ಜೆರುಸಲೇಮ್: ಇರಾನ್ ನ ರಾಜಧಾನಿ ಟೆಹ್ರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ದಾಳಿ ನಡೆಸಿದೆ. ಶನಿವಾರ ಬೆಳಗ್ಗೆ ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ಇಸ್ರೇಲ್ ದಾಳಿಯನ್ನು ಪ್ರಾರಂಭಿಸಿದ್ದು, ಸ್ಫೋಟಗಳ ಶಬ್ಧಗಳು ಕೇಳಿಬಂದಿವೆ.
ಸ್ಫೋಟಕ್ಕೆ ಇಡೀ ನಗರವೇ ನಡುಗಿದೆ. ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ನಿವಾಸದ ಮೇಲೆ ಭಾರಿ ಪ್ರಮಾಣದ ದಾಳಿ ನಡೆಸಲಾಗಿದೆ.

ಇದನ್ನೂ ಓದಿ: ನಗು ಚೆಲ್ಲುತ್ತಾ ಗಂಡನ ಮನೆಗೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ: ವಿಜಯ್ ದೇವರಕೊಂಡ ಕುಟುಂಬದಿಂದ ಅದ್ಧೂರಿ ಸ್ವಾಗತ!
ಗುಪ್ತಚರ ಸಂಸ್ಥೆಯ ಕಚೇರಿ, ಭದ್ರತಾ ಪಡೆಗಳ ನೆಲೆಗಳ ಮೇಲೂ ದಾಳಿ ನಡೆದಿದೆ ಎನ್ನಲಾಗಿದೆ. ಇರಾನ್ನ 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಾಂಬ್ ಸ್ಫೋಟದ ಸದ್ದು ಕೇಳಿಬಂದಿದೆ. ಸುಪ್ರೀಂ ನಾಯಕ 86 ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಬಳಿ ಈ ದಾಳಿ ನಡೆದಿದೆ. ಆದರೆ ಈ ವೇಳೆ ಖಮೇನಿ ಟೆಹ್ರಾನ್ನಲ್ಲಿ ಇರಲಿಲ್ಲ. ಆ ಸಮಯದಲ್ಲಿ ಅವರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿತ್ತು ಎಂದು ತಿಳಿದುಬಂದಿದೆ.
ಟೆಹ್ರಾನ್ನಲ್ಲಿ ಕನಿಷ್ಠ ಮೂರರಿಂದ ನಾಲ್ಕು ಕ್ಷಿಪಣಿ ದಾಳಿಗಳು ನಡೆದಿವೆ ಎಂದು ಹೇಳಲಾಗಿದ್ದು, ಯಾವುದೇ ಸಾವುನೋವು ಸಂಭವಿಸಿರುವ ಬಗ್ಗೆ ಇನ್ನೂ ತಿಳಿದುಬಂದಿಲ್ಲ.
ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಈ ದಾಳಿಯನ್ನು ಭೀತಿಯನ್ನು ಹೋಗಲಾಡಿಸಲು ನಡೆಸಲಾಗಿದೆ ಎಂದು ಹೇಳಿದರು. ಅದೇ ಸಮಯದಲ್ಲಿ, ಇಸ್ರೇಲ್ ಕ್ಷಿಪಣಿ ದಾಳಿ ಸಾಧ್ಯತೆ ಬಗ್ಗೆ ಎಚ್ಚರಿಸುತ್ತಿದ್ದಂತೆ ಟೆಲ್ ಅವಿವ್ನಲ್ಲಿ ಸೈರನ್ಗಳನ್ನು ಮೊಳಗಿಸಲಾಯಿತು.
ಇಸ್ರೇಲ್ನಾದ್ಯಂತ ಸೈರನ್ಗಳು ಮೊಳಗಿದ್ದು, ಜನರು ಸುರಕ್ಷಿತ ಸ್ಥಳಗಳ ಸಮೀಪದಲ್ಲೇ ಇರಬೇಕೆಂದು ಮೊಬೈಲ್ ಸಾಧನಗಳಿಗೆ ಮುಂಚಿತ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಲಾಗಿದೆ. ಇದು ಇಸ್ರೇಲ್ನತ್ತ ಕ್ಷಿಪಣಿಗಳನ್ನು ಉಡಾಯಿಸುವ ಸಾಧ್ಯತೆ ಬಗ್ಗೆ ಸಾರ್ವಜನಿಕರನ್ನು ಸಿದ್ಧಪಡಿಸಲು ಪೂರ್ವಭಾವಿ ಎಚ್ಚರಿಕೆಯಾಗಿದೆ.
ಟೆಹ್ರಾನ್ನ ಅಣು ಕಾರ್ಯಕ್ರಮದ ಕುರಿತು ಇರಾನ್ ಮತ್ತು ಅಮೆರಿಕದ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲೇ ಈ ಸ್ಫೋಟ ಸಂಭವಿಸಿದೆ. ಇರಾನ್ ತನ್ನ ಅಣು ಹಾಗೂ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮಗಳನ್ನು ಮುಂದುವರಿಸಿದರೆ ಮತ್ತೆ ದಾಳಿ ನಡೆಸುವುದಾಗಿ ಅಮೆರಿಕ ಮತ್ತು ಇಸ್ರೇಲ್ ಎರಡೂ ದೇಶಗಳು ಪದೇ ಪದೆ ಎಚ್ಚರಿಕೆ ನೀಡಿವೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

