಅರೋರಾ 24* ಮತ್ತು ಅನಿಕೇತ್ ಶರ್ಮಾ 6 ರನ್ ಗಳಿಸಿದರು. ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಶೂನ್ಯಕ್ಕೆ ಔಟ್ ಆದರು.

ಇದನ್ನೂ ಓದಿ: IPL: ಮುಂಬೈ ಬೌಲರ್ಸ್ ದಂಡಿಸಿದ ಸಾಲ್ಟ್, ರಜತ್, ಕೊಹ್ಲಿ! RCBಗೆ ಭರ್ಜರಿ ಗೆಲುವು

Advertisement

ರಾಜಸ್ಥಾನ ಪರ ಜೋಫ್ರಾ ಆರ್ಚರ್ 2 ವಿಕೆಟ್ ಪಡೆದರೆ, ರಿಯಾನ್ ಪರಾಗ್, ಸಂದೀಪ್ ಶರ್ಮಾ ಹಾಗೂ ತುಷಾರ್ ದೇಶಪಾಂಡೆ ತಲಾ 1 ವಿಕೆಟ್ ಪಡೆದರು.

217 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ, 19 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 159 ರನ್ ಗಳಿಸಲಷ್ಟೇ ಶಕ್ತವಾಯಿತು.

Advertisement

ತಂಡದ ಪರ ಡೊನಾವನ್ ಫೆರೀರಾ 69 ರನ್ ಹಾಗೂ ರವೀಂದ್ರ ಜಡೇಜಾ 45 ರನ್ ಗಳಿಸಿ ಹೋರಾಟ ನಡೆಸಿದರೂ, ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ಯಶಸ್ವಿ ಜೈಸ್ವಾಲ್ 1 ರನ್ ಗಳಿಸಿದರು. ಪ್ರತಿಪಂದ್ಯದಲ್ಲೂ ಮಿಂಚುತ್ತಿದ್ದ ವೈಭವ್ ಸೂರ್ಯವಂಶಿ ಶೂನ್ಯಕ್ಕೆ ಔಟ್ ಆದರು. ಧ್ರುವ್ ಜುರೆಲ್, ರವಿ ಬಿಷ್ಣೋಯಿ ಹಾಗೂ ಲ್ಹುವಾನ್-ಡ್ರೆ ಪ್ರಿಟೋರಿಯಸ್ ಕೂಡ ಶೂನ್ಯಕ್ಕೆ ಔಟ್ ಆದರು.

ಉಳಿದಂತೆ ರಿಯಾನ್ ಪರಾಗ್ 4, ಜೋಫ್ರಾ ಆರ್ಚರ್ 2, ತುಷಾರ್ ದೇಶಪಾಂಡೆ 25 ಹಾಗೂ ನಾಂಡ್ರೆ ಬರ್ಗರ್ 3* ರನ್ ಗಳಿಸಿದರು.

ಸನ್‌ರೈಸರ್ಸ್ ಪರ ಪ್ರಫುಲ್ ಹಿಂಗೆ 4 ವಿಕೆಟ್ ಪಡೆದು ಮಿಂಚಿದರೆ, ಸಕೀಬ್ ಹುಸೇನ್ 4 ಮತ್ತು ಎಶಾನ್ ಮಾಲಿಂಗ 2 ವಿಕೆಟ್ ಪಡೆದರು.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು