ಮದುವೆಯಾದ ಪುರುಷ ಲಿವ್-ಇನ್ ಸಂಬಂಧ ಇಟ್ಟುಕೊಳ್ಳುವುದು ಅಪರಾಧವಲ್ಲ: ಹೈಕೋರ್ಟ್ ಮಹತ್ವದ ತೀರ್ಪು!

ಅಲಹಾಬಾದ್: ವಿವಾಹಿತ ಪುರುಷನೊಬ್ಬ ವಯಸ್ಕ ಮಹಿಳೆಯೊಂದಿಗೆ ಪರಸ್ಪರ ಒಪ್ಪಿಗೆಯಿಂದ ಲಿವ್-ಇನ್ ಸಂಬಂಧದಲ್ಲಿರುವುದು ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court) ಮಹತ್ವದ ತೀರ್ಪು ನೀಡಿದೆ.

ಉತ್ತರ ಪ್ರದೇಶದ ಶಹಜಹಾನ್‌ಪುರದ ನೇತ್ರಪಾಲ್ ಎಂಬ ವಿವಾಹಿತ ವ್ಯಕ್ತಿ ಅನಾಮಿಕಾ ಎಂಬ 18 ವರ್ಷ ಮೇಲ್ಪಟ್ಟ ಯುವತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದರು. ಇದನ್ನು ವಿರೋಧಿಸಿ ಯುವತಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ತಮ್ಮ ವಿರುದ್ಧದ ಪೊಲೀಸ್ ಪ್ರಕರಣವನ್ನು ರದ್ದುಗೊಳಿಸುವಂತೆ ಮತ್ತು ತಮಗೆ ರಕ್ಷಣೆ ನೀಡುವಂತೆ ಕೋರಿ ಈ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

Advertisement

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠವು, “ನೈತಿಕತೆ ಮತ್ತು ಕಾನೂನನ್ನು ಬೇರ್ಪಡಿಸಿ ನೋಡಬೇಕಿದೆ. ಸಾಮಾಜಿಕವಾಗಿ ಇದು ಸರಿಯಲ್ಲದಿರಬಹುದು, ಆದರೆ ಕಾನೂನಿನ ಪ್ರಕಾರ ಇಬ್ಬರು ವಯಸ್ಕರು ಒಪ್ಪಿಗೆಯಿಂದ ಒಟ್ಟಿಗೆ ವಾಸಿಸುವುದು ಅಪರಾಧವಲ್ಲ” ಎಂದು ಹೇಳಿದೆ. ಅಲ್ಲದೆ, ಅರ್ಜಿದಾರ ದಂಪತಿಯನ್ನು ಬಂಧಿಸದಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.

ಇದನ್ನೂ ಓದಿ: ಸಚಿವ ನರಹರಿ ಜಿರ್ವಾಳ್ ತೃತೀಯಲಿಂಗಿಯೊಬ್ಬರ ಜೊತೆ ರಾಸಲೀಲೆ: ರಾಜೀನಾಮೆಗೆ ಪಟ್ಟು ಹಿಡಿದ ವಿರೋಧ ಪಕ್ಷಗಳು!

ದಂಪತಿಗೆ ಅವರ ಕುಟುಂಬದ ಸದಸ್ಯರಿಂದ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ಥಳೀಯ ಪೊಲೀಸ್ ಮುಖ್ಯಸ್ಥರಿಗೆ ನ್ಯಾಯಾಲಯ ಸೂಚಿಸಿದೆ. ಕುಟುಂಬದ ಸದಸ್ಯರು ಅವರ ಮನೆಗೆ ಪ್ರವೇಶಿಸುವಂತಿಲ್ಲ ಅಥವಾ ಅವರನ್ನು ಯಾವುದೇ ರೀತಿಯಲ್ಲಿ ಸಂಪರ್ಕಿಸುವಂತಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು