Breaking News

ದುಬೈ ಮೇಲೆ ಇರಾನ್ ಕ್ಷಿಪಣಿ ದಾಳಿ – ಭಾರಿ ಸ್ಫೋಟದ ಬಗ್ಗೆ ವಿಡಿಯೋ ಹಂಚಿಕೊಂಡ ದುಬೈನಲ್ಲಿ ನೆಲೆಸಿರುವ ಬಂಟ್ವಾಳದ ನಿವಾಸಿ

ದುಬೈ: ಇಸ್ರೇಲ್ ಮತ್ತು ಅಮೆರಿಕದ ದಾಳಿಗೆ ಪ್ರತಿಯಾಗಿ ಇರಾನ್ ಈಗ ಯುದ್ಧವನ್ನು ಗಲ್ಫ್ ರಾಷ್ಟ್ರಗಳಿಗೆ ವಿಸ್ತರಿಸಿದ್ದು, ಇಂದು ರಾತ್ರಿ ದುಬೈನ ಅತ್ಯಂತ ಪ್ರತಿಷ್ಠಿತ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಭಾರತೀಯ ಕಾಲಮಾನ ರಾತ್ರಿ 8:26ಕ್ಕೆ (ದುಬೈ ಕಾಲಮಾನ ಸಂಜೆ 6:56) ಈ ಭೀಕರ ಘಟನೆ ಸಂಭವಿಸಿದೆ.  10 ಗಂಟೆಗೆ ಮತ್ತೆ ದಾಳಿ ನಡೆದಿದ್ದು, ಎರಡು ಶೆಲ್ ಗಳು ಅಪ್ಪಳಿಸಿವೆ.  ಪ್ರವಾಸಿಗರ ನೆಚ್ಚಿನ ತಾಣಗಳಾದ ಪಾಲ್ಮ್ ಜುಮೇರಾ , ದುಬೈ ಮರೀನಾ (Dubai Marina), ಜುಮೇರಾ (Jumeirah) ಮತ್ತು ದುಬೈ ಹಿಲ್ಸ್ ಮಾಲ್ (Dubai Hills Mall) ಪ್ರದೇಶಗಳ ಮೇಲೆ ಕ್ಷಿಪಣಿಗಳು ಬಿದ್ದಿವೆ. ಈ ಬಗ್ಗೆ ದುಬೈನಲ್ಲಿ ನೆಲೆಸಿರುವ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ನಿವಾಸಿಯೊಬ್ಬರು G1Newsಗೆ ತಿಳಿಸಿದ್ದಾರೆ.

ಆಗಸದಿಂದ ಸುಮಾರು 7 ಶೆಲ್ ಗಳು ಹಾರಿ ಬರುವುದು ಕಣ್ಣಿಗೆ ಕಂಡಿದೆ. ಇವುಗಳಲ್ಲಿ 4 ಶೆಲ್ ಗಳು ನೇರವಾಗಿ ಜನನಿಬಿಡ ಕಟ್ಟಡಗಳಿಗೆ ಅಪ್ಪಳಿಸಿವೆ. ಕಟ್ಟಡಗಳಿಗೆ ಶೆಲ್ ಅಪ್ಪಳಿಸಿದ ತಕ್ಷಣ ಇಡೀ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಬೆಂಕಿ ಕಾಣಿಸಿಕೊಂಡಿದೆ. ಪಾಲ್ಮ್ ಜುಮೇರಾದಲ್ಲಿರುವ ಫೇರ್‌ಮಾಂಟ್ ಹೋಟೆಲ್‌ (Fairmont Hotel) ಗೆ ಹಾನಿಯಾಗಿದೆ . ಜನ ಸಂಚಾರ ಸ್ಥಗಿತವಾಗಿದ್ದು, ಬಾಲ್ಕನಿಗಳಲ್ಲಿ ನಿಂತು ಜನರು ಆಕಾಶವನ್ನೇ ನೋಡುತ್ತಿದ್ದಾರೆ.

Advertisement

ಇದನ್ನೂ ಓದಿ: ಯಾರು ಮನೆಯಿಂದ ಹೊರ ಬರಬೇಡಿ: ಇರಾನ್, ಕತಾರ್, ಇಸ್ರೇಲ್​​​ನಲ್ಲಿರುವ ಭಾರತೀಯ ಪ್ರಜೆಗಳಿಗೆ ‘ರೆಡ್ ಅಲರ್ಟ್’

ಇಲ್ಲಿದೆ ನೋಡಿ ವಿಡಿಯೋ:

ದಾಳಿ ನಡೆದ ತಕ್ಷಣ ಸುಮಾರು 30 ನಿಮಿಷಗಳ ಕಾಲ ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳದ ವಾಹನಗಳು ಸೈರನ್ ಮೊಳಗಿಸುತ್ತಾ ಇಡೀ ನಗರಾದ್ಯಂತ ಸಂಚರಿಸಿವೆ. ಪ್ರಸ್ತುತ ದುಬೈ ಪೊಲೀಸರು ಮತ್ತು ಭದ್ರತಾ ಪಡೆಗಳು ಈ ಪ್ರದೇಶಗಳನ್ನು ತಮ್ಮ ಸುಪರ್ದಿಗೆ ಪಡೆದಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸುತ್ತಿದ್ದಾರೆ.

ವಿದೇಶ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು