Breaking News

Jaipur : ಇನ್ಸ್ಟಾ ಪೋಸ್ಟ್ ನಂತರ ರಾಜಸ್ಥಾನದ ಸಾಧ್ವಿ ಪ್ರೇಮ್ ಬೈಸಾ ನಿಗೂಢ ಸಾವು, ಏನಾಯ್ತು?

ಜೈಪುರ: ಪಶ್ಚಿಮ ರಾಜಸ್ಥಾನದ ಪ್ರಸಿದ್ಧ ಕಥಾವಾಚಕಿ (ಧಾರ್ಮಿಕ ಪ್ರಚಾರಕಿ) ಸಾಧ್ವಿ ಪ್ರೇಮ್ ಬೈಸಾ ಅವರ ನಿಗೂಢ ಸಾವಿನ ಬಗ್ಗೆ ಸಿಬಿಐ ತನಿಖೆಗೆ ವಹಿಸಬೇಕು ಎಂದು ಆರ್‌ಎಲ್‌ಪಿ ನಾಯಕ ಮತ್ತು ಜಾಟ್ ನಾಯಕ ಹನುಮಾನ್ ಬೇನಿವಾಲ್ ಅವರು ಒತ್ತಾಯಿಸಿದ್ದಾರೆ.

ಆರೋಗ್ಯ ಹದಗೆಟ್ಟ ಹಿನ್ನೆಲೆ ಪ್ರೇಮ್ ಬೈಸಾ ಅವರನ್ನು ಬುಧವಾರ ಸಂಜೆ ಅವರ ತಂದೆ ವೀರಮ್ ನಾಥ್ ಮತ್ತು ಸಹಾಯಕರೊಬ್ಬರು ಬೋರನಾಡ ಆಶ್ರಮದಿಂದ ಜೋಧ್‌ಪುರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಸಾಧ್ವಿ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಸಾಧ್ವಿ ಅವರನ್ನು ಉಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಅವರು ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ ಎಂದು ವೈದ್ಯ ಪ್ರವೀಣ್ ಜೈನ್ ಹೇಳಿದರು.

Advertisement

ಇದನ್ನೂ ಓದಿ : Viral Story : ಕರ್ನಾಟಕದ ಬಾಲಕನ ಇಂಗ್ಲಿಷ್ ಕಾಮೆಂಟ್ರಿಗೆ ನೆಟ್ಟಿಗರು ಫಿದಾ

ಸುದ್ದಿ ಸಂಸ್ಥೆ ಎನ್‌ಡಿಟಿವಿ ಜೊತೆ ಮಾತನಾಡಿದ ನಾಥ್, ತಾನು ಬಹಳ ದಿನಗಳಿಂದ ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿದ್ದೆ. ಹೀಗಾಗಿ ನಾವು ಆಶ್ರಮಕ್ಕೆ ಒಬ್ಬ ಕಾಂಪೌಂಡರ್ ಅನ್ನು ನೇಮಿಸಿದ್ದೆವು. ಆದರೆ ಇಂಜೆಕ್ಷನ್ ನೀಡಿದ ಐದು ನಿಮಿಷಗಳ ನಂತರ ಸಾಧ್ವಿ ಪ್ರಜ್ಞೆ ತಪ್ಪಿದ್ದಾರೆ ಎಂದು ಹೇಳಿದರು.

ಇದರ ಬೆನ್ನಲ್ಲೇ ಪೊಲೀಸರು ಕಾಂಪೌಂಡರ್‌ನನ್ನು ಬಂಧಿಸಿದ್ದು, ಆತನ ವೈದ್ಯಕೀಯ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. “ಪ್ರೇಮ್ ಬೈಸಾ ಅವರ ನಿಗೂಢ ಸಾವಿನ ಬಗ್ಗೆ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಮತ್ತು ರಾಜಸ್ಥಾನ ಪೊಲೀಸ್ ಮಹಾನಿರ್ದೇಶಕರು ಗಮನಹರಿಸಬೇಕು ಎಂದು ಹನುಮಾನ್ ಬೇನಿವಾಲ್ ಹೇಳಿದ್ದಾರೆ. ಅಲ್ಲದೆ, ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು” ಎಂದಿದ್ದಾರೆ.

ಸಾವಿಗೂ ಮುನ್ನ ಇನ್ಸ್ಟಾಗ್ರಾಮ್ ಪೋಸ್ಟ್ ;

ಸಾವಿನ ಸುಮಾರು ನಾಲ್ಕು ಗಂಟೆಗಳ ಮುನ್ನ ಸಾಧ್ವಿ ಅವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿರುವ ಪೋಸ್ಟ್ ಅನುಮಾನಕ್ಕೆ ಕಾರಣವಾಗಿದೆ. “ನಾನು ಪ್ರತಿ ಕ್ಷಣವನ್ನೂ ಸನಾತನ ಧರ್ಮದ ಪ್ರಚಾರಕ್ಕಾಗಿ ಬದುಕಿದ್ದೇನೆ. ನನ್ನ ಜೀವನದುದ್ದಕ್ಕೂ, ವಿಶ್ವದ ಯೋಗ ಗುರುಗಳಾದ ಆದಿ ಜಗದ್ಗುರು ಶಂಕರಾಚಾರ್ಯರು ಮತ್ತು ಪೂಜ್ಯ ಸಂತರು ಮತ್ತು ಋಷಿಗಳ ಆಶೀರ್ವಾದವನ್ನು ಪಡೆದಿದ್ದೇನೆ. ನಾನು ಈ ಜಗತ್ತಿಗೆ ಶಾಶ್ವತವಾಗಿ ವಿದಾಯ ಹೇಳುತ್ತಿದ್ದೇನೆ. ಆದರೆ ನನಗೆ ದೇವರು ಮತ್ತು ಪೂಜ್ಯ ಸಂತರು ಮತ್ತು ಋಷಿಗಳಲ್ಲಿ ಸಂಪೂರ್ಣ ನಂಬಿಕೆಯಿದೆ. ನನ್ನ ಜೀವಿತಾವಧಿಯಲ್ಲಿ ಇಲ್ಲದಿದ್ದರೆ, ನನ್ನ ಮರಣದ ನಂತರ, ನನಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆ” ಎಂದು ಬರೆದು ಫೋಟೋ ಹಂಚಿಕೊಂಡಿದ್ದಾರೆ.

ದೇಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು