ಕಲ್ಯಾಣಿ: ದೇಶಿ ಕ್ರಿಕೆಟ್ ಇತಿಹಾಸದಲ್ಲಿ ಮೊತ್ತ ಮೊದಲ ಬಾರಿಗೆ ಫೈನಲ್ ಪ್ರವೇಶಿಸುವ ಮೂಲಕ ಜಮ್ಮು ಕಾಶ್ಮೀರ ತಂಡ ಇತಿಹಾಸ ನಿರ್ಮಿಸಿದೆ. ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಈ ಮೈಲುಗಲ್ಲು ಸೃಷ್ಟಿಸಿದೆ.
1960 ರಿಂದ ದೇಶಿ ಕ್ರಿಕೆಟ್ ಆಡುತ್ತಿರುವ ಜಮ್ಮು ಕಾಶ್ಮೀರ ತಂಡ ಲೀಗ್ ಹಂತದಲ್ಲೇ ಹೊರಬೀಳುತ್ತಿತ್ತು. ಕಳೆದ ಎರಡು ಸೀಸನ್‌ಗಳಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಈ ತಂಡ ಕಳೆದ ಋತುವಿನಲ್ಲಿ ಬಲಿಷ್ಠ ಮುಂಬೈ ತಂಡವನ್ನು ಸೋಲಿಸಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆದಿತ್ತು.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಮುಸ್ಲಿಮರಿಗೆ ನೀಡಿದ್ದ 5% ಮೀಸಲಾತಿ ರದ್ದು; ಸರ್ಕಾರದ ಮಹತ್ವದ ಆದೇಶ
ಈ ಬಾರಿ ಕೂಡ ಉತ್ತಮ ಪ್ರದರ್ಶನ ಮುಂದುವರೆಸಿದ ಜಮ್ಮು ಕಾಶ್ಮೀರ ತಂಡ ಲೀಗ್ ಹಂತದಲ್ಲಿ 3 ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 24 ಅಂಕಗಳನ್ನು ಪಡೆದು ಎರಡನೇ ಸ್ಥಾನ ಅಲಂಕರಿಸಿತ್ತು. ಕ್ವಾರ್ಟರ್ ಫೈನಲ್ಸ್‌ನಲ್ಲಿ ಮಧ್ಯಪ್ರದೇಶ ತಂಡವನ್ನು 56 ರನ್‌ಗಳಿಂದ ಮಣಿಸಿ ಸೆಮಿಫೈನಲ್ಸ್‌ಗೆ ಅರ್ಹತೆ ಪಡೆದಿತ್ತು.
ಬೆಂಗಾಳ ತಂಡದ ಕಲ್ಯಾಣಿಯ ಬೆಂಗಾಲ್ ಕ್ರಿಕೆಟ್ ಅಕಾಡೆಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಜಮ್ಮು ಕಾಶ್ಮೀರ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬೆಂಗಾಳ್ ಮೊದಲ ಇನ್ನಿಂಗ್ಸ್‌ನಲ್ಲಿ ಸುದೀಪ್ ಕುಮಾರ್ ಘರಾಮಿ (148) ಅವರ ಶತಕದ ನೆರವಿನಿಂದ 328 ರನ್ ಗಳಿಸಿತು. ಜಮ್ಮು ಕಾಶ್ಮೀರ ಪರ ಅಕ್ಯೂಬ್ ನಬಿ ದಾರ್ 5 ವಿಕೆಟ್ ಪಡೆದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಜಮ್ಮು ಕಾಶ್ಮೀರ ತಂಡ ಅಬ್ದುಲ್ ಸಮದ್ ಮತ್ತು ಪಾರಸ್ ಡೋಗ್ರ ಅವರ ಅರ್ಧ ಶತಕದ ನೆರವಿನಿಂದ 302 ರನ್ ಗಳಿಸಿ 26 ರನ್‌ಗಳ ಹಿನ್ನಡೆ ಪಡೆಯಿತು. ಬೆಂಗಾಳ್ ಪರ ಮೊಹಮ್ಮದ್ ಶಮಿ 8 ವಿಕೆಟ್ ಪಡೆದರು.
ಲೀಡ್‌ನೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಬೆಂಗಾಳ್ ತಂಡಕ್ಕೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡದೆ ಕೇವಲ 99 ರನ್ ಗಳಿಗೆ ಆಲೌಟ್ ಆದರು. ಅಕ್ಯೂಬ್ ನಬಿ ದಾರ್ ಮತ್ತು ಸುನಿಲ್ ಕುಮಾರ್ ತಲಾ 4 ವಿಕೆಟ್ ಪಡೆದರು.
124 ರನ್‌ಗಳ ಗುರಿ ಬೆನ್ನತ್ತಿದ ಜಮ್ಮು ಕಾಶ್ಮೀರ ತಂಡ 4 ವಿಕೆಟ್ ಕಳೆದುಕೊಂಡು ಜಯದ ಹೊಸ್ತಿಲನ್ನು ತಲುಪಿತು. ಇದರೊಂದಿಗೆ ರಣಜಿ ಟ್ರೋಫಿ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಫೈನಲ್‌ಗೆ ಪ್ರವೇಶ ಪಡೆಯಿತು.
ಕರ್ನಾಟಕ ಮತ್ತು ಉತ್ತರಖಾಂಡದ ನಡುವೆ ಪಂದ್ಯಾಟ ನಡೆಯುತ್ತಿದ್ದು, ಅದರಲ್ಲಿ ಗೆದ್ದ ತಂಡದ ವಿರುದ್ಧ ಫೆ.24 ರಂದು ಜಮ್ಮು ಕಾಶ್ಮೀರ ತಂಡ ಪ್ರಶಸ್ತಿಗಾಗಿ ಸೆಣಸಾಡಲಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

